ರಾಕಿಂಗ್ ಸ್ಟಾರ್ ಯಶ್ ರವರ ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್ 2 ಕನ್ನಡ ಚಲನಚಿತ್ರ ಸಿನಿಮಾ ರಂಗದಲ್ಲಿಯೇ ಬಹಳ ಅದ್ಭುತವಾದ ಸಿನಿಮಾ ಅಂತನೇ ಹೇಳಬಹುದು. ಏಕೆಂದರೆ ಕಳೆದ ಎರಡು ಮೂರು ದಿನಗಳಿಂದ ಎಲ್ಲಿ ನೋಡಿದರೂ ಕೂಡ ಕೆಜಿಎಫ್ ಹವಾ ಸೃಷ್ಟಿ ಮಾಡಿದೆ ಇಂಟರ್ನೆಟ್ ಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ, ಯೂಟ್ಯೂಬ್ ನಲ್ಲಿ ಹೀಗೆ ಯಾವುದೇ ಸಿನಿಮಾ ರಂಗದವರು ಆಗಿರಬಹುದು ಎಲ್ಲರೂ ಕೂಡ ಬಗ್ಗೆ ಈ ಒಂದು ಸಿನಿಮಾ ಟೀಸರ್ ಬಗ್ಗೆನೆ ಮಾತಾಡಿಕೊಳ್ಳುತ್ತಿದ್ದರೆ ಅಷ್ಟು ಅದ್ಭುತವಾಗಿ ಈ ಒಂದು ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ. ಸಾಮಾನ್ಯವಾಗಿ ಕನ್ನಡ ಚಲನಚಿತ್ರ ರಂಗದಲ್ಲಿ ಯಾವುದೇ ಸಿನಿಮಾದ ಟೀಸರ್ ಮತ್ತು ಟ್ರೈಲರ್ ರಿಲೀಸ್ ಆದಾಗ ಎಲ್ಲರೂ ಕೂಡ ಅಂದರೇ ಕನ್ನಡಿಗರು ನಾವು ಅದನ್ನು ನಾವು ಬಹಳ ಮೆಚ್ಚುಗೆಯಿಂದ ಒಪ್ಪಿಕೊಳ್ಳುತ್ತೇವೆ.
i
ಏಕೆಂದರೆ ಅದು ನಮ್ಮ ಭಾಷೆ ಎಂಬ ಅಭಿಮಾನದಿಂದ ಆದರೆ ಇಲ್ಲಿ ಯಶ್ ಅವರು ಮಾಡಿರುವಂತಹ ಕೆಜಿಎಫ್ ಚಾಪ್ಟರ್ 2 ಟೀಸರ್ ಪಕ್ಕದ ರಾಜ್ಯ ತಮಿಳುನಾಡಿನಲ್ಲೂ ಟ್ರೆಂಡ್ ನ್ನು ಸೃಷ್ಟಿ ಮಾಡಿದೆ ಅಂತಾನೆ ಹೇಳಬಹುದು. ಏಕೆಂದರೆ ಇಲ್ಲಿಯವರೆಗೂ ಕನ್ನಡ ಚಲನಚಿತ್ರ ರಂಗದಲ್ಲಿ ರಿಲೀಸ್ ಆದಂತಹ ಯಾವ ಒಂದು ಸಿನಿಮಾ ಕೂಡ ಇಷ್ಟೊಂದು ಟ್ರಂಡ್ ಹುಟ್ಟಿ ಹಾಕಿರಲಿಲ್ಲ. ಇದನ್ನೆಲ್ಲ ನೋಡಿದರೆ ಯಶ್ ಅವರು ಕನ್ನಡ ಚಲನ ಚಿತ್ರರಂಗಕ್ಕೆ ಒಂದು ಬಹುದೊಡ್ಡ ಕೊಡುಗೆ ನೀಡಿದ್ದಾರೆ ಅಂತಾನೆ ಹೇಳಬಹುದು. ಈ ಒಂದು ಟೀಸರ್ ನೋಡಿ ಇಷ್ಟು ಜನ ಮೆಚ್ಚುಗೆ ಪಡೆದುಕೊಂಡ ಮೇಲೆ ಸಿನಿಮಾ ರಿಲೀಸ್ ಆದ ಮೇಲೆ ಕನ್ನಡ ಚಿತ್ರರಂಗ ಯಾವ ಮಟ್ಟಕ್ಕೆ ಬೆಳೆಯಬಹುದು ಎಂಬುದನ್ನು ಹೂಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
