ತಾಮ್ರದ ಚೊಂಬಿನ ಇಂದ ಹೀಗೆ ಮಾಡಿ ಸಾಕು ನಿಮ್ಮ ಮನೆಯಲ್ಲಿ ದುಡ್ಡಿನ ಸುರಿಮಳೆ ಆಗುತ್ತದೆ... - Karnataka's Best News Portal

ನಿಮ್ಮ ಮನೆಯಲ್ಲಿ ಲಕ್ಷ್ಮಿಕಟಾಕ್ಷ ಅನುಗ್ರಹ ಬರಬೇಕು ಅಂದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ತಾಯಿ ನೆಲೆಸಬೇಕು ಎಂದರೆ ನಿಮ್ಮ ಮನೆಯಲ್ಲಿ ಹಣ ತುಂಬಿ ತುಳುಕಬೇಕು ಅಂದರೆ ಈ ಸಿಂಪಲ್ ಪರಿಹಾರವನ್ನು ಫಾಲೋ ಮಾಡಿ. ಇದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಹಣದ ಸಮಸ್ಯೆ, ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ. ಪ್ರತಿ ಬುಧವಾರ ನೀವು ಪೂಜೆ ಮಾಡುವ ತಾಮ್ರದ ಚೊಂಬಿನಲ್ಲಿ ನೀರು ತುಂಬಿಸಿ ಅದರ ಒಳಗೆ 5 ತುಳಸಿ ಎಲೆಗಳನ್ನು ಹಾಕಿ ನಿಮ್ಮ ಮನೆಯಲ್ಲಿರುವ ದೇವರ ಕೋಣೆಯಲ್ಲಿ ಇಟ್ಟು ಪ್ರಾರ್ಥನೆ ಮಾಡಿ ಲಕ್ಷ್ಮಿ ದೇವಿ ಕೃಪೆ ಮಾಡಿ ತಾಯಿಯಂತ ಬೇಡಿಕೊಳ್ಳಿ. ನಂತರ ಗುರುವಾರ ಬೆಳಗ್ಗೆ ಆ ತಾಮ್ರದ ಚೊಂಬಿನಲ್ಲಿ ಇರುವ ತುಳಸಿ ಎಲೆಗಳನ್ನು ತೆಗೆದು ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ಆ ನೀರನ್ನು ಚಿಮುಕಿಸಬೇಕು

ತದನಂತರ ನಿಮ್ಮ ಮನೆಯ ನಾಲ್ಕು ಮೂಲೆಗೂ ಆ ನೀರನ್ನು ಚಿಮುಕಿಸಬೇಕು. ಇದರಿಂದ ಅಷ್ಟ ದಾರಿದ್ರ್ಯಗಳು ಹೋಗುತ್ತದೆ ನಿಮ್ಮ ಮನೆ ಆರ್ಥಿಕ ಸಮಸ್ಯೆಗಳು ಹೋಗಿ ಯಾವುದೇ ದೋಷವಿದ್ದರೂ ಕೂಡ ಪರಿಹಾರ ಆಗುತ್ತದೆ. ಇನ್ನೊಂದು ವಿಧಾನ ಸೋಮವಾರದ ದಿನ ತಾಮ್ರದ ಚೊಂಬನ್ನು ಸ್ವಚ್ಛವಾಗಿ ಪಳಪಳ ಹೊಳೆಯುವ ಶುದ್ಧವಾಗಿ ತೊಳೆಯಿರಿ ನಂತರ ಅದರ ಮೇಲೆ ಗಂಧವನ್ನು ಹಚ್ಚಿ ಅರಿಶಿನ-ಕುಂಕುಮವನ್ನು ಹಚ್ಚಿ ಆ ಒಂದು ಚೆಂಬಿಗೆ ನೀರನ್ನು ತುಂಬಿಸಿ ಅದರ ಒಳಗೆ ಐದು ತುಳಸಿ ಎಲೆಗಳನ್ನು ಹಾಕಿ ಒಂದು ರೂಪಾಯಿ ನಾಣ್ಯವನ್ನು ಹಾಕಿ ಸ್ವಲ್ಪ ಅರಿಶಿನ ಕುಂಕುಮ ಮತ್ತು ಯಾವುದಾದರೂ ಸುಗಂಧ ದ್ರವ್ಯವನ್ನು ಹಾಕಿ. ನಂತರ ಒಂದು ತಟ್ಟೆಗೆ ಅಕ್ಕಿಯನ್ನು ಹಾಕಿ ಅದರ ಮೇಲೆ ದೀಪವನ್ನು ಹಚ್ಚಿ ಅದರ ಮೇಲೆ ಚೊಂಬನ್ನು ಇಡಬೇಕು.

By admin

Leave a Reply

Your email address will not be published. Required fields are marked *