ತಿನ್ನಲು ಹಣವಿಲ್ಲದಿದ್ದರೂ ಇವರು ಇವತ್ತು ಎಷ್ಟು ಕೋಟಿ ಸಂಪಾದಿಸಿದ್ದಾರೆ ಗೊತ್ತಾ... - Karnataka's Best News Portal

ಬಡವನಾಗಿ ಹುಟ್ಟುವುದು ತಪ್ಪಲ್ಲ ಆದರೇ ಬಡವರಾಗಿ ಸಾಯುವುದು ತಪ್ಪು ಎಂಬ ಮಾತಿದೆ. ಬೀದಿ ಬೀದಿಯಲ್ಲಿ ಭಿಕ್ಷುಕನೊಬ್ಬ ಹತ್ತಾರು ಕೋಟಿ ರೂಪಾಯಿ ಉದ್ಯಮಿಯಾಗಿ ಬೆಳೆದು ಬಂದ ರೋಚಕ ಹಾಗೂ ಸ್ಪೂರ್ತಿದಾಯಕ ಕಥೆ. ಭಿಕ್ಷುಕನೊಬ್ಬ ಕೋಟ್ಯಾಧಿಪತಿ ಆದರೂ ಇದು ನಮ್ಮ ದೇಶದಲ್ಲಿ ಸಾಧ್ಯನಾ ಅನ್ನುವ ಮಾತು ಬರುವುದು ಸಾಮಾನ್ಯ ಬಿಡಿ ಇದು ಯಾವುದೋ ದೇಶದ ಮಾತು ಇರಬಹುದು ಅಂತ ನಿಮಗೆ ಅನಿಸಬಹುದು. ಆದರೆ ಇದು ಯಾವುದೋ ದೇಶದ ಕಥೆಯಲ್ಲ ಬದಲಾಗಿ ನಮ್ಮ ದೇಶದ ನಮ್ಮದೇ ರಾಜ್ಯದ ಕಥೆ ಶೂನ್ಯದಿಂದ ಪ್ರಾರಂಭವಾಗಿ ಇಂದು ಕೋಟ್ಯಾಧಿಪತಿ ಆದಂತಹ ಯಶಸ್ವಿ ಮಹಾನ್ ಪುರುಷನ ಸಾಧನೆ ಇದು ಇವರ ಹೆಸರು ರೇಣುಕಾ ಆರಾಧ್ಯ . ಇವರು ಹೆಸರು ಕೇಳಿದ ತಕ್ಷಣ ಥಟ್ಟನೆ ನಮ್ಮ ನೆನಪಿಗೆ ಬರುವುದು ಪ್ರವಾಸಿ ಕ್ಲಬ್ ಬೀದಿ ಬದಿಯ ಮೇಲೆ ಇದ್ದ ವ್ಯಕ್ತಿ ಎದ್ದು ಪ್ರವಾಸಿ ಕ್ಲಬ್ ಎಂಬ ಕಂಪನಿ ಸೇವೆಯನ್ನು ಆರಂಭಿಸಿದ್ದಾರೆ.

ಇವರ ಸಾಧನೆ ನಿಜಕ್ಕೂ ಈಗಿನ ಜನಕ್ಕೆ ಸ್ಫೂರ್ತಿದಾಯಕವಾಗಿದೆ. ಇವತ್ತು ನಲವತ್ತು ಕೋಟಿಗೂ ಮಿಗಿಲಾದ ವ್ಯವಹಾರ ನಡೆಸುತ್ತಿರುವ ಇವರು ಪ್ರವಾಸಿ ಕ್ಲಬ್‌ ಕಟ್ಟಿದ ಹಿಂದೆ ಕಡು ಕಷ್ಟದ ಮೈ ನೆವರು ಉಳಿಸುವಂತಹ ಕಥೆ ಇದೆ. ಏನೇನೋ ಆಶ್ರಯ ಇಲ್ಲದ ವ್ಯಕ್ತಿಯೊಬ್ಬ ಸ್ವಂತ ಉದ್ಯಮ ಕಟ್ಟಿದ್ದರು ಮೂಲತಃ ಕರ್ನಾಟಕದ ಬೆಂಗಳೂರಿನವರೇ ಆದ ರೇಣುಕಾ ಆರಾಧ್ಯ ಅವರು ಇಲ್ಲಿನ ಆನೇಕಲ್ ತಾಲೂಕಿನ ಗೋಪಸಂದ್ರ ಗ್ರಾಮದವರು. ಇವರ ಪೋಷಕರಿಗೆ ಒಟ್ಟು ಮೂರು ಜನ ಮಕ್ಕಳು ಇವರ ತಂದೆಯ ವೃತ್ತಿಯಲ್ಲಿ ಗುಡಿಯಲ್ಲಿ ಪೂಜಾರಿ ಯಾಗಿದ್ದರು ರಾಜ್ಯ ಸರ್ಕಾರದ ವತಿಯಿಂದಲೇ ಅವರು ಪುರೋಹಿತರಾಗಿ ನೇಮಕಗೊಂಡರು ಆದರೆ ಒಂದು ನಿಗಧಿತ ಸಂಬಳ ಎನ್ನುವುದು ಅವರಿಗೆ ಇರಲಿಲ್ಲ.

By admin

Leave a Reply

Your email address will not be published. Required fields are marked *