ಡಾಕ್ಟರ್ ಶಿವರಾಜ್ ಕುಮಾರ್ ಮತ್ತು ಗೀತಾ ಅವರ ನಡುವಿನ ಮದುವೆಯ ರಹಸ್ಯ ಏನು ಗೊತ್ತಾ... - Karnataka's Best News Portal

ಡಾಕ್ಟರ್ ಶಿವರಾಜ್ ಕುಮಾರ್ ರವರು ಮತ್ತು ಗೀತಾ ಅವರು ಮದುವೆಯಾಗಿ ಇಂದಿಗೆ 34 ವರ್ಷಗಳು ಕಳೆದಿದೆ. 1986 ನೇ ಮೇ 19 ರಂದು ಶಿವರಾಜ್ ಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರ ಆದಂತಹ ಗೀತಾ ಅವರೊಂದಿಗೆ ಸಪ್ತಪದಿಯನ್ನು ತಿಳಿಯುತ್ತಾರೆ. ಶಿವರಾಜ್ ಕುಮಾರ್ ಹಾಗೂ ಗೀತಾ ಅವರ ಮದುವೆಯೂ ಕೆಲವು ಆಸಕ್ತಿಕರ ವಿಷಯಗಳನ್ನು ಒಳಗೊಂಡಿದೆ ಅದೇನೆಂದರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಗೀತಾ ಅವರದು ಪಕ್ಕ ಅರೆಂಜ್ ಮ್ಯಾರೇಜ್ ಮೊದಲು ಎರಡು ಮನೆಗಳಲ್ಲಿ ಮಾತುಕತೆ ನೆಡೆದ ಬಳಿಕ ಶಿವಣ್ಣನವರಿಗೆ ಹುಡುಗಿ ನೋಡಿರುವ ವಿಚಾರವನ್ನು ಮನೆಯವರಿಗೆ ತಿಳಿಸುತ್ತಾರೆ. ಶಿವಣ್ಣನಿಗೆ ಮದುವೆಯಾದ ಕೇವಲ 24 ವರ್ಷ ಡಾಕ್ಟರ್ ರಾಜ್ ಕುಮಾರ್ ಕುಟುಂಬದ ಮೇಲೆ ಬಂಗಾರಪ್ಪನವರಿಗೆ ಅಪಾರವಾದ ಅಭಿಮಾನ ಮತ್ತು ಪ್ರೀತಿ ಇತ್ತು ಬಂಗಾರಪ್ಪನವರು ಡಾಕ್ಟರ್ ರಾಜಕುಮಾರ್ ಅವರನ್ನು ತುಂಬಾ ಪ್ರೀತಿ ಮತ್ತು ಅಭಿಮಾನ ಕಾಣುತ್ತಿದ್ದರು ಇದೇ ಕಾರಣಕ್ಕೆ.

ಬಂಗಾರಪ್ಪನವರು ನನ್ನ ಮಗಳನ್ನು ನಿಮ್ಮ ಮನೆಯ ಸೊಸೆಯನ್ನಾಗಿ ಮಾಡಬೇಕು ಅನ್ನುವ ಆಸೆ ಇದೆ ಎಂಬುದನ್ನು ಅಣ್ಣವರ ಬಳಿಗೆ ಹೇಳಿದರು ಈ ಮೂಲಕ ಬಂಗಾರಪ್ಪನವರ ಮುಂದೆ ಮೊದಲು ಮದುವೆ ಪ್ರಪೋಸಲ್ ಅನ್ನು ಮುಂದೆ ಇಟ್ಟರು. ನಂತರ ಡಾಕ್ಟರ್ ರಾಜ್ ಕುಮಾರ್ ಅವರು ಬಂಗಾರಪ್ಪನವರ ಮಾತಿನಿಂದ ಖುಷಿಯಾಗಿ ಈ ವಿಷಯವನ್ನು ಪಾರ್ವತಮ್ಮ ನವರೊಂದಿಗೆ ಚರ್ಚಿಸಿ ಶಿವಣ್ಣನಿಗೆ ಮದುವೆ ಫಿಕ್ಸ್ ಮಾಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಶಿವಣ್ಣ ಮತ್ತು ಗೀತಾ ಅವರ ಮದುವೆಯನ್ನು ಅದ್ದೂರಿಯಾಗಿ ನಡೆಸಿದರು ಇದಕ್ಕೆ ಸಾವಿರಾರು ಅಭಿಮಾನಿಗಳು ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ಗಣ್ಯರು ಹಾಗೂ ರಾಜಕಾರಣಿಗಳು ಮದುವೆಗೆ ಆಗಮಿಸಿ ವಧುವರರಿಗೆ ಶುಭಾಶಯವನ್ನು ಕೋರಿದರು.

By admin

Leave a Reply

Your email address will not be published. Required fields are marked *