ಮಂಡಿ ನೋವು, ಸೊಂಟ ನೋವು, ಕೈಕಾಲು ನೋವು, ಕೂತರೆ ಹೇಳುವುದಕ್ಕೆ ಆಗದೆ ಇರುವುದು ಎದ್ದರೆ ಕೋರುವುದಕ್ಕೆ ಆಗದೆ ಇರುವುದು ಈ ರೀತಿಯ ಪರಿಸ್ಥಿತಿಗಳು ತುಂಬಾ ಜನಕ್ಕೆ ಕಾಡುತ್ತದೆ. ಅದರಲ್ಲಿಯೂ ಸ್ವಲ್ಪ ಭಾರ ಎತ್ತಿದರು ಕೂಡ ಸೊಂಟ ಹಿಡಿದಂತಾಗುತ್ತದೆ ಸ್ವಲ್ಪ ನೆಡೆದರು ಸೊಂಟ ನೋವು ಆಗುತ್ತದೆ ಈ ರೀತಿಯ ತೊಂದರೆಗಳು ಬರುವುದು ನಮಗೆ ಮೂಳೆಗಳು ವೀಕ್ನೆಸ್ಸ್ ನಿಂದ ಅಥವಾ ಆಯುರ್ವೇದದಲ್ಲಿ ಈ ರೀತಿಯ ತೊಂದರೆಗಳು ಕಾಣಿಸಿಕೊಂಡರೆ ಅದನ್ನು ವಾತ ಪ್ರಕೋಪಿತದಿಂದ ಎಂದು ಕರೆಯುತ್ತಾರೆ. ಈ ರೀತಿಯ ನೋವು ನಿಮಗೆ ಏನಾದರೂ ಇದ್ದರೆ ನೀವು ಅದನ್ನು ತಕ್ಷಣಕ್ಕೆ ಪರಿಹಾರ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಇದರ ಪ್ರಭಾವ ಹೆಚ್ಚಾಗುತ್ತ ಹೋಗುತ್ತದೆ ಇದಕ್ಕೆ ಸುಲಭವಾದ ಮನೆಮದ್ದು ಅಂದರೆ.
ಮೊದಲಿಗೆ ಒಂದು ಪಾತ್ರೆಗೆ ಎರಡು ಗ್ಲಾಸ್ ನೀರನ್ನು ಹಾಕಿ ಅದಕ್ಕೆ ಅರ್ಧಾ ಟೇಬಲ್ ಸ್ಪೂನ್ ಒಣ ಶುಂಠಿ ಪೌಡರ್ ಮತ್ತು ಒಂದು ಟೇಬಲ್ ಸ್ಪೂನ್ ಅಜ್ವಾನ ಎರಡು ದಾಲ್ಚಿನ್ನಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಎರಡು ಗ್ಲಾಸ್ ನೀರು ಒಂದು ಗ್ಲಾಸ್ ನೀರು ಆಗುವ ತನಕ ಇದನ್ನು ಚೆನ್ನಾಗಿ ಕುದಿಸಬೇಕು ನಂತರ ಒಂದು ಗ್ಲಾಸ್ ಗೆ ಶೋಧಿಸಿಕೊಂಡು ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಮತ್ತೆ ಸಂಜೆ 5 ಗಂಟೆಗೆ ಒಂದು ಬಾರಿ ಒಂದು ಲೋಟ ಈ ನೀರು ಕುಡಿಯಬೇಕು. ಹೀಗೆ ಪ್ರತಿ ದಿನ ಎರಡು ಲೋಟ ನೀರು ಕುಡಿದರೆ ನಿಮಗೆ ಇರುವಂತಹ ಸೊಂಟ ನೋವು, ಮಂಡಿ ನೋವು, ಬೇಗನೆ ಉಪಶಮನವಾಗುತ್ತದೆ. ಒಂದು ವೇಳೆ ನಿಮಗೆ ಹಗೇ ಕುಡಿಯಲು ಸಾಧ್ಯವಾಗದಿದ್ದರೆ ಬೆಲ್ಲವನ್ನೂ ಮಿಕ್ಸ್ ಮಾಡಿ ಕುಡಿಯಬಹುದು.
