ಪ್ರತಿ ಬಾರಿ ಬಳಸುವಾಗ ಕುಕ್ಕರ್ ರಬ್ಬರ್ ಅನ್ನು ತೊಳೆದು ಫ್ರಿಜ್ಡ್ ನಲ್ಲಿ ಇಡಬೇಕು ಹೀಗೆ ತೊಳೆದು ಇಡುವುದರಿಂದ ಮತ್ತು ಫಿಡ್ಜ್ ನಲ್ಲಿ ಕುಕ್ಕರ್ ಬೆಲ್ಟ್ ಇಡುವುದರಿಂದ ಕುಕ್ಕರ್ ಬೆಲ್ಟ್ ಗಳು ತುಂಬಾ ದಿನದವರೆಗೂ ಬಾಳಿಕೆ ಬರುತ್ತದೆ. ಅಷ್ಟೇ ಅಲ್ಲದೆ ಕುಕ್ಕರ್ ರಬ್ಬರ್ ಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡು ಬರುವುದಿಲ್ಲ. ಕುಕ್ಕರ್ ರಬ್ಬರ್ ನಾವು ಮೊದಲು ತೆಗೆದುಕೊಂಡಾಗ ಯಾವ ಅಳತೆಯ ಮಾದರಿಯಲ್ಲಿ ಇತ್ತೋ ಅದೇ ಅಳತೆಯಲ್ಲಿ ಇರುತ್ತದೆ. ಒಂದು ವೇಳೆ ನಾವು ಹೀಗೆ ಮಾಡಲಿಲ್ಲ ಅಂದರೆ ಪ್ರತಿ ನಿತ್ಯ ಅಡುಗೆ ಮಾಡುವ ಸಮಯದಲ್ಲಿ ಅಡುಗೆಯ ಶಾಖದ ಪ್ರಭಾವದಿಂದಾಗಿ ಕುಕ್ಕರ್ ಬೆಲ್ಟ್ ನಲ್ಲಿ ಅಳತೆ ದೊಡ್ಡದಾಗಿ ವ್ಯತ್ಯಾಸ ಉಂಟಾಗುತ್ತದೆ. ಇಂತಹ ಬೆಲ್ಟ್ ಗಳನ್ನು ಉಪಯೋಗ ಮಾಡುವುದರಿಂದ ವಿಶಲ್ ಸರಿಯಾಗಿ ಕೂಗುವುದಿಲ್ಲ. ಎರಡನೇ ಟಿಪ್ಸ್ ಕುಕ್ಕರ್ ವಿಶಲ್ ಸರಿಯಾಗಿ ಕೂಗಬೇಕು ಅಂದರೆ ಬೆಲ್ಟ್ ಮಾತ್ರ ಪ್ರಾಮುಖ್ಯತೆಯನ್ನು ವಹಿಸುವುದಿಲ್ಲ.

ಕುಕ್ಕರ್ ಮುಚ್ಚಳ ದಲ್ಲಿ ಇರುವಂತಹ ಕುಕ್ಕರ್ ವಿಶಲ್ ಪೈಒ್ ಹಾಗೂ ಪಕ್ಕದಲ್ಲಿ ಇರುವ ಲೀಡ್ ಇವೆರಡು ಕೂಡ ಸ್ವಚ್ಛವಾಗಿ ಇರಬೇಕು. ನೀವು ಒಂದು ಕಡೆಯಿಂದ ಊದಿದಾಗ ಮತ್ತೊಂದು ಕಡೆಯಿಂದ ಗಾಳಿ ಬರಬೇಕು ಈ ರೀತಿ ಗಾಳಿ ಸರಿಯಾಗಿ ಬರುತ್ತಿಲ್ಲ ಅಂದರೆ ವಿಶಲ್ ಪೈಪ್ ಒಳಗೆ ಏನಾದರೂ ಕಸ ಸಿಕ್ಕಿ ಹಾಕಿ ಕೊಂಡಿರುತ್ತದೆ ಎಂಬ ಅರ್ಥವನ್ನು ಸೂಚಿಸುತ್ತದೆ. ಹಾಗಾಗಿ ವಿಶಲ್ ಪೈಪ್ ಅನ್ನು ನೀವು ಆಗಾಗ ಸ್ವಚ್ಛಗೊಳಿಸಿಕೊಳ್ಳಬೇಕು. ಮೂರನೆಯ ಟಿಪ್ಸ್ ಕುಕ್ಕರ್ ವಿಶಲ್ ಅನ್ನು ನೀವು ತೊಳೆದುಕೊಂಡು ಪ್ರತಿ ನಿತ್ಯ ಉಪಯೋಗ ಮಾಡಬೇಕು. ಪ್ರತಿ ಬಾರಿ ಅಡುಗೆ ಮಾಡುವಾಗ ವಿಶಾಲ್ ಒಳಗೆ ಅನ್ನದ ಅಗಳುಗಳು ಅಥವಾ ಬೇಳೆಕಾಳುಗಳು ಸಿಕ್ಕಿ ಹಾಕಿಕೊಂಡಿರುತ್ತದೆ ಅದನ್ನು ತೆಗೆದಾಗ ಮಾತ್ರ ಅದು ಸರಿಯಾಗಿ ಕೂಗುತ್ತದೆ.

By admin

Leave a Reply

Your email address will not be published. Required fields are marked *