ಕನ್ನಡದ ಖ್ಯಾತ ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜಕುಮಾ ರ್ ಅವರ ಆರೋಗ್ಯದಲ್ಲಿ ತುಂಬಾ ಏರುಪೇರು ಕಂಡು ಬಂದಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಶೂಟಿಂಗ್ ನಲ್ಲಿ ಇದ್ದಂತಹ ರಾಘವೇಂದ್ರ ರಾಜಕುಮಾರ್ ಅವರಿಗೆ ಏನಾಯ್ತು ವೈದ್ಯರು ಏನೂ ಹೇಳಿದ್ದಾರೆ ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ನೆನ್ನೆ ಬೆಳಗ್ಗೆ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ರಾಘವೇಂದ್ರ ರಾಜಕುಮಾರ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ನಂತರ ಸಂಜೆ 5 ಗಂಟೆಗೆ ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯಕ್ಕೆ ಇವರಿಗೆ ಈಗ ಹಾರ್ಟ್ ರೇಟ್ ಹೆಚ್ಚಾಗಿದ್ದು ಲೋ ಬಿ.ಪಿ ಸಮಸ್ಯೆ ಕಾಣಿಸಿ ಕೊಂಡಿದೆ. ತೀವ್ರ ನಿಗಾ ಘಟಕದಲ್ಲಿ ರಾಘವೇಂದ್ರ ರಾಜಕು ಮಾರ್ ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ ಇವರಿಗೆ ಆರೋಗ್ಯ ಸ್ಥಿರವಾಗಿದೆ ವೈದ್ಯರ ತಂಡ ನಾಳೆ ಬೆಳಗ್ಗೆ ಹೆಚ್ಚಿನ ಚಿಕಿತ್ಸೆ ನೀಡುವುದಾಗಿ ನಿರ್ಧರಿಸಿದೆ.
ಇನ್ನು ಎರಡು ಅಥವಾ ಮೂರು ಜನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಮಗ ವಿನಯ್ ರಾಜಕುಮಾರ್ ಅವರು ಮಾಧ್ಯಮ ತಿಳಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ದ್ರುವ ಸರ್ಜಾ ಅಭಿನಯದ ಪೊಗರು ಆಡಿಯೋ ರಿಲೀಸ್ ನಲ್ಲೂ ಕೂಡ ರಾಘವೇಂದ್ರ ರಾಜಕುಮಾರ್ ಅವರು ಭಾಗಿಯಾಗಿದ್ದರು. ಈಗ ರಾಘವೇಂದ್ರ ರಾಜಕುಮಾರ್ ಅವರೊಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ದೃವ ಸರ್ಜಾ ಅವರು ಆಸ್ಪತ್ರೆಗೆ ಭೇಟಿ ಕೊಟ್ಟು ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ರಾಘವೇಂದ್ರ ರಾಜಕುಮಾರ್ ಅವರಿಗೆ ಏನೂ ಆಗುವುದಿಲ್ಲ ದಯವಿಟ್ಟು ಅಭಿಮಾನಿಗಳು ಗಾಬರಿಯಾಗಬೇಡಿ ಅಂತ ಮಗ ವಿನಯ್ ರಾಜಕುಮಾರ್ ಅವರು ತಿಳಿಸಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್ ಗೆ ಏನಾಗಿದೆ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದೇನು ಗೊತ್ತಾ…
