ಅಪ್ಪಿ ತಪ್ಪಿಯೂ ಮನೆಯಲ್ಲಿ ಇಂತಹ ದೇವರ ಫೋಟೋಗಳು ಇದ್ದರೆ ಕೂಡಲೇ ತೆಗೆದು ಹಾಕಿ... - Karnataka's Best News Portal

ಸಾಮಾನ್ಯವಾಗಿ ಮನೆಯಲ್ಲಿರುವ ಪೂಜಾ ಕೋಣೆಯಲ್ಲಿ ತಮ್ಮ ತಮ್ಮ ಇಷ್ಟ ದೇವರ ಫೋಟೋವನ್ನು ಇಡುವುದು ಸಹಜ. ಅನಾದಿ ಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ ಪ್ರತಿಯೊಬ್ಬರ ಮನೆಯಲ್ಲೂ ಕೂಡ ದೇವರ ಫೋಟೋವನ್ನು ಇಡುವುದಕ್ಕೆ ಪ್ರತ್ಯೇಕವಾದ ಸ್ಥಳವನ್ನು ಮೀಸಲು ಇಟ್ಟಿರುತ್ತಾರೆ ಇನ್ನು ಕೆಲವರು ದೇವರಿಗಾಗಿಯೇ ಪ್ರತ್ಯೇಕವಾದ ಮಂದಿರವನ್ನು ನಿರ್ಮಿಸುತ್ತಾರೆ. ಆದರೆ ನಮ್ಮಲ್ಲಿ ಇರುವಂತಹ ಕೆಲವು ಜನರು ತಿಳಿದೋ ಅಥವಾ ತಿಳಿಯದೋ ಮಾಡುವ ಚಿಕ್ಕ ಪುಟ್ಟ ತಪ್ಪುಗಳು ಮನೆಯಲ್ಲಿ ಅಶುಭ ನಡೆಯುವುದಕ್ಕೆ ದಾರಿ ತೋರಿಸುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ದೇವರ ಫೋಟೋಗಳನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡಬಾರದು ಅಂತಹ ದೇವರ ಫೋಟೋಗಳು ಮನೆಯಲ್ಲಿ ಇಡುವುದರಿಂದ ಸುಖ, ಶಾಂತಿ ಎನ್ನುವುದು ಇರುವುದಿಲ್ಲ. ಆರ್ಥಿಕವಾಗಿ ಮಾನಸಿಕವಾಗಿ ಸಮಸ್ಯೆಗಳನ್ನು ಪ್ರತಿ ನಿತ್ಯವೂ ನೀವು ಎದುರಿಸಬೇಕಾಗುತ್ತದೆ.

ಅಂತಹ ದೇವರ ಫೋಟೋಗಳು ಯಾವುದು ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ಮೊದಲನೆಯದಾಗಿ ವಾಸ್ತು ಶಾಸ್ತ್ರದ ಪ್ರಕಾರ ಬೈರವೇಶ್ವರ ಸ್ವಾಮಿಯ ಫೋಟೋ ಅಥವಾ ಭೈರವೇಶ್ವರ ಸ್ವಾಮಿಯ ವಿಗ್ರಹವನ್ನು ನೀವು ನಿಮ್ಮ ಮನೆಯಲ್ಲಿ ಇಡಬಾರದು. ಏಕೆಂದರೆ ಭೈರವೇಶ್ವರ ಸ್ವಾಮಿ ಶಿವನ ವಾಸ್ತವಿಕ ರೂಪ ಆದರೂ ಕೂಡ ಈ ದೇವರು ಒಬ್ಬ ತಾಂತ್ರಿಕ ದೇವರು ಮಂತ್ರದಿಂದ ಈ ದೇವರನ್ನು ಸಾಧನೆ ಮಾಡಬೇಕಾಗುತ್ತದೆ. ಅದಕ್ಕಾಗಿ ಮನೆಯಲ್ಲಿ ಭೈರವೇಶ್ವರ ಸ್ವಾಮಿಯ ಫೋಟೋವನ್ನು ಇಡಬಾರದು. ಎರಡನೆಯದಾಗಿ ನಟರಾಜ ಫೋಟೋ ಅಥವಾ ವಿಗ್ರಹ ಇದು ಪರಮಶಿವನ ಇನ್ನೊಂದು ಅವತಾರವಾದ ನಟರಾಜ ಸ್ವಾಮಿಯ ಫೋಟೋವನ್ನು ವಾಸ್ತುವಿನ ಪ್ರಕಾರ ಮನೆಯಲ್ಲಿ ಇಡಬಾರದು.

By admin

Leave a Reply

Your email address will not be published. Required fields are marked *