ಅಶ್ವಗಂಧದ ಪುಡಿಯ ಉಪಯೋಗ ಮಾಡುವುದರಿಂದ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳು ಇದೆ ಎಂಬುದು ತಿಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತಿರ... » Karnataka's Best News Portal

ಅಶ್ವಗಂಧದ ಪುಡಿಯ ಉಪಯೋಗ ಮಾಡುವುದರಿಂದ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳು ಇದೆ ಎಂಬುದು ತಿಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತಿರ…

ಈಗ ಎಲ್ಲಿ ನೋಡಿದರೂ ಕೂಡ ಅಶ್ವಗಂಧವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ ಇದರ ಟ್ರೆಂಡ್ ಶುರುವಾಗಿದೆ ಅಂತಾನೇ ಹೇಳ ಬಹುದು. ಅಶ್ವಗಂಧ ಟೀ, ಅಥವಾ ಕಾಫಿ, ಅಶ್ವಗಂಧ ಬಿಸ್ಕೇಟ್, ಅಶ್ವಗಂಧ ಚೂರ್ಣ, ಹೀಗೆ ಅಶ್ವಗಂಧ ಪದಾರ್ಥಗಳನ್ನು ಬಳಸಿಕೊಂಡು ಎಲ್ಲಾ ರೀತಿಯ ಪದಾರ್ಥಗಳನ್ನು ಮಾಡಲಾಗುತ್ತಿದೆ. ಹಾಗಾಗಿ ಈಗ ಅಶ್ವಗಂಧವನ್ನು ಹೇರಳವಾಗಿ ಈಗ ಮಾರುಕಟ್ಟೆಯಲ್ಲಿ ಮತ್ತು ಆಯುರ್ವೇದಿಕ್ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ. ಈ ಪುಡಿಯನ್ನು ಸಾಮಾನ್ಯವಾಗಿ ಪುರುಷರು ಹೆಚ್ಚಾಗಿ ಬಳಕೆ ಮಾಡುತ್ತಾರೆ ಅಂತ ಎಲ್ಲರೂ ತಿಳಿದುಕೊಂಡಿದ್ದಾರೆ. ಆದರೆ ಮಹಿಳೆಯರು ಕೂಡ ಈ ಅಶ್ವಗಂಧ ಪುಡಿಯನ್ನು ತೆಗೆದುಕೊಳ್ಳಬಹುದ ಅಥವಾ ಇಲ್ಲವಾ ಈ ರೀತಿಯಾದ ಅನುಮಾನಕ್ಕೆ ಇಂದು ನಿಮಗೆ ಸೂಕ್ತವಾದ ಮಾಹಿತಿಯನ್ನು ತಿಳಿಸುತ್ತೇವೆ. ಇದು ಪುರುಷರಿಗೆ ಮಾತ್ರ ಸೀಮಿತವಾಗಿರದೆ ಎಲ್ಲಾ ರೀತಿಯ ನರಗಳ ದೌರ್ಬಲ್ಯಕ್ಕೆ ದಿವ್ಯ ಔಷಧಿಯಾಗಿದೆ.

ಅಶ್ವಗಂಧ ಪುಡಿಯನ್ನು ಮಹಿಳೆಯರು ಕೂಡ ತಮ್ಮ ನರಗಳ ದೌರ್ಬಲ್ಯವನ್ನು ತೆಗೆದು ಹಾಕಲು ಬಳಸಬಹುದು. ಅಂದರೆ ಕೈ ಕಾಲು ನೋವು, ಮಂಡಿ ನೋವು, ಕುತ್ತಿಗೆ ನೋವು, ಸುಸ್ತು ಈ ರೀತಿಯ ಸಮಸ್ಯೆಗಳಿಗೂ ಕೂಡ ಅಶ್ವಗಂಧವನ್ನು ಟಾನಿಕ್ ಆಗಿ ನೀವು ಬಳಕೆ ಮಾಡಬಹುದು. ಅಶ್ವಗಂಧವನ್ನು ಅರ್ಧ ಅಥವಾ ಒಂದು ಟೇಬಲ್ ಸ್ಪೂನ್ ತೆಗೆದುಕೊಂಡು ಬೆಳಗ್ಗೆ ಮತ್ತು ಸಾಯಂಕಾಲದ ಸಮಯ ಒಂದು ಲೋಟ ಹಾಲಿನ ಜೊತೆ ಮಿಶ್ರಣ ಮಾಡಿ ಊಟ ಮತ್ತು ತಿಂಡಿಗಿಂತ ಮೊದಲು ಸೇವಿಸಬೇಕು. ಹೋಗೆ ಮೂರು ತಿಂಗಳುಗಳ ಕಾಲ ಸೇವನೆ ಮಾಡುವುದರಿಂದ ಮಹಿಳೆಯರಲ್ಲಿ ಇರುವಂತಹ ನರಗಳ ದುರ್ಬಲತೆ ಮತ್ತು ನಿಶ್ಯಕ್ತಿ ಎಂಬುದಕ್ಕೆ ಉಪಶಮನ ದೊರೆಯುತ್ತದೆ.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
[irp]


crossorigin="anonymous">