ಕಿಚ್ಚ ಸುದೀಪ್ ಪತ್ನಿಯ ಹುಟ್ಟು ಹಬ್ಬಕ್ಕೆ ನೀಡಿದ ಉಡುಗೊರೆ ಏನು ಗೊತ್ತಾ... - Karnataka's Best News Portal

ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಕೂಡ ತುಂಬಾ ಪ್ರತಿಭಾವಂತ ನಟರಾಗಿ ಗುರುತಿಸಿಕೊಂಡಿದ್ದಾರೆ. ಹಲವಾರು ವಿಭಿನ್ನ ರೀತಿಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಮನ ರಂಜಿಸಿದ್ದಾರೆ ಕಿಚ್ಚ ಸುದೀಪ್ ಅವರಿಗೆ ತುಂಬಾ ದೊಡ್ಡ ಅಭಿಮಾನಿಗಳ ಬಳಗವಿದೆ ಚಿತ್ರರಂಗದಲ್ಲೂ ಕೂಡ ಉತ್ತಮ ನಟನಾಗಿ ಗುರುತಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರ ಮನೆಯಲ್ಲಿ ನೆನ್ನೆ ಸಂಭ್ರಮ ಮನೆ ಮಾಡಿದೆ ಏಕೆಂದರೆ ಕಿಚ್ಚ ಸುದೀಪ್ ಅವರ ಧರ್ಮಪತ್ನಿ ಆದಂತಹ ಪ್ರಿಯ ಸುದೀಪ್ ಅವರು ನೆನ್ನೆ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಪ್ರಿಯಾ ಅವರನ್ನು ಮದುವೆಯಾಗಿ ಹತ್ತೊಂಬತ್ತು ವರ್ಷಗಳು ಕಳೆದಿದೆ 2001 ರಲ್ಲಿ ಪ್ರಿಯ ಅವರು ಕಿಚ್ಚ ಸುದೀಪ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸುದೀಪ್ ಅವರು ಎಲ್ಲಾ ಸುಖ-ದುಃಖಗಳಲ್ಲಿ ಭಾಗಿಯಾಗಿರುವ ಪ್ರಿಯ ಸುದೀಪ್.

ಅವರು ಜನ್ಮದಿನಕ್ಕೆ ಕಿಚ್ಚ ಸುದೀಪ್ ಅವರು ವಿಶೇಷವಾಗಿ ಶುಭಕೋರಿದ್ದಾರೆ ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಸುದೀಪ್ ಪ್ರಿಯ ಅವರಿಗೆ ಶುಭಾಶಯವನ್ನು ಕೋರಿದ್ದಾರೆ. ಅದೇನೆಂದರೆ ಕವಿ ನಾನಲ್ಲ ಕವಿತೆ ನನಗೆ ಗೊತ್ತಿಲ್ಲ ಕೆಲವು ಸಿಂಪಲ್ ವರ್ಡ್ಸ್ ನಲ್ಲಿ ಹೇಳುತ್ತೇನೆ ಅದರ ಮೇಲೆ ನನಗೆ ಗೊತ್ತಿಲ್ಲ ಎಂದು ಹೇಳಿ ತಮ್ಮ ವಿಶೇಷವಾದ ಕವಿತೆಯೊಂದಿಗೆ ಪತ್ನಿ ಪ್ರಿಯಾ ಅವರಿಗೆ ಕಿಚ್ಚ ಸುದೀಪ್ ಅವರು ಭಾವನಾತ್ಮಕವಾಗಿ ಶುಭಾಶಯವನ್ನು ಕೋರಿದ್ದಾರೆ. ಇದರ ಜೊತೆಗೆ ಕೆಲವು ಅರ್ಥ ಪೂರ್ಣ ಸಾಲುಗಳನ್ನು ಕೂಡ ಬರೆದುಕೊಂಡಿದ್ದಾರೆ ಇನ್ನು ಪ್ರಿಯ ಸುದೀಪ ಅವರ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಕೂಡಾ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯವನ್ನು ಹಾರೈಸಿದ್ದಾರೆ.

By admin

Leave a Reply

Your email address will not be published. Required fields are marked *