ಕರುನಾಡ ರಾಮಾಚಾರಿಗೆ , ರಾಕಿಂಗ್ ಸ್ಟಾರ್ ನ ಜನ್ಮದಿನ ಇಂದು ಹ್ಯಾಪಿ ಬರ್ತಡೇ ಯಶ್, ಯಾರೆಲ್ಲಾ ವಿಶ್ ಮಾಡಿದ್ದಾರೆ ಮಿಸ್ ಮಾಡದೆ ನೋಡಿ... - Karnataka's Best News Portal

ಯಶ್ಜ ಜನ್ಮದಿನ ದಂದು ಬಿಡುಗಡೆ ಯಾಗಬೇಕಿದ್ದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಕೆಲ ಗಂಟೆಗಳ ಮೊದಲೇ ರಿಲೀಸ್ ಆಗಿ ಯೂಟೂಬ್ ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ. ಈಗಾಗಲೇ ಮಿಲಿಯನ್ ಗಟ್ಟಲೆ ವೀವ್ಸ್ ಗಳನ್ನು ಪಡೆದುಕೊಂಡಿದೆ ಚಿತ್ರೋದ್ಯಮದಿಂದ ಹಲವಾರು ನಟರು ರಾಕಿಂಗ್ ಸ್ಟಾರ್ ಯಶ್ ರವರಿಗೆ ಜನ್ಮದಿನದ ಶುಭಾಶಯಗಳು ತಿಳಿಸಿದ್ದಾರೆ. ಪ್ರಶಾಂತ್ ನೀಲ್ ಅವರು ಚಿತ್ರಿಸಿರುವಂತಹ ಕೆಜಿಎಫ್ ಚಾಪ್ಟರ್ ಎರಡರ ಟೀಸರ್ ಅನ್ನು ಯಶ್ ಅವರ ಹುಟ್ಟು ಹಬ್ಬದ ದಿನವೇ ರಿಲೀಸ್ ಮಾಡಬೇಕು ಅಂತ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದರು. ಆದರೆ ಕೆಲ ಕಿಡಿಗೇಡಿಗಳು ಅದಕ್ಕೂ ಮೊದಲೇ ಅದನ್ನು ಕದ್ದು ರಿಲೀಸ್ ಮಾಡಿದ್ದಾರೆ ಇದರಿಂದ ಯಶ್ ಅವರಿಗೂ ಕೂಡ ಬಹಳಷ್ಟು ಬೇಜಾರಾಗಿದೆ. ಆದರೂ ಕೂಡ ತಮ್ಮ ತಮ್ಮ ಅಭಿಮಾನಿಗಳಿಗೆ ತಮ್ನ ಶ್ರಮ ತಲುಪಿದೆ ಎಂದು ಖುಷಿ ಪಡುತ್ತಿದ್ದರು ಟೀಸರ್ ಅನ್ನು ನೋಡಿದ ಅಭಿಮಾನಿಗಳು ಬಹಳಷ್ಟು

ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಲನಚಿತ್ರ ಒಂದು ಮಹತ್ವದ ಘಟ್ಟವಾಗಿದೆ ಈ ಒಂದು ಚಲನ ಚಿತ್ರದಿಂದ ಇಡೀ ಭಾರತವೇ ನಮ್ಮ ಚಲನ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ ಹಾಗಾಗಿ ಯಶ್ ಅವರ ಹುಟ್ಟುಹಬ್ಬದಂದು ಎಲ್ಲರೂ ಕೂಡ ಅವರಿಗೆ ಶುಭಾಶಯವನ್ನು ತಿಳಿಸಿದ್ದಾರೆ. ಯಶ್ ಅವರು ಈಗಾಗಲೇ ಕುಟುಂಬದವರೊಂದಿಗೆ ಹಾಗೂ ಸ್ನೇಹಿತರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿ ದ್ದಾರೆ. ಈಗ ತಮ್ಮ ಅಭಿಮಾನಿಗಳ ಜೊತೆ ಹಾಗೂ ಚಿತ್ರರಂಗದ ಕೆಲವು ನಟರ ನಡುವೆ ಹಾಗೂ ತಮ್ಮ ಚಿತ್ರರಂಗದ ತಂಡದವರ ಜೊತೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಮುಂದಾಗಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಚಲನಚಿತ್ರರಂಗದಲ್ಲಿ ಯಶ್ ಒಂದು ಮೈಲಿ ಗಲ್ಲು ಸೃಷ್ಟಿಸಿದ್ದಾರೆ ಅಂತಾನೇ ಹೇಳಬಹುದು.

By admin

Leave a Reply

Your email address will not be published. Required fields are marked *