ಜೊತೆ ಜೊತೆಯಲ್ಲಿ ಸೀರಿಯಲ್ ಸಂಕ್ರಾತಿ ಹಬ್ಬದ ಸಮಾರಂಭ ಹೇಗೆ ಅದ್ದೂರಿಯಾಗಿ ನಡೆಯಿತು ಗೊತ್ತಾ... - Karnataka's Best News Portal

ಜೊತೆ ಜೊತೆಯಲ್ಲಿ ದಾರವಾಹಿ ಕನ್ನಡ ಕಿರುತೆರೆಯಲ್ಲಿ ಅತಿದೊಡ್ಡ ಸೆನ್ಸೇಸಾನ್ ಕ್ರಿಯೇಟ್ ಮಾಡಿದ ಧಾರಾವಾಹಿ ಅಂತನೇ ಹೇಳಬಹುದು. ಎಲ್ಲಾ ಧಾರಾವಾಹಿಗಳ ಟಿ.ಆರ್.ಪಿ ಯನ್ನು ಹಿಂದಿಕ್ಕಿ ಇಂದಿಗೂ ಕೂಡ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಏಕೈಕ ಧಾರಾವಾಹಿ ಎಂದರೆ ಅದು ಜೊತೆ ಜೊತೆಯಲ್ಲಿ ಅಂತಾನೇ ಹೇಳಬಹುದು. ಧಾರವಾಹಿ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡಾ ಪ್ರೇಕ್ಷಕರನ್ನು ತನ್ನ ಸೆಳೆತದಲ್ಲಿ ಇಟ್ಟುಕೊಂಡ ಧಾರವಾಹಿ ಇದಾಗಿದೆ.ಈ ಧಾರಾವಾಹಿಯಲ್ಲಿ ವಿಶೇಷವಾಗಿ ಇಂದು ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದು ತಂಡದವರು ಬಹಳ ಸಂಭ್ರಮದಿಂದ ಎಂಜಾಯ್ ಮಾಡಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಕೂಡ ತಮ್ಮ ಕುಟುಂಬದೊಂದಿಗೆ ಹಬ್ಬವನ್ನು ಆಚರಣೆ ಮಾಡುತ್ತಾರೆ ಆದರೇ ಇದೀಗ ಧಾರಾವಾಹಿಯ ನಟ ನಟಿಯರು ತಮ್ಮ ಎರಡನೇ ಕುಟುಂಬವಾದ ಧಾರಾವಾಹಿ ಟೀಮ್ ಜೊತೆಗೆ.

ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿ ಸಂತೋಷವನ್ನು ಪಟ್ಟಿದ್ದಾರೆ. ಈ ಒಂದು ಸಂಭ್ರಮದಲ್ಲಿ ನಟ ಅನಿರುಧ್, ಮೇಘ ಶೆಟ್ಟಿ, ವಿಜಯ್ ಸೂರ್ಯ, ಸುಧಾರಾಣಿ ಸೇರಿದಂತೆ ಇಡೀ ತಂಡವೇ ಭಾಗಿಯಾಗಿ ಗಾಳಿಪಟವನ್ನು ಹಾರಿಸುವ ಮೂಲಕ ಮೋಜು ಮಸ್ತಿಯನ್ನು ಮಾಡಿದ್ದಾರೆ. ಇನ್ನೂ ಈ ಒಂದು ಕುಟುಂಬದವರು ಮಾಡಿರುವ ಈ ಮೋಜು ಮಸ್ತಿಯನ್ನು ಇದೇ ದಿನ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗುತ್ತದೆ. ಪ್ರತಿ ದಿನ ರಾತ್ರಿ 8:30 ಆದರೆ ಸಾಕು ಎಲ್ಲರೂ ಕೂಡ ಕಾದುಕುಳಿತು ವೀಕ್ಷಣೆ ಮಾಡುತ್ತಿದ್ದ ಜೊತೆ ಜೊತೆಯಲ್ಲಿ ಸೀರಿಯಲ್ ನಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಈ ಒಂದು ಅದ್ಭುತ ಕ್ಷಣಗಳನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ.

By admin

Leave a Reply

Your email address will not be published. Required fields are marked *