ನಿಮಗೆ ಹೈ ಬಿ.ಪಿ ಇದಿಯಾ ರಕ್ತದೊತ್ತಡ ಇದೆಯಾ..? ಒಮ್ಮೆ ಈ ಮನೆಮದ್ದು ಬಳಸಿನೊಡಿ..!! - Karnataka's Best News Portal

ವಯಸ್ಕರನ್ನು ಕಾಡುವ ಸಾಮಾನ್ಯ ಸಮಸ್ಯೆ ಎಂದರೆ ಹೈ ಬ್ಲಡ್ ಪ್ರಶರ್ ಬಿಪಿ ಬಂದರೆ ಅಷ್ಟು ಸುಲಭವಾಗಿ ಕಡೆಗಣಿಸಬಾರದು. ಏಕೆಂದರೆ ಇದರಿಂದ ಹಲವಾರು ಮಾರಣಾಂತಿಕ ಕಾಯಿಲೆಗಳು ಬರುತ್ತದೆ ಉದಾಹರಣೆಗೆ ಹಾರ್ಟ್ ಅಟ್ಯಾಕ್, ಸ್ಟ್ರೋಕ್ ಅಥವಾ ಪಾರ್ಶ್ವವಾಯು, ಮುಂತಾದ ಸಮಸ್ಯೆಗಳು ಬರಲು ಹೈ ಬಿಪಿ ಕಾರಣವಾತ್ತದೆ. ಹಾಗೂ ಇನ್ನೂ ಕೆಲವರಿಗೆ ಆಲ್ಕೋಹಾಲ್ ಸೇವಿಸಿದರೆ ಅಥವಾ ಧೂಮಪಾನ ಮಾಡಿದರೆ, ಅಥವಾ ಹೆಚ್ಚಾಗಿ ಯೋಚನೆ ಮಾಡಿದರೆ, ಬಿಪಿ ಬರುತ್ತದೆ. ಇನ್ನೂ ನೀವೇನಾದ್ರೂ ಹೆಚ್ಚು ದೇಹದ ತೂಕವನ್ನು ಹೊಂದಿದ್ದರೂ ಕೂಡ ಬಿ.ಪಿ ಬರುತ್ತದೆ, ಅಥವಾ ದೈಹಿಕ ವ್ಯಾಯಾಮ ಮಾಡದೇ ಇದ್ದರೆ ಅಥವಾ ಹೊರಗಿನ ತಿಂಡಿ ತಿನಿಸುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಹೀಗೆ ಮುಂತಾದ ಕಾರಣಗಳಿಂದ ಬಿಪಿ ಬರುತ್ತದೆ. ಇನ್ನು ಇದಕ್ಕೆ ಮನೆ ಮದ್ದು ಅಂದರೆ ಅಗಸೆ ಬೀಜ ಮೊದಲು ಅಗಸೆ ಬೀಜವನ್ನು ಪುಡಿ ಮಾಡಿಟ್ಟುಕೊಳ್ಳಿ.

ಪ್ರತಿನಿತ್ಯ ಒಂದು ಲೋಟ ಬಿಸಿನೀರಿಗೆ ಒಂದು ಲೋಟ ಹಾಲಿಗೆ 2 ಟೇಬಲ್ ಸ್ಪೂನ್ ಅಗಸೆ ಬೀಜದ ಪುಡಿಯನ್ನು ಹಾಕಿ ಕುಡಿಯಿರಿ ಹೀಗೆ ಮಾಡುವುದರಿಂದ ಬಿಪಿ ಕಂಟ್ರೋಲ್ ಗೆ ಬರುತ್ತದೆ. ಎರಡನೇ ವಿಧಾನ ಒಂದು ಗ್ಲಾಸ್ ಬಿಸಿ ನೀರಿಗೆ ಅರ್ಧ ಟೇಬಲ್ಸ್ಪೂನ್ ಮೆಂತೆಕಾಳನ್ನು ಹಾಕಿ ರಾತ್ರಿ ಪೂರ್ತಿ ಅದನ್ನು ನೆನೆಯಲು ಬಿಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಮೂರನೇ ವಿಧಾನ ಮೂರು ಬೆಳ್ಳುಳ್ಳಿಯನ್ನು ಜಜ್ಜಿ ಒಂದು ಗ್ಲಾಸ್ ಗೆ ಹಾಕಿ 10 ನಿಮಿಷ ಹಾಗೇ ಬಿಟ್ಟು ನಂತರ ಅರ್ಧ ಗ್ಲಾಸ್ ಬಿಸಿನೀರನ್ನು ಹಾಕಿ ನೀರು ತಣ್ಣಗಾದ ನಂತರ ಒಂದು ನಿಂಬೆ ಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಿ ನಂತರ ಜೇನುತುಪ್ಪ ಹಾಕಿ ಕುಡಿಯಿರಿ. ನಾಲ್ಕನೆಯದಾಗಿ ಬಾಳೆಹಣ್ಣನ್ನು ಪ್ರತಿನಿತ್ಯ ಹೆಚ್ಚಾಗಿ ಸೇವಿಸಿ ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಇರುವುದರಿಂದ ಬಿಪಿ ಕಂಟ್ರೋಲ್ ಮಾಡುತ್ತದೆ ಇದರ ಜೊತೆಗೆ ಹೆಚ್ಚು ಹಸಿ ತರಕಾರಿ ಮತ್ತು ಸೊಪ್ಪುಗಳನ್ನು ತಿನ್ನಿ.

By admin

Leave a Reply

Your email address will not be published. Required fields are marked *