ಪ್ರೋಟಿನ್ ಯುಕ್ತ ಲಡ್ಡು ಮಾಡುವ ವಿಧಾನ... ಹೇಗೆ ಎಂಬುದನ್ನು ತಿಳಿಯಲು ಈ ವೈರಲ್ ವಿಡಿಯೋವನ್ನು ನೋಡಿ... » Karnataka's Best News Portal

ಪ್ರೋಟಿನ್ ಯುಕ್ತ ಲಡ್ಡು ಮಾಡುವ ವಿಧಾನ… ಹೇಗೆ ಎಂಬುದನ್ನು ತಿಳಿಯಲು ಈ ವೈರಲ್ ವಿಡಿಯೋವನ್ನು ನೋಡಿ…

ನಮ್ಮ ಆರೋಗ್ಯ ಚೆನ್ನಾಗಿ ಇರಬೇಕು ಅಂದರೆ ದೇಹಕ್ಕೆ ಬೇಕಾದಂತಹ ಪ್ರೋಟಿನ್ಸ್ ಗಳನ್ನು ನಾವು ಅಗತ್ಯ ವೇಳೆಯಲ್ಲಿ ಒದಗಿಸಬೇಕಾಗುತ್ತದೆ. ಹಾಗಾಗಿ ಇಂದು ಅತಿ ಹೆಚ್ಚು ಪ್ರೊಟೀನ್ ಅನ್ನು ಹೊಂದಿರುವಂತಹ ಲಡ್ಡು ಹೇಗೆ ತಯಾರಿಸಬೇಕು ಎಂಬುದನ್ನು ತಿಳಿಸುತ್ತೇವೆ. ಇದಕ್ಕೆ ಬೇಕಾಗುವ ಪದಾರ್ಥಗಳು ರಾಗಿ ಹಿಟ್ಟು, ತುಪ್ಪ, ಕಡಲೇಬೀಜ, ಉಪ್ಪು, ಬೆಲ್ಲ ಇದಿಷ್ಟು ಪದಾರ್ಥಗಳು ಬೇಕಾಗುತ್ತದೆ. ಮೊದಲಿಗೆ ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಎರಡು ಟೇಬಲ್ ಸ್ಪೂನ್ ತುಪ್ಪವನ್ನು ಹಾಕಿ. ತುಪ್ಪ ಬಿಸಿಯಾದ ನಂತರ ಒಂದು ಕಪ್ಪು ರಾಗಿ ಹಿಟ್ಟನ್ನು ಹಾಕಿ ಚೆನ್ನಾಗಿ ಮೀಡಿಯಂ ಫ್ಲೇಮ್ ನಲ್ಲಿ ಹತ್ತು ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಬೇಕು. ನಂತರ ಈ ಮಿಶ್ರಣವನ್ನು ಒಂದು ಮಿಕ್ಸಿಂಗ್ ಬೌಲ್ ಗೆ ಹಾಕಿ ನಂತರ ಅದೇ ಪ್ಯಾನ್ ಗೆ ಕಾಲು ಕಪ್ ಕಡಲೆ ಬೀಜವನ್ನು ಹಾಕಿ ಡ್ರೈ ಫ್ರೈ ಮೂರು ನಿಮಿಷದವರೆಗೆ ಮಾಡಬೇಕು.

ಫ್ರೈ ಮಾಡಿದ ಕಡಲೆ ಬೀಜಾ ಉಗುರು ಬೆಚ್ಚಗೆ ಆದಮೇಲೆ ಆ ಬೀಜದ ಮೇಲೆ ಇರುವ ಹೊಟ್ಟು ತೆಗೆದು ಮಿಕ್ಸಿ ಗೆ ಹಾಕಿ ಸ್ವಲ್ಪ ತರಿಯಾಗಿ ಗ್ರೈಂಡ್ ಮಾಡಿಕೊಳ್ಳಬೇಕು. ನಂತರ ಈ ಒಂದು ಮಿಶ್ರಣವನ್ನು ರಾಗಿ ಹಿಟ್ಟು ಇರವ ಬೌಲ್ ಗೆ ಹಾಕಿ ನಂತರ ಇದಕ್ಕೆ ಚಿಟಿಕೆ ಉಪ್ಪು ಹಾಗೂ ಅರ್ಧ ಟೇಬಲ್ ಸ್ಪೂನ್ ಏಲಕ್ಕಿ ಪುಡಿಯನ್ನು ಹಾಕಿ ಎಲ್ಲವನ್ನು ಕೂಡ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಮತ್ತೊಂದು ಪ್ಯಾನ್ ಗೆ ಒಂದು ಕಪ್ ಬೆಲ್ಲವನ್ನು ಹಾಕಿ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ಪಾಕ ಬಂದ ನಂತರ ಈ ಮಿಶ್ರಣವನ್ನು ರಾಗಿ ಹಿಟ್ಟು ಇರುವ ಬೌಲ್ ಗೆ ಹಾಕಿ ಚೆನ್ನಾಗಿ ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಇದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಪ್ರತಿ ನಿತ್ಯ ಸೇವಿಸಬೇಕು.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
[irp]


crossorigin="anonymous">