ಐಷಾರಾಮಿ ಕಾರು ಖರೀದಿ ಮಾಡಿ ಅಭಿಮಾನಿಗಳಿಗೆ ಹೀಗೆ ಹೇಳಿದ ರಶ್ಮಿಕಾ ಮಂದಣ್ಣ..! ಏನದು ಗೊತ್ತಾ ವಿಷ್ಯ - Karnataka's Best News Portal

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದಂತಹ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದಾ ಯಾವುದಾದರೂ ಒಂದು ವಿಷಯಕ್ಕೆ ಚರ್ಚೆಗೆ ಒಳಗಾಗುತ್ತಾರೆ. ಕನ್ನಡ ಭಾಷೆಯಲ್ಲಿ ಬೆಳೆದು ಬಂದು ಇದೀಗ ತೆಲುಗು ಮತ್ತು ತಮಿಳಿನಲ್ಲಿ ಹೆಚ್ಚು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಕನ್ನಡಕ್ಕಿಂತ ಹೆಚ್ಚು ಪರಭಾಷಾ ಚಲನ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ ಇನ್ನು ಈಗ ಇವರು ಹೊಸದೊಂದು ಕಾರನ್ನು ಖರೀದಿ ಮಾಡಿದ್ದಾರೆ ಅಷ್ಟೇ ಅಲ್ಲದೆ ಹೊಸದೊಂದು ಮನೆಯನ್ನು ಕೂಡ ಹೈದರಾಬಾದ್ ನಲ್ಲಿ ತೆಗೆದುಕೊಂಡಿದ್ದರು. ಆದರೆ ಇದೀಗ ಹೆಚ್ಚು ಸುದ್ದಿ ಮಾಡಿರುವುದು ಹೊಸ ಕಾರು ಖರೀದಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ ಅಂತನೇ ಹೇಳಬಹುದು. ರಾಶ್ಮಿಕಾ ಗೂಗಲ್‌ನಿಂದ ನ್ಯಾಷನಲ್ ಕ್ರಶ್‌ ಎನಿಸಿಕೊಂಡದ್ದರು ಅಷ್ಟೇ ಅಲ್ಲದೆ ಈಗ ಹಿಂದಿ ಚಿತ್ರರಂಗಕ್ಕೂ ಕೂಡ ಕಾಲಿಟ್ಟಿದ್ದರೆ ಆ ಮೂಲಕ ದೊಡ್ಡ ಸದ್ದು ಕೊಡಾ ಮಾಡಿದ್ದರು. ಇದೀಗ ಮತ್ತೆ ಹೊಸದೊಂದು ಐಷಾರಾಮಿ ಕಾರು ಖರೀದಿ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.


ರಶ್ಮಿಕಾ ಮಂದಣ್ಣ ತಮ್ಮ ಹೊಸ ರೇಂಜ್ ರೋವರ್‌ ಕಾರಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಇದರ ಜೊತೆಗೆ ರಶ್ಮಿಕಾ ಒಂದಷ್ಟು ಮಾತುಗಳನ್ನು ಕೂಡ ಹೇಳಿದ್ದಾರೆ. ಅದೇನೆಂದರೆ “ಪ್ರಿಯಾ ಮಿತ್ರರೇ ನೀವು ಕೂಡ ಈ ನನ್ನ ಜೀವನದ ಪ್ರಯಾಣದ ಭಾಗವಾಗಿ ಇದ್ದೀರಿ ನಾನು ಹೆಚ್ಚಾಗಿ ಈ ವಿಚಾರಗಳನ್ನು ನನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದೆ ಆದರೆ ನಾನು ಇದನ್ನು ಈ ಸಮಯದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ಮನಃ ಸ್ಪೂರ್ತಿಯಾಗಿ ಇಷ್ಟ ಪಡುತ್ತೇನೆ ಏಕೆಂದರೆ ನೀವು ಕೂಡ ಈ ನನ್ನ ಪ್ರಯಾಣದ ಭಾಗವಾಗಿದ್ದೀರಿ ಹಾಗಾಗಿ ಈ ವಿಚಾರವನ್ನ ವಿಷಯವನ್ನು ನಿಮಗೆ ತಿಳಿಸಬೇಕೆಂದು ಬಯಸುತ್ತೇನೆ ಈ ಪ್ರಯಾಣದ ಭಾಗವಾಗಿದ್ದಕ್ಕಾಗಿ ಮತ್ತು ನಿಮ್ಮಂತೆಯೇ ನನ್ನನ್ನು ಪ್ರೀತಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಮನದಾಳದಿಂದ ಧನ್ಯವಾದಗಳು ನಿಮ್ಮೆಲ್ಲರನ್ನು ನಾನು ಪ್ರೀತಿಸುತ್ತೇನೆ” ಈ ರೀತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ.

By admin

Leave a Reply

Your email address will not be published. Required fields are marked *