ಜನರಲ್ಲಿ ಕಂಡು ಬರುತ್ತಿರುವ ಮೂಳೆಗಳ ನೋವು, ಮಂಡಿ ನೋವು, ಬಲಹೀನತೆ ಹಾಗೂ ಸುಸ್ತು ಇವುಗಳಿಗೆ ಅದ್ಭುತವಾದಂತಹ ಮನೆ ಮದ್ದನ್ನು ಇಂದು ನಿಮಗೆ ತಿಳಿಸುತ್ತೇವೆ. ನಾವು ತಿಳಿಸುವ ಈ ಮನೆ ಮದ್ದನ್ನು ಪ್ರತಿನಿತ್ಯ ದಿನಕ್ಕೆ ಒಂದು ಬಾರಿ ಸೇವಿಸಿದರೆ ಸಾಕು ಎಂತಹ ನೋವು ಇದ್ದರೂ ಕೂಡ ಅದಕ್ಕೆ ಉಪಶಮನ ದೊರೆಯುತ್ತದೆ. ಇನ್ನೂ ಮನೆ ಮದ್ದಿಗೆ ಬೇಕಾಗುವ ಪದಾರ್ಥಗಳು ಗಸಗಸೆ, ತುಪ್ಪ, ಮಾಕನ್ ಬೀಜ, ಹಾಲು. ಮೊದಲಿಗೆ ಒಂದು ಪ್ಯಾನ್ ಗೆ ಒಂದು ಟೇಬಲ್ ಸ್ಪೂನ್ ತುಪ್ಪವನ್ನು ಹಾಕಿ ಬಿಸಿ ಮಾಡಿ ನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ಗಸಗಸೆ ಹಾಕಿ ಚೆನ್ನಾಗಿ ಬಣ್ಣ ಬದಲಾಗುವವರೆಗೂ ಫ್ರೈ ಮಾಡಬೇಕು. ನಂತರ ಅದಕ್ಕೆ ಒಂದು ಗ್ಲಾಸ್ ಹಾಲನ್ನು ಹಾಕಿ ಚೆನ್ನಾಗಿ ಕುದಿಸಿ.

ನಂತರ ಮಕಾನ್ ಸೀಡ್ಸ್ ಅಂದರೆ ತವರೆ ಹೂವಿನ ಬೀಜಗಳನ್ನು ಹತ್ತು ಹಾಕಿ ಚೆನ್ನಾಗಿ ಎರಡು ನಿಮಿಷ ಹಾಲಿನಲ್ಲಿ ಕೂದಿಸಿಕೊಳ್ಳಬೇಕು. ನಂತರ ಇವೆಲ್ಲವನ್ನು ಕೂಡ ಒಂದು ಗ್ಲಾಸ್ ಗೆ ಹಾಕಿ ಕೊಂಡು ಒಂದು ಟೇಬಲ್ ಸ್ಪೂನ್ ಬೆಲ್ಲ ಅಥವಾ ಒಂದು ಟೇಬಲ್ ಸ್ಪೂನ್ ಕಲ್ಲು ಸಕ್ಕರೆಯನ್ನು ಹಾಕಿ ಮಿಕ್ಸ್ ಮಾಡಿ ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ಅಥವಾ ಸಾಯಂಕಾಲ ಊಟದ ಅರ್ಧ ಗಂಟೆಯ ನಂತರ ಈ ಹಾಲನ್ನು ಕುಡಿದು ಮಲಗಿ ಹೀಗೆ ಮಾಡಿದರೆ ದೇಹದಲ್ಲಿ ಇರುವಂತಹ ಕ್ಯಾಲ್ಸಿಯಂ ಕೊರತೆ ನಿವಾರಣೆಯಾಗುತ್ತದೆ.

By admin

Leave a Reply

Your email address will not be published. Required fields are marked *