ಸಾಮಾನ್ಯವಾಗಿ ಪಾರಿಜಾತದ ಎಲೆಗಳನ್ನು ನಾವು ಕೇಳಿರುತ್ತೇವೆ ಪಾರಿಜಾತದ ಎಲೆಗಳನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ ಏಕೆಂದರೆ ಮೂಳೆಗೆ ಸಂಬಂಧಿಸಿದ ನೋವಿಗೆ ಪಾರಿಜಾತದ ಎಲೆಗಳು ಬಹಳ ಉಪಯುಕ್ತವಾಗುತ್ತದೆ. ಇದನ್ನು ರಾಮಬಾಣ ಅಂತಾನೆ ಹೇಳಬಹುದು ಈ ಎಲೆಗಳಲ್ಲಿ ಹೆಚ್ಚಾಗಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಹೆಚ್ಚಾಗಿರುತ್ತದೆ ಹಾಗಾಗಿ ಈ ಒಂದು ಪಾರಿಜಾತದ ಎಲೆಗಳಿಂದ ಇಂದು ಒಂದು ಅದ್ಭುತವಾದ ಮನೆಮದ್ದನ್ನು ಮಾಡುವುದು ಹೇಗೆ ಎಂಬುದನ್ನೂ ತಿಳಿಸುತ್ತೇನೆ. ಇದನ್ನು ಸೇವಿಸುವುದರಿಂದ ನಿಮಗೆ ಎಲ್ಲಾ ರೀತಿಯಾದಂತಹ ನೋವುಗಳಿಂದ ಪರಿಹಾರ ಸಿಗುತ್ತದೆ ಮೊದಲಿಗೆ ನಾಲ್ಕರಿಂದ ಐದು ಪಾರಿಜಾತದ ಎಲೆಗಳನ್ನು ತೆಗೆದುಕೊಂಡು ಚಿಕ್ಕ ಚಿಕ್ಕದಾಗಿ ಕಟ್ ಮಾಡಿಕೊಂಡು ರಾತ್ರಿ ಸಮಯದಲ್ಲಿ ಒಂದು ಗ್ಲಾಸ್ ನೀರಿಗೆ ಎಲೆಗಳನ್ನು ಹಾಕಿ ರಾತ್ರಿಪೂರ್ತಿ ನೆನೆಯಲು ಬಿಡಬೇಕು. ನಂತರ ಬೆಳಗ್ಗೆ ಎದ್ದ ನಂತರ ಈ ನೀರು ಮತ್ತು ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ ಆ ನೀರನ್ನು ಶೋಧಿಸಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ಡಯಾಬಿಟಿಸ್ ಇರುವವರು ಕೂಡ ಕುಡಿಯಬಹುದು ಇದರಲ್ಲಿ ಹೆಚ್ಚಾಗಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಇರುವುದರಿಂದ ದೇಹಕ್ಕೆ ಇನ್ಫೇಕ್ಷನ್ ಆಗದಂತೆ ತಡೆಯುತ್ತದೆ. ಅಷ್ಟೇ ಅಲ್ಲದೆ ನಿಮಗೆ ಜ್ವರ ಬಂದರೂ ಕೂಡ ಈ ರೀತಿಯಾದಂತಹ ನೀರನ್ನು ತಯಾರಿಸಿಕೊಂಡು ಸೇವಿಸುವುದರಿಂದ ರೋಗಗಳು ಕೂಡ ಬೇಗನೆ ಉಪಶಮನವಾಗುತ್ತದೆ. ಎರಡನೇ ವಿಧಾನ ಒಂದು ಗ್ಲಾಸ್ ನೀರಿಗೆ 1 ಟೇಬಲ್ ಸ್ಪೂನ್ ಮೆಂತೆಯನ್ನು ಹಾಕಿ ಸಂಜೆಯವರೆಗೂ ನೆನೆಯಲು ಬಿಡಬೇಕು ನಂತರ ಮೆಂತೆ ನೆನೆದಿರುವ ನೀರನ್ನು ಸೇವಿಸಬೇಕು. ಈ ರೀತಿ ಮೆಂತ್ಯ ನೀರನ್ನು ಸೇವಿಸಿದರೆ ಬಹಳನೇ ಒಳ್ಳೆಯದು ಮೂಳೆಗಳನ್ನು ಗಟ್ಟಿಯನ್ನಾಗಿ ಮಾಡುತ್ತದೆ ಅಲ್ಲದೆ ಮೂಳೆ ನೋವು ಬರದಂತೆ ನೋಡಿಕೊಳ್ಳುತ್ತದೆ. ನಾವು ತಿಳಿಸಿದ ಈ ಎರಡು ವಿಧಾನಗಳನ್ನು 30 ದಿನಗಳವರೆಗೆ ಮಾಡಿದರೆ ಸಾಕು ನಿಮಗೆ ಇರುವ ಎಲ್ಲಾ ಮೂಳೆ ನೋವಿಗೆ ಪರಿಹಾರ ಸಿಗುತ್ತದೆ.
