ನಮ್ಮ ಸನಾತನ ಧರ್ಮದಲ್ಲಿ ಪ್ರಾಣಿಗಳಿಗೆ ಅವುಗಳಿಗೆ ಆದಂತಹ ಒಂದು ವಿಶೇಷವಾದ ಫಲ ಮತ್ತು ಸೂಚನೆ ಅಥವಾ ಮಹತ್ವವನ್ನು ನಮ್ಮ ಪೂರ್ವಜರು ನೀಡಿದ್ದಾರೆ. ಅದರಲ್ಲಿ ನಾವು ಕಾಣುವ ಕೆಲವು ಪ್ರಾಣಿಗಳು ಶಕುನಗಳನ್ನು ಈ ರೀತಿಯ ರೂಪದಲ್ಲಿ ಕಾಣುತ್ತವೆ. ನಾವು ಸರ್ಪವನ್ನು ಪೂಜ್ಯ ಭಾವದಿಂದ ಕಾಣುತ್ತೇವೆ ಈ ಸರ್ಪ ಶಿವನ ಕಂಠಧಾರವಾಗಿರುತ್ತದೆ, ವಿಷ್ಣುವಿನ ಹಾಸಿಗೆಯಾಗಿ, ಗಣಪತಿಯ ಹೊಟ್ಟೆಯ ಪಟ್ಟಿಯಾಗಿ, ವಿಶ್ವಕರ್ಮನ ಪರವಾಗಿ ಯಜ್ಞಪಯೋಗಿ ಆಗಿ, ಅದೇ ರೀತಿ ಹಲವಾರು ದೇವತೆಗಳ ಕೈನಲ್ಲಿ ಆಯುಧವಾಗಿ ಇರುವಂತಹ ನಾಗದೇವತೆಗೆ ವಿಶೇಷವಾದ ಸೂಚನೆಗಳು ಇರುತ್ತದೆ. ಈ ಸರ್ಪದ ವಿಚಾರಕ್ಕೆ ಸಂಬಂಧಪಟ್ಟ ಸಂಪೂರ್ಣವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ಮೊದಲನೆಯದಾಗಿ ನಾವು ಪ್ರಯಾಣ ಮಾಡುವಾಗ ಸರ್ಪ ದಾರಿಗೆ ಅಡ್ಡ ಗಟ್ಟುವುದು ಒಳ್ಳೆಯದಲ್ಲ ಒಂದು ವೇಳೆ ಹೀಗೆ ಅಡ್ಡ ಗಟ್ಟಿದರೆ.

ಆ ಪಯಣವನ್ನು ನಾವು ಅರ್ಧಕ್ಕೆ ನಿಲ್ಲಿಸುವುದು ಒಳ್ಳೆಯದು ಅಂತ ಶಾಸ್ತ್ರ ತಿಳಿಸುತ್ತದೆ. ಅದೇ ರೀತಿ ಎರಡು ಹಾವುಗಳು ಜಗಳವಾಗುತ್ತಿದ್ದರೆ ಅದನ್ನು ನಾವು ನೋಡಿದರೆ ಆಪ್ತರಲ್ಲಿ ವಿರೋಧ ಉಂಟಾಗುತ್ತದೆ ಎಂಬುದನ್ನು ತಿಳಿಸುತ್ತದೆ. ಎರಡು ಹಾವುಗಳು ಕೂಡಿ ಒಂದು ಪಕ್ಕಕ್ಕೆ ಹೋಗುವುದನ್ನು ನೋಡಿದರೆ ಬಡತನ ಹೆಚ್ಚಾಗುತ್ತದೆ ಅಂತ ಹೇಳುತ್ತಾರೆ. ಹೆಣ್ಣು ಮತ್ತು ಗಂಡು ಹಾವುಗಳು ಸಮ್ಮಿಳನ ಆಗುವುದನ್ನು ಕಂಡರೆ ಸುಖ ಉಂಟಾಗುತ್ತದೆ ಎಂದು ಹೇಳುತ್ತಾರೆ. ಒಂದು ಹಾವೂ ಮತ್ತೊಂದು ಹಾವನ್ನು ನಂಗುತ್ತಿರುವುದನ್ನು ಕಂಡರೆ ತೊಂದರೆಗಳು ಬರುತ್ತದೆ ಅಂತ ಹೇಳುತ್ತಾರೆ. ಹಾವು ಹಸಿರು ಮರವನ್ನು ಏರುತ್ತಿರುವುದನ್ನು ನೋಡಿದರೆ ಅತ್ಯಂತ ಶುಭಫಲ ಹಾಗೂ ಹಾವು ಮರದಿಂದ ಇಳಿಯುತ್ತಿರುವುದನ್ನು ನೋಡಿದರೆ ತೊಂದರೆಗಳು ಉಂಟಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ.

By admin

Leave a Reply

Your email address will not be published. Required fields are marked *