ಮನೆಯಲ್ಲಿ ತುಳಸಿ ಗಿಡ ಬೆಳೆಸುವಾಗ ಯಾವ ಎಚ್ಚರಿಕೆ ತೆಗೆದುಕೊಳ್ಳಬೇಕು ಗೊತ್ತ...? ಅಚ್ಚರಿಯ ಮಾಹಿತಿ..! » Karnataka's Best News Portal

ಮನೆಯಲ್ಲಿ ತುಳಸಿ ಗಿಡ ಬೆಳೆಸುವಾಗ ಯಾವ ಎಚ್ಚರಿಕೆ ತೆಗೆದುಕೊಳ್ಳಬೇಕು ಗೊತ್ತ…? ಅಚ್ಚರಿಯ ಮಾಹಿತಿ..!

ತುಳಸಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ ವಾಸ್ತುಶಾಸ್ತ್ರದ ಪ್ರಕಾರ ಇದನ್ನು ಪವಿತ್ರವಾದ ಗಿಡ ಎಂದು ಕರೆಯುತ್ತಾರೆ. ನಂಬಿಕೆಗಳ ಪ್ರಕಾರ ವಿಷ್ಣುವಿನ ಮಹಾ ಭಕ್ತೆಯಾದ ತುಳಸಿಯ ರೂಪಂತರವೇ ಈ ತುಳಸಿ ಗಿಡ ಅಂತ ಪರಿಗಣಿಸಲ್ಪಟ್ಟಿದೆ. ತುಳಸಿಯಲ್ಲಿ ಇರುವಂತಹ ವಿಶೇಷ ವೈದ್ಯಕೀಯ ಗುಣದಿಂದಾಗಿ ಇದನ್ನು ವೈಜ್ಞಾನಿಕವಾಗಿ ಬಹಳ ಶ್ರೇಷ್ಠ ಅಂತ ಕರೆಯುತ್ತಾರೆ. ಇಂತಹ ಅದ್ಭುತವಾದ ಗಿಡವನ್ನು ನಾವು ಮನೆಯಲ್ಲಿ ಬೆಳೆಸುವ ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ನಿಯಮಗಳನ್ನು ಪಾಲನೆ ಮಾಡಬೇಕು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಮನೆಯ ಉತ್ತರ ದಿಕ್ಕಿನಲ್ಲಿ ಅಥವಾ ಈಶಾನ್ಯ ದಿಕ್ಕಿನಲ್ಲಿ ಬೆಳೆಸಬೇಕು ಅಂತ ಹೇಳುತ್ತಾರೆ. ನಾವು ನಮ್ಮ ಅಗತ್ಯಗಳಿಗೆ ತುಳಸಿ ಎಲೆಗಳನ್ನು ಕೀಳುತ್ತೇವೆ ಆದರೆ ಭಾನುವಾರದ ದಿನ ಮತ್ತು ಏಕಾದಶಿಯ ದಿನಗಳಲ್ಲಿ ತುಳಸಿ ಎಲೆಗಳನ್ನು ಯಾವುದೇ ಕಾರಣಕ್ಕೂ ಕೀಳಬಾರದು ಅಂತ ಶಾಸ್ತ್ರ ಮತ್ತು ಪುರಾಣಗಳಲ್ಲಿ ತಿಳಿಸಲಾಗಿದೆ.

ಇದನ್ನು ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ನೀವು ಯಾವಾಗ ಬೇಕಾದರೂ ತುಳಸಿ ದಳಗಳನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಕಿತ್ತುಕೊಳ್ಳಬಹುದು. ಇನ್ನೂ ವಾಸ್ತುಶಾಸ್ತ್ರದ ಪ್ರಕಾರ ಒಣಗಿದ ತುಳಸಿ ಗಿಡವನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ ಹಾಗಾಗಿ ಇದನ್ನು ಕಿತ್ತು ಆ ಜಾಗದಲ್ಲಿ ಹೊಸ ತುಳಸಿ ಗಿಡವನ್ನು ನೆಡಬೇಕಾಗುತ್ತದೆ. ಇನ್ನೂ ಹಳೆಯ ಒಣಗಿದ ತುಳಸಿ ಗಿಡವನ್ನು ನದಿ ಅಥವಾ ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬೇಕಾಗುತ್ತದೆ. ತುಳಸಿಯನ್ನು ಹೆಣ್ಣು ಎಂದು ಪರಿಗಣಿಸಲಾಗಿದೆ ಹಾಗಾಗಿ ಇದರ ಅಕ್ಕ ಪಕ್ಕಗಳಲ್ಲಿ ಮುಳ್ಳಿನ ಗಿಡಗಳನ್ನು ನೆಡಬಾರದು ಇದರಿಂದ ತುಳಸಿಗೆ ನೋವಾಗುತ್ತದೆ ಎಂಬ ಪರಿಕಲ್ಪನೆ ಇದೆ ಹಾಗಾಗಿ ಇದರ ಸುತ್ತ ಹೂವಿನ ಗಿಡಗಳನ್ನು ಬೇಕಾದರೆ ನೀವು ಬೆಳೆಸಬಹುದು. ತುಳಸಿಯನ್ನು ಮನೆಯಲ್ಲಿ ಬೆಳೆಸುವುದರಿಂದ ಕೆಟ್ಟಶಕ್ತಿಗಳು ಅಥವಾ ನೆಗೆಟಿವ್ ಎನರ್ಜಿಯನ್ನು ತಡೆಗಟ್ಟುತ್ತದೆ ಹಾಗಾಗಿ ಈ ಗಿಡದ ಅಕ್ಕ ಪಕ್ಕದಲ್ಲಿ ಪೊರತೆ ಅಥವಾ ಕಸದ ಡಬ್ಬ ಅಥವಾ ಚಪ್ಪಲಿಗಳನ್ನು ಇಡಬಾರದು ತುಳಸಿಯನ್ನು ಪೂಜ್ಯ ಮನೋಭಾವದಿಂದ ನೋಡಬೇಕು.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
[irp]


crossorigin="anonymous">