ಕೈ ಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಇದೀಗ ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ. ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ಖರೀದಿಸಲು 15000 ಸಬ್ಸಿಡಿ ಹಣ ಸಿಗಲಿದೆ ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗಿಯನ್ನಾಗಿ ಮಾಡಲು ಇದೀಗ ಕೈ ಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಉಚಿತವಾಗಿ ಹೊಲಿಗೆ ಯಂತ್ರವನ್ನು ಖರೀದಿಸಲು 15 ಸಾವಿರದವರೆಗೆ ಸಹಾಯ ಧನವನ್ನು ನೀಡಲಾಗುತ್ತಿದೆ. ಈ ಸಹಾಯ ಧನವನ್ನು ನೀವು ಪಡೆದುಕೊಳ್ಳಬಹುದು ಹಾಗೂ ಈ ಹೊಲಿಗೆ ಯಂತ್ರವನ್ನು ಖರೀದಿ ಮಾಡಬಹುದು. ಆರ್ಥಿಕವಾಗಿ ಹಿಂದುಳಿದ ವರ್ಗದ ಮಹಿಳೆಯರು ಎಸ್ಸಿ, ಎಸ್ಟಿ ಮಹಿಳೆಯರು ಮತ್ತು ಬಡವರ್ಗದ ಮಹಿಳೆಯರಿಗೆ ಈ ಯೋಜನೆಯ ಲಾಭ ಸಿಗಲಿದೆ. ಇನ್ನೂ ಈ ಒಂದು ಯೋಜನೆಯನ್ನು ಪಡೆಯಲು ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ ಅದಕ್ಕೆ ನೀಡಬೇಕಾದ ದಾಖಲಾತಿಗಳು ಯಾವುದು ಅಂದರೆ
ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ಇನ್ ಕಮ್ ಮತ್ತು ಕ್ಯಾಸ್ಟ್ ಸರ್ಟಿಫಿಕೇಟ್ ಜೆರಾಕ್ಸ್, ರೇಷನ್ ಕಾರ್ಡ್ ಜೆರಾಕ್ಸ್, ಬಿ.ಪಿ.ಎಲ್ ಕಾರ್ಡ್ ಜೆರಾಕ್ಸ್, ನಾಲ್ಕು ಪಾಸ್ ಪೋರ್ಟ್ ಸೈಜ್ ಫೋಟೋ, ಮತ್ತು ಹೊಲಿಗೆ ಯಂತ್ರ ಆಪರೇಟಿಂಗ್ ಅನ್ನು ಮಾಡಿರಬೇಕು. ಈ ಎಲ್ಲಾ ದಾಖಲಾತಿಗಳು ಇದ್ದರೆ ನಿಮ್ಮ ತಾಲೂಕಿನಲ್ಲಿ ಇವರು ಜಿಲ್ಲಾ ಕೈ ಮಗ್ಗ ಮತ್ತು ಜವಳಿ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಒಂದು ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯು ನಿಮ್ಮ ರಾಜ್ಯದಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ ಹಾಗಾಗಿ ಎಲ್ಲಾ ನಿರುದ್ಯೋಗಿ ಮಹಿಳೆಯರಿಗೆ ಈ ಒಂದು ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದಾಗಿದೆ.
