ಸಮಾನ್ಯವಾಗಿ ಜೇನು ತುಪ್ಪವನ್ನು ಹೇಗೆ ಉಪಯೋಗ ಮಾಡಬೇಕು ಅಂತ ಬಹಳಷ್ಟು ಜನರಿಗೆ ತಿಳಿದಿಲ್ಲ ಎಲ್ಲರೂ ಕೂಡ ಆರೋಗ್ಯ ಹಿತಕರವಾಗಿ ಇರಲಿ ಎಂಬ ಕಾರಣಕ್ಕೆ ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರಿನಲ್ಲಿ ಜೇನು ತುಪ್ಪವನ್ನು ಹಾಕಿ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ. ಆದರೆ ಕೆಲವೊಂದು ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಬಿಸಿ ಮಾಡಿ ಬಳಕೆ ಮಾಡಬಾರದು. ಅದನ್ನು ವಿರುದ್ಧ ಸಂಸ್ಕಾರಯುಕ್ತ ಆಹಾರ ಪದಾರ್ಥಗಳು ಎಂದು ಆಯುರ್ವೇದ ಶಾಸ್ತ್ರದಲ್ಲಿ ತಿಳಿಸುತ್ತಾರೆ. ಉದಾಹರಣೆಗೆ ನಾವು ಮೊಸರನ್ನು ಬಿಸಿ ಮಾಡಬಾರದು ಹಾಗೆ ಮಜ್ಜಿಗೆಯನ್ನು ಕೂಡ ಬಿಸಿ ಮಾಡಬಾರದು ಅದೇ ರೀತಿ ಜೇನು ತುಪ್ಪವನ್ನು ಕೂಡ ಬಿಸಿ ಮಾಡಿದರೆ ಅದು ವಿಷಯುಕ್ತವಾಗಿ ಪರಿವರ್ತನೆ ಆಗುತ್ತದೆ. ಹಾಗಾಗಿ ನಾವು ಯಾವುದೇ ಕಾರಣಕ್ಕೂ ಬಿಸಿ ನೀರಿನ ಜೊತೆ ಜೇನು ತುಪ್ಪವನ್ನು ಬಳಕೆ ಮಾಡಬಾರದು.

ಜೇನನ್ನು ಹಾಗೆ ಬಳಕೆ ಮಾಡಿ ಅಥವಾ ತಣ್ಣೀರಿನಲ್ಲಿ ಬಳಕೆ ಮಾಡಿ ಒಂದು ವೇಳೆ ಜೇನನ್ನು ಬಿಸಿ ನೀರಿನಲ್ಲಿ ಹಾಕಿ ಬಳಕೆ ಮಾಡಿದರೆ ಕೆಮಿಕಲ್ ರಿಯಾಕ್ಷನ್ ಆಗುತ್ತದೆ. ಆಗ ಅದು ವಿರುದ್ದ ಸಂಸ್ಕಾರ ಯುಕ್ತ ಆಹಾರವಾಗುತ್ತದೆ ಇದನ್ನು ಸೇವಿಸುವುದರಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗುತ್ತದೆ. ಇನ್ನೂ ಯಾರ ದೇಹ ಉಷ್ಣಾಂಶದಿಂದ ಕೂಡಿರುತ್ತದೆ ಅಂತವರು ಜೇನು ತುಪ್ಪವನ್ನು ಯಾವುದೇ ಕಾರಣಕ್ಕೂ ಹೆಚ್ಚಾಗಿ ಬಳಕೆ ಮಾಡಬಾರದು. ಇನ್ನೂ ಯಾರ ದೇಹವು ಶೀತ ವಾಯುಗುಣವನ್ನು ಹೊಂದಿರುತ್ತದೆ ಅಂತವರು ಜೇನು ತುಪ್ಪವನ್ನು ಹೆಚ್ಚಾಗಿ ಬಳಕೆ ಮಾಡಬಹುದು. ಯಾರೋ ಹೇಳಿದ್ದು, ಮಾಡಿದ್ದು, ಕೇಳಿದ್ದು, ನೋಡಿ ನೀವು ಕೂಡ ಬಿಸಿ ನೀರಿನೊಂದಿಗೆ ಜೇನು ತುಪ್ಪವನ್ನು ಹಾಕಿ ಮಿಶ್ರಮಾಡಿ ಸೇವಿಸಿದರೆ ದೇಹಕ್ಕೆ ಅಡ್ಡ ಪರಿಣಾಮವಾಗುವುದು ಖಚಿತ.

By admin

Leave a Reply

Your email address will not be published. Required fields are marked *