ಒಂದೇ ವಾರದಲ್ಲಿ ನಿಮ್ಮ ದೇಹದಲ್ಲಿ ಇರುವಂತಹ ಕೊಬ್ಬನ್ನು ಕರಗಿಸಿ ಅತಿ ಕಡಿಮೆ ತೂಕವನ್ನು ಪಡೆದುಕೊಳ್ಳುವುದು ಹೇಗೆ ಗೊತ್ತಾ... - Karnataka's Best News Portal

ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಕೂಡ ನಾಲ್ಕೈದು ತಿಂಗಳು ಮನೆಯಲ್ಲೇ ಇರುವುದರಿಂದ ಯಾವುದೇ ರೀತಿಯ ದೈಹಿಕ ಚಟುವಟಿಕೆಗಳು ಇಲ್ಲದೆ ಇರುವುದರಿಂದ ತಮ್ಮ ದೇಹದ ತೂಕ ಹೆಚ್ಚಾಗುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗದೇ ದೇಶದಲ್ಲಿ ಕೊಬ್ಬು ಸಂಗ್ರಹಣೆ ಆಗಿರುತ್ತದೆ ಅಂತಹ ಬೊಜ್ಜನ್ನು ಕರಗಿಸಲು ಮತ್ತು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ನಿಮಗೆ ಅದ್ಭುತವಾದಂತಹ ಡಯಟ್ ಪ್ಲಾನನ್ನು ತಿಳಿಸುತ್ತೇವೆ. ಈ ಒಂದು ಡಯೆಟ್ ಪ್ಲಾನ್ ಅನ್ನು ನೀವು ಸತತ ಏಳು ದಿನಗಳ ಕಾಲ ಮಾಡಿದರೆ ಅತಿ ಶೀಘ್ರವಾಗಿ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ನಾವು ಬೆಳಗ್ಗೆ ಎದ್ದ ತಕ್ಷಣ ಟೀ ಕಾಫಿ ಕುಡಿಯುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತೇವೆ ಆದರೆ ಒಂದು ಡಯೆಟ್ ಪ್ಲಾನ್ ಅನ್ನು ನೀವು ಪ್ರಾರಂಭ ಮಾಡಬೇಕು ಅಂದಾಗ ಟೀ ಕಾಫಿ ಕುಡಿಯುವುದನ್ನು ಬಿಡಬೇಕು.

ಅದರ ಬದಲಿಗೆ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಹಸಿ ಶುಂಠಿ ಹಾಗೂ ನಿಂಬೆರಸವನ್ನು ಹಾಕಿ ಕುದಿಸಿ ಆ ನೀರನ್ನು ಕುಡಿಯಬೇಕು. ನಂತರ ಮೊದಲ ದಿನದ ಪ್ಯಾನ್ ಏನು ಅಂದರೆ ನೀವು ಯಾವುದೇ ರೀತಿಯ ಉಪಹಾರವನ್ನು ಸೇವಿಸಬಾರದು ಅಂದರೆ ಬೆಳಗಿನ ತಿಂಡಿಗೆ ಒಂದು ದಾಳಿಂಬೆ ಹಣ್ಣು ಮತ್ತು ಒಂದು ಆಪಲ್ ಅನ್ನು ಕಟ್ ಮಾಡಿ ಅದನ್ನು ಸೇವಿಸಬೇಕು. ಇದರ ಜೊತೆಗೆ ಪ್ರತಿದಿನ ಕಡಿಮೆ ಎಂದರೂ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು. ನಂತರ 11 ಗಂಟೆಗೆ ಒಂದು ಕಿತ್ತಲೆ ಹಣ್ಣು ಹಾಗೂ ಒಂದು ಸೀಬೆಹಣ್ಣು ಹಾಗೂ ಎರಡು ಲೋಟ ನೀರನ್ನು ಕುಡಿಯಬೇಕು. ಮಧ್ಯಾನ್ಹ ಎರಡು ತುಂಡು ಕಲ್ಲಂಗಡಿ ಹಣ್ಣು ಹಾಗೂ ಒಂದು ಬಟ್ಟಲು ಪಪ್ಪಾಯವನ್ನು ತಿನ್ನಬೇಕು. ನಂತರ ನಾಲ್ಕು ಗಂಟೆಗೆ ಗ್ರೀನ್ ಟೀ ಮತ್ತು ಒಂದು ಆಪಲ್ ಅನ್ನು ತಿನ್ನಬೇಕು. ರಾತ್ರಿ ಊಟಕ್ಕೆ ಒಂದು ಬಟ್ಟಲು ಪಪ್ಪಾಯ, ದಾಳಿಂಬೆ ಹಣ್ಣು, ದ್ರಾಕ್ಷಿ ಹಣ್ಣು ಇದಿಷ್ಟನ್ನು ಮಾತ್ರ ಸೇವಿಸಬೇಕು.

By admin

Leave a Reply

Your email address will not be published. Required fields are marked *