ಇದನ್ನು ಹಚ್ಚಿದರೆ ಹಿಮ್ಮಡಿ ಒಡಕು ಒಂದೇ ದಿನದಲ್ಲಿ ಮಾಯ...ಇದನ್ನು ಒಮ್ಮೆ ಪ್ರಯತ್ನಿಸಿ.. - Karnataka's Best News Portal

ಚಳಿಗಾಲದಲ್ಲಿ ಹಿಮ್ಮಡಿ ಮತ್ತು ಪಾದಗಳ ಒಡಕು ಉಂಟಾಗುತ್ತದೆ ಈ ರೀತಿ ಒಡಕು ಉಂಟಾಗಲು ಕಾರಣ ಏನೆಂದರೆ ನಾವು ಒಂದೇ ಜಾಗದಲ್ಲಿ ನಿಂತು ಕೊಂಡು ತುಂಬಾ ಹೊತ್ತು ಕೆಲಸ ಮಾಡುತ್ತಿದ್ದರೆ ಅಥವಾ ಚಳಿಗಾಲದಲ್ಲಿ ಚಳಿಯಿಂದ ಸ್ಕಿನ್ ಗಟ್ಟಿಯಾಗುವುದರಿಂದ ಸೀಳು ಉಂಟಾಗುತ್ತದೆ. ಈ ಕ್ರಾಕ್ಸ್ ಹೆಚ್ಚಾದರೆ ಅದರಿಂದ ರಕ್ತ ಬರುವ ಸಾಧ್ಯತೆ ಕೂಡ ಇದೆ ಅಷ್ಟೇ ಅಲ್ಲದೆ ನಡೆಯುವುದಕ್ಕೂ ಕೂಡ ಆಗುವುದಿಲ್ಲ ತುಂಬಾ ನೋವು ಉಂಟಾಗುತ್ತದೆ. ಹಾಗಾಗಿ ನಾವು ಹೇಳಿದ ಮನೆಮದ್ದು ಹಚ್ಚಿದರೆ ಬೆಳಿಗ್ಗೆ ಎದ್ದು ನೋಡಿದಾಗ ತಿಳಿಯುತ್ತದೆ ಎಷ್ಟು ಬೇಗ ವಾಸಿಯಾಗುತ್ತದೆ ಈ ಬಿರುಕು ಅಂತ. ಮೊದಲಿಗೆ ಒಂದು ಬೌಲ್ ಗೆ ಒಂದು ಟೇಬಲ್ ಸ್ಪೂನ್ ವ್ಯಾಸಲೇನ್ ತೆಗೆದುಕೊಳ್ಳಿ, ನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ರೋಸ್ ವಾಟರ್ ಹಾಕಿ, ನಂತರ ಅದಕ್ಕೆ ಅರ್ಧ ಟೇಬಲ್ ಸ್ಪೂನ್ ಗ್ಲಿಸರಿನ್, ಒಂದು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ ಹಾಕಿ ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಮೊದಲು ಒಂದು ಬಕೆಟ್ ಗೆ ಸ್ವಲ್ಪ ಬಿಸಿ ನೀರು ಹಾಕಿಕೊಳ್ಳಿ ನಂತರ ಅದಕ್ಕೆ ಎರಡು ಟೇಬಲ್ ಸ್ಪೂನ್ ಉಪ್ಪನ್ನು ಹಾಕಿ, ಒಂದು ಟೇಬಲ್ ಸ್ಪೂನ್ ನಿಂಬೆ ಹಣ್ಣಿನ ರಸವನ್ನು ಹಾಕಿ, ನಂತರ ಒಂದು ಟೇಬಲ್ ಸ್ಪೂನ್ ಸಾಂಪು ಹಾಕಿ ಇವೆಲ್ಲವನ್ನೂ ಈಗ ಮಿಕ್ಸ್ ಮಾಡಿ. ನಂತರ ನಿಮ್ಮ ಪಾದಗಳನ್ನು ಬಕೆಟ್ ಒಳಗಡೆ ಇಟ್ಟು ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ನೆನೆಯಲು ಬಿಡಬೇಕು ನಂತರ ಸ್ಕ್ರಬರ್ ನ ಮೂಲಕ ಪಾದವನ್ನು ತೊಳೆದುಕೊಳ್ಳಿ. ನಂತರ ಬಟ್ಟೆಯಿಂದ ಪಾದವನ್ನು ಒರೆಸಿಕೊಳ್ಳಿ ಪಾದದಲ್ಲಿ ನೀರಿನಂಶ ಇರಬಾರದು ನಂತರ ತಯಾರಿಸಿದ ಮಿಶ್ರಣವನ್ನು ರಾತ್ರಿ ಸಮಯದಲ್ಲಿ ಪಾದಕ್ಕೆ ಹಚ್ಚಿ ಮಸಾಜ್ ಮಾಡಿ ಒಂದು ಪ್ಲಾಸ್ಟಿಕ್ ಕವರನ್ನು ಕಟ್ಟಿ ಅದರ ಮೇಲೆ ಸಾಕ್ಸ್ ಅನ್ನು ಹಾಕಿಕೊಳ್ಳಿ. ನಂತರ ನೀವು ಎಲ್ಲೂ ಓಡಾಡಬಾರದು ಒಂದು ವೇಳೆ ನೀವು ಹೆಚ್ಚಾಗಿ ಓಡಾಡಿದರೆ ಇದರಿಂದಲೂ ಸೀಳು ಹೆಚ್ಚು ಉಂಟಾಗುತ್ತದೆ.

By admin

Leave a Reply

Your email address will not be published. Required fields are marked *