ಮಕರ ರಾಶಿ ಮೇ ತಿಂಗಳ ಫಲ 2021...! ಯಾವ ಯಾವ ಫಲಾಫಲಗಳು ದೊರೆಯುತ್ತದೆ..? » Karnataka's Best News Portal

ಮಕರ ರಾಶಿ ಮೇ ತಿಂಗಳ ಫಲ 2021…! ಯಾವ ಯಾವ ಫಲಾಫಲಗಳು ದೊರೆಯುತ್ತದೆ..?

ಮಕರ ರಾಶಿಯಲ್ಲಿ ಸ್ವಯಂ ಜನ್ಮಸ್ಥಾನ ಪಡೆದ ಶನಿ ಇರುತ್ತಾನೆ ಶನೇಶ್ವರ ಈ ಹಿಂದೆ ಎರಡೂವರೆ ವರ್ಷದ ಫಲಕ್ಕೆ ವ್ಯತಿರಿಕ್ತವಾಗಿ ಫಲ ನೀಡುತ್ತಾನೆ ಮೂರು ಶನಿಗಳಿಂದ ಏಳುವರೆ ವರ್ಷ ಉಂಟಾಗುತ್ತದೆ ಅಂದರೇ ಶನಿ ದೆಸೆ ಉಂಟಾಗುತ್ತದೆ. 12ನೇ ಶನಿ, ಒಂದನೇ ಶನಿ, ಮತ್ತು ಎರಡನೇ ಶನಿ, ಎಂದು ಮೂರು ವಿಭಾಗಗಳಾಗಿ ಶನಿಯನ್ನು ನಾವು ವಿಂಗಡನೆ ಮಾಡುತ್ತೇವೆ. ಅಂದರೆ ಈಗಾಗಲೇ ಎರಡುವರೆ ವರ್ಷ ಮುಗಿದಿದೆ, ಒಂದನೇ ಶನಿಗೆ ಈಗ ಒಂದು ವರ್ಷದ ಅವಧಿ ಮಾತ್ರ ನಡೆಯುತ್ತಿದೆ, ಇನ್ನೂ ಎರಡನೆ ಶನಿಗೆ ಎರಡೂವರೆ ವರ್ಷ ಮುಂದೆ ಇರುವುದರಿಂದ ಇದು ಸಾಡೆಸಾತಿ ವರ್ಷವಾಗಿರುತ್ತದೆ. ಈ ಮೂರು ಹಂತದಲ್ಲಿ ಶನಿ ಫಲ ನೀಡುತ್ತಾರೆ ಪ್ರಥಮವಾಗಿ ಸ್ವಲ್ಪ ಕಷ್ಟ ಕೊಟ್ಟರು ಎರಡನೇ ಹಂತದಲ್ಲಿ ಮಾಧ್ಯಮವಾಗಿ ಕಷ್ಟ ನೀಡುತ್ತಾರೆ, ಮೂರನೇ ಹಂತದಲ್ಲಿ ಎಷ್ಟು ಕಷ್ಟಗಳನ್ನು ನೀಡುತ್ತಾನೆ ಅದಕ್ಕೆ ಎರಡರಷ್ಟು ನಿಮಗೆ ಬೆನಿಫಿಟ್ಸ್ ಗಳನ್ನು ಕೊಟ್ಟು ಹೋಗುತ್ತಾನೆ.

ಮಕರ ಮತ್ತು ಕುಂಭ ರಾಶಿಗಳು ಶುಭ ರಾಶಿಗಳು ಆಗಿರುವುದರಿಂದ ಶನಿ ಈ ವರ್ಷ ಈ ರಾಶಿಗೆ ಈ ತಿಂಗಳು ಸ್ವಲ್ಪ ಮಿಶ್ರ ಫಲಗಳನ್ನು ನೀಡುತ್ತಾನೆ. ಏಳು ವರ್ಷಗಳು ಶನಿದೆಸೆ ಇದ್ದರೂ ಕೂಡ ದ್ವಿತೀಯದಲ್ಲಿ ಧನಕಾರಕ ಮತ್ತು ಗುರು ಕಾರಕ ಇರುತ್ತದೆ. ಗುರುಬಲ ಮಕರ ರಾಶಿಗೆ ಬರುವುದರಿಂದ ಜನ್ಮಸ್ಥಾನ ಗುರು ಪ್ರಯೋಜನ ನೀಡುತ್ತಾನೆ. ಉದಾಹರಣೆಗೆ ನಳಮಹರಾಜ ಮತ್ತು ರಾಮನಿಗೂ ಕೂಡ ದುಃಖ ಕೊಟ್ಟಂತಹ ಗುರು ಆ ಸಮಯದಲ್ಲಿ ನೀಚನಾಗಿದ್ದ ಆದರೆ ಗುರು ಈಗ ಅದರಿಂದ ಹೊರ ಹೋಗಿದ್ದಾನೆ. ಅಂದರೆ ಧನಸ್ಸು ರಾಶಿಗೆ ಹೋಗಿದ್ದಾನೆ ಹಾಗಾಗಿ ಕುಟುಂಬದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ನಿಮ್ಮ ಮಾತುಗಳು ಹಿತವಾಗಿದೆ ಜನರಿಗೆ ಹತ್ತಿರ ಆಗುತ್ತೀರಾ, ಕಳೆದು ಕೊಂಡದ್ದನ್ನು ಮತ್ತೆ ಪಡೆಯುವ ಅವಕಾಶ ನಿಮಗೆ ಇಂದು ದೊರೆಯುತ್ತದೆ.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
[irp]


crossorigin="anonymous">