ಮನೆಗೆ ಬೇಕಾಗಿರುವ ತರಕಾರಿಗಳನ್ನು ಸುಲಭವಾಗಿ ತುಂಬಾ ಕಡಿಮೆ ಜಾಗದಲ್ಲಿ ಹೇಗೆ ಬೆಳೆಯುವುದು ಗೊತ್ತಾ... » Karnataka's Best News Portal

ಮನೆಗೆ ಬೇಕಾಗಿರುವ ತರಕಾರಿಗಳನ್ನು ಸುಲಭವಾಗಿ ತುಂಬಾ ಕಡಿಮೆ ಜಾಗದಲ್ಲಿ ಹೇಗೆ ಬೆಳೆಯುವುದು ಗೊತ್ತಾ…

ಸಾಮಾನ್ಯವಾಗಿ ತರಕಾರಿ ಗಿಡ ಬೆಳೆಯುವುದಕ್ಕೆ ತುಂಬಾ ಜಾಗ ಬೇಕು ನಮ್ಮ ಮನೆಯ ಹತ್ತಿರ ಇಷ್ಟು ವಿಶಾಲವಾದ ಜಾಗ ಇಲ್ಲ ಅಂತ ಹೇಳೋದನ್ನು ನಾವು ಕೇಳಿರುತ್ತೇವೆ. ಆದರೆ ನಮಗೆ ಇರುವ ಜಾಗದಲ್ಲಿ ಅಂದರೆ ಟೆರಸ್ ಮೇಲೆ ಅಥವಾ ಬಾಲ್ಕನಿ ಅತ್ತಿರ ಅಥವಾ ಮನೆಯ ಅಕ್ಕ ಪಕ್ಕ ಸ್ವಲ್ಪ ಜಾಗವಿದ್ದರೂ ಕೂಡ ನಾವು ನಮಗೆ ಬೇಕಾಗಿರುವ ತರಕಾರಿಗಳನ್ನು ಬೆಳೆದುಕೊಳ್ಳಬಹುದು. ತರಕಾರಿಗಳಲ್ಲಿ ಪಾಟ್ ಗಳಲ್ಲಿ ಹಾಕಿ ಬೆಳೆಸುವುದಕ್ಕಿಂತ ಗ್ರೋ ಬ್ಯಾಗ್ ನಲ್ಲಿ ಹಾಕಿ ಬೆಳೆಸುವುದು ತುಂಬಾ ಸುಲಭ. ಪಾಟ್ ಗಳು ಆದರೆ ತುಂಬಾ ಬೇಕಾಗುತ್ತದೆ ಜೊತೆಗೆ ಇದು ಹೆಚ್ಚಿನ ಜಾಗವನ್ನು ಕೂಡ ಆವರಿಸಿಕೊಳ್ಳುತ್ತದೆ. ಆದರೆ ಗ್ರೋ ಬ್ಯಾಗ್ ಆದರೆ ಒಂದು ಬ್ಯಾಗ್ ನಲ್ಲಿ ನಾಲ್ಕರಿಂದ ಐದು ಗಿಡಗಳನ್ನು ಬೆಳೆಸಬಹುದು. ಮೊದಲು ನೀವು ಅಂಗಡಿಯಿಂದ ತರಕಾರಿ ಬೀಜಗಳನ್ನು ಖರೀದಿ ಮಾಡಿ ಒಂದು ಬಾರಿ ತರಕಾರಿ ಬೀಜಾ ಖರೀದಿ ಮಾಡಿದರೆ.

ನೀವು ಅದನ್ನು ಐದರಿಂದ ಆರು ಬಾರಿ ತರಕಾರಿಗಳನ್ನು ಬೆಳೆಯಬಹುದು. ಈ ತರಕಾರಿಗಳನ್ನು ಬೆಳೆಯಲು ನಿಮಗೆ ಮಣ್ಣು ಮರಳು ಮತ್ತು ಧನದ ಗೊಬ್ಬರ ಅವಶ್ಯಕವಾಗಿ ಇರುತ್ತದೆ ಈ ಮೂರನ್ನು ಕೂಡ ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ತರಕಾರಿಗಳನ್ನು ಬೆಳೆಯುತ್ತಿರುವುದರಂದ ಅದಷ್ಟು ಆರ್ಗಾನಿಕ್ ಗೊಬ್ಬರವನ್ನು ಬಳಸಬೇಕು ಅಥವಾ ಎರೆಹುಳು ಗೊಬ್ಬರ ಅಥವಾ ಕಿಚನ್ ವೇಸ್ಟಿಂಗ್ ಗೊಬ್ಬರವನ್ನು ಬೇಕಾದರೂ ಬಳಸಬಹುದು. ಸೀಡ್ಸ್ ಹಾಕುವುದಕ್ಕಿಂತ ಮುಂಚೆ ಮಣ್ಣಿಗೆ ನೀವು ಸ್ವಲ್ಪ ನೀಮ್ ಪೌಡರ್ ಅನ್ನು ಹಾಕಬೇಕು ಇದನ್ನು ಹಾಕುವುದರಿಂದ ತರಕಾರಿಗಳಿಗೆ ರೋಗಗಳು ಬರುವುದನ್ನು ತಡೆಗಟ್ಟಬಹುದು ಮತ್ತು ಗಿಡಗಳಿಗೆ ಫಂಗಲ್ಸ್ ಬರುವುದನ್ನು ತಡೆಗಟ್ಟಬಹುದು. ನಂತರ ಸೀಡ್ಸ್ ಹಾಕುವ ಮೊದಲು ಸ್ವಲ್ಪ ನೀರನ್ನು ಮಣ್ಣಿಗೆ ಹಾಕಿ ಮಣ್ಣನ್ನು ನೆನೆಸಬೇಕು.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
[irp]


crossorigin="anonymous">