ನಿಮ್ಮ ಮುಖದಷ್ಟೇ ಕುತ್ತಿಗೆ ಮತ್ತು ಬೆನ್ನು ಕೂಡ ಅಂದವಾಗಿ ಇರಬೇಕು ಅಂದರೆ ಈ ಎರಡು ವಿಧಾನವನ್ನು ನೀವು ಅನುಸರಣೆ ಮಾಡಬೇಕಾಗುತ್ತದೆ. ಮೊದಲಿಗೆ ಒಂದು ಬಟ್ಟಲಿಗೆ ಎರಡು ಟೇಬಲ್ ಸ್ಪೂನ್ ಅಕ್ಕಿಹಿಟ್ಟು ತೆಗೆದುಕೊಳ್ಳಿ, ನಂತರ ಅರ್ಧ ಟೇಬಲ್ ಸ್ಪೂನ್ ಅರಿಶಿಣದ ಪುಡಿ, ಹಾಗೂ ನಾಲ್ಕು ಟೇಬಲ್ ಸ್ಪೂನ್ ಹಸಿ ಹಾಲನ್ನು ಹಾಕಿ ಈ ಮೂರನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕೊನೆಯಲ್ಲಿ ಅರ್ಧ ನಿಂಬೆರಸವನ್ನು ಹಾಕಿ ಕಲಸಿಕೊಳ್ಳಿ. ಈ ನಿಂಬೆ ಸಿಪ್ಪೆಯನ್ನು ಹಾಗೇ ಇಡಿ ಸ್ಕ್ರಬ್ಬಿಂಗ್ ಮಾಡುವುದಕ್ಕೆ ಉಪಯೋಗಕ್ಕೆ ಬರುತ್ತದೆ ನಂತರ ಒಂದು ಟವಲ್ ಗೆ ಬಿಸಿ ನೀರನ್ನು ಅದ್ದಿಕೊಂಡು ಅದನ್ನು ಕುತ್ತಿಗೆ ಮತ್ತು ನಿಮ್ಮ ಬೆನ್ನಿನ ಭಾಗಕ್ಕೆ ಇಡಬೇಕು. ಎರಡು ನಿಮಿಷ ಆದ ನಂತರ ತಯಾರಿಸಿ ಕೊಂಡಿರುವ ಮಿಶ್ರಣವನ್ನು ಹಾಕಿ ಚೆನ್ನಾಗಿ ಸ್ಕ್ರಬಿಂಗ್ ಮಾಡಿ.

2 ರಿಂದ 3 ನಿಮಿಷಗಳ ಕಾಲ ಇದನ್ನು ಹಾಗೆಯೇ ಬಿಡಬೇಕು ತದನಂತರ ಒಂದು ಒಣಗಿದ ಟವಲ್ ನಿಂದ ಇದನ್ನು ವರಸಿಕೊಳ್ಳಬೇಕು ಇದು ಮೊದಲನೇ ವಿಧಾನ. ಇನ್ನೂ ಎರಡನೇ ವಿಧಾನ ಒಂದು ಬಟ್ಟಲಿಗೆ ಎರಡು ಟೇಬಲ್ ಸ್ಪೂನ್ ಮುಲ್ತಾನಿಮಿಟಿ ಪೌಡರ್ ಹಾಗೂ ಎರಡು ಟೇಬಲ್ ಸ್ಪೂನ್ ಗಟ್ಟಿ ಮೊಸರನ್ನು ಹಾಕಿ ಇವರನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಈ ಒಂದು ಮಿಶ್ರಣವನ್ನು ಕುತ್ತಿಗೆ ಹಿಂಬಾಗ ಮತ್ತು ಬೆನ್ನಿನ ಹಿಂಭಾಗಕ್ಕೆ ಹಾಕಿ 5 ನಿಮಿಷ ಹಾಗೆ ಬಿಟ್ಟು ನಂತರ ನೀರಿನಿಂದ ತೊಳೆದುಕೊಳ್ಳಬೇಕು. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ನಿಮ್ಮ ಬೆನ್ನಿನಲ್ಲಿ ಮತ್ರು ಕುತ್ತಿಗೆಯಲ್ಲಿ ಆಗಿರುವಂಥ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.

By admin

Leave a Reply

Your email address will not be published. Required fields are marked *