ಅವತ್ತು ನಟ ಸುನಿಲ್ ಹಾಗೂ ನಟಿ ಮಾಲಾಶ್ರೀ ಅಲ್ಲಿಗೆ ಹೋಗಿದ್ದರು..? ಅಲ್ಲಿ ನೆಡೆದದ್ದು ಏನು ಗೊತ್ತಾ...!! - Karnataka's Best News Portal

ಅದೊಂದು ಕರಾಳ ನೆನಪು ಭೀಕರ ಘಟನೆ ಅದು ನಡೆದು ಇಂದಿಗೆ 25 ವರ್ಷಗಳೇ ಕಳೆದಿದೆ 1990 ನೇ ಇಸವಿಯಲ್ಲಿ ಶಂಕರ್ ನಾಗ್ ಸಾವಿನ ಬಳಿಕ ಅಷ್ಟೇ ಶಾಕ್ ನೀಡಿದ ಇನ್ನೊಬ್ಬ ಅಂತಹ ಪ್ರತಿಭಾನ್ವಿತ ಕಲಾವಿದನಾ ಸಾವು. ಅದು ಕೂಡ ಸೇಮ್ ಸಂಕರ್ ನಾಗ್ ಅವರ ಮಾದರಿಯಲ್ಲೇ ಆಕ್ಸಿಡೆಂಟ್ ಆಗಿ ಆ ಇನ್ನೊಬ್ಬ ನಟ ಕೂಡ ಸಾವನ್ನಪ್ಪಿದ್ದರು. 1994 ರಲ್ಲಿ ಸಂಭವಿಸಿದ ಈ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ ನಟ ಬೇರೆ ಯಾರು ಅಲ್ಲ ಕನ್ನಡದ ಒಂದು ಕಾಲದಲ್ಲಿ ಪ್ರತಿಭಾನ್ವಿತ ಹಾಗೂ ಉದಯೋನ್ಮುಖ ನಟ ಚಲನಚಿತ್ರ ರಂಗ ಕಂಡಂತಹ ಅಪರೂಪದ ಹಾಗೂ ಪ್ರತಿಭಾನ್ವಿತ ಯುವ ನಟರಲ್ಲಿ ಒಬ್ಬರು ಅವರೇ ಸುನಿಲ್. ಕೆಲವೇ ವರ್ಷದಲ್ಲಿ ಬಹುಬೇಗ ಯಶಸ್ಸಿನ ಉತ್ತುಂಗಕ್ಕೇರಿದ ನಟ. ಈ ಕಲಾವಿದನ ದೀಢಿರ್ ಸಾವು ಚಿತ್ರೋದ್ಯಮವನ್ನು ಬೆಚ್ಚಿ ಬೀಳಿಸಿತ್ತು.

ಅಗಷ್ಟೇ ಶಂಕರ ನಾಗ್ ಸಾವಿನಿಂದ ಚೇತರಿಕೆ ಕಂಡಂತಹ ಚಿತ್ರದಂಗ ಮತ್ತೆ ಅಂತಹದ್ದೆ ಮತ್ತೊಮ್ಮೆ ಇನ್ನೊಬ್ಬ ನಟರನ್ನು ಕಳೆದುಕೊಂಡು ಮಂಕಾಯಿತು. ಸುನಿಲ್ ಕೇವಲ ಐದು ವರ್ಷಗಳಲ್ಲಿ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಇನ್ನೂ ಇವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಭಾಷೆಗಳಲ್ಲಿ ಕೂಡ ತಮ್ಮ ಛಾಪನ್ನು ಮೂಡಿಸಲು ಪ್ರಾರಂಭಿಸಿದರು. ಆವತ್ತಿಗಾಗಲೇ ಕನ್ನಡದ ಸೂಪರ್ ಸ್ಟಾರ್ ನಟರ ಪೈಕಿ ಅಗ್ರಸ್ಥಾನದಲ್ಲಿ ಸುನಿಲ್ ಕೂಡ ಇದ್ದರೂ. 90 ರ ದಶಕದಲ್ಲಿ ಬಹು ಬೇಡಿಕೆಯ ನಾಯಕನಟರಾಗಿ ಇವರು ಎಲ್ಲಾ ಕಡೆ ಗುರುತಿಸಿಕೊಂಡಿದ್ದರು. ಇಷ್ಟೆಲ್ಲಾ ಹೆಸರು ಕೀರ್ತಿ ಯಶಸ್ಸನ್ನು ಗಳಿಸಿದ ನಟ ಕೇವಲ 30 ವರ್ಷಕ್ಕೆ ತಮ್ಮ ಜೀವವನ್ನು ತ್ಯಜಿಸಿ ಇಹಲೋಕದಿಂದ ಹೊರಟುಹೋದರು. ಈ ಒಂದು ಘಟನೆ ನಿಜಕ್ಕೂ ಕನ್ನಡಿಗರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಇಂದಿಗೂ ಕೂಡ ಉಳಿದಿದೆ.

By admin

Leave a Reply

Your email address will not be published. Required fields are marked *