ನಟಿ ಮೇಘನಾ ರಾಜ್ ಅವರ ಮನೆ ಹೇಗಿದೆ ಗೊತ್ತಾ ಮನೆಯಲ್ಲಿ ಚಿರು ನೆನಪು ಹೇಗಿದೆ ಗೊತ್ತಾ... » Karnataka's Best News Portal

ನಟಿ ಮೇಘನಾ ರಾಜ್ ಅವರ ಮನೆ ಹೇಗಿದೆ ಗೊತ್ತಾ ಮನೆಯಲ್ಲಿ ಚಿರು ನೆನಪು ಹೇಗಿದೆ ಗೊತ್ತಾ…

ನಟಿ ಮೇಘನ ರಾಜ್ ರವರ ದುಬಾರಿ ಮನೆ ಹೇಗಿದೆ ಅಂದರೆ ಹೇಳಲು ಅಸಾಧ್ಯ ಚಿಕ್ಕವಯಸ್ಸಿನಿಂದಲೂ ಕೂಡ ಕನ್ನಡ ಚಿತ್ರರಂಗದ ಹಿರಿಯರ ಜೊತೆ ಆಡಿಕೊಂಡು ಬೆಳೆದ ಮೇಘನ ರಾಜ್ ಅವರಿಗೆ ಕನ್ನಡ ಚಲನ ಚಿತ್ರರಂಗವೇ ಕುಟುಂಬವಿದ್ದಂತೆ. ಕನ್ನಡ ಚಲನಚಿತ್ರ ರಂಗದಲ್ಲಿ ನಾಯಕಿಯಾಗಿ ಅಭಿನಯವನ್ನು ಶುರು ಮಾಡಿದ ನಂತರ ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಯಾಗಿ ಯಶಸ್ವಿಗೊಳಿಸಿದರು. ಮೇಘನ ರಾಜ್ ರವರು ಬಹಳ ಸರಳ ಮತ್ತು ಮುಗ್ಧ ಮನೋಭಾವ ಹೊಂದಿರುವವರು ಅವರ ತಂದೆ ತಾಯಿ ಕನ್ನಡ ಚಿತ್ರರಂಗದ ಹಿರಿಯ ನಟರಾದ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್. ಮೇಘನ ರಾಜ್ ಅವರು ಬಾಲ ನಟಿಯಾಗಿ ಜೋಕುಮಾರ ಸ್ವಾಮಿ ಎಂಬ ಚಿತ್ರದಲ್ಲಿ ನಟಿಸಿದ್ದರು. ತದನಂತರ ಓದಿನ ಕಡೆ ಹೆಚ್ಚಿನ ಗಮನ ಹರಿಸಿದರು ಸೈಕಾಲಜಿ ವಿಷಯದಲ್ಲಿ ಪದವಿಯನ್ನು ಪಡೆದ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಕನ್ನಡದ ಪುಂಡ ಸಿನಿಮಾದಲ್ಲಿ ನಟಿಸಿದ ನಂತರ.

ಮಲೆಯಾಳಂ ಚಿತ್ರಗಳಲ್ಲಿ ನಟಿಯಾಗಿ ಮಿಂಚಿದರು ನಂತರ ರಾಜಾಹುಲಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದರು. ಇದೀಗ ಬೆಂಗಳೂರಿನಲ್ಲಿ ವಾಸವಾಗಿದ್ದರೆ ಮಾರ್ಚ್ 03 1991 ರಂದು ಮೇಘನ ರಾಜ್ ರವರು ಜನಿಸಿದರು. ಇನ್ನೂ ಇವರ ಮನೆ ಸಾಂಪ್ರದಾಯಿಕ ಶೈಲಿಯಲ್ಲಿ ಬಹಳ ವಿಶೇಷವಾಗಿ ವಿನ್ಯಾಸ ಮಾಡಿದ್ದಾರೆ. ಈ ಮನೆಯ ವಿಶೇಷತೆ ಏನೆಂದರೆ ಈ ಮನೆ ಬೆಂಗಳೂರಿನಲ್ಲಿ ಇದ್ದರೂ ಕೂಡ ಯಾವುದೋ ಒಂದು ಹಳ್ಳಿಯಲ್ಲಿ ಇರುವಂತ ವಾತಾವರಣವನ್ನು ಹೊಂದಿದೆ. ಮನೆಯ ಸುತ್ತಮುತ್ತ ಮರ ಗಿಡಗಳನ್ನು ಬೆಳೆಸಿದ್ದಾರೆ ಪರಿಸರ ಪ್ರೇಮಿ ಆಗಿರುವಂತಹ ಮೇಘನ ರಾಜ್ ಕುಟುಂಬ ಮನೆಯ ಸುತ್ತ ಮುತ್ತಲೂ ಕೂಡ ತರಕಾರಿ ಮತ್ತು ಹಣ್ಣು ಹಾಗೂ ಔಷಧೀಯ ಗುಣಗಳನ್ನು ಹೊಂದಿರುವಂತಹ ಗಿಡಗಳನ್ನು ಬೆಳೆಸಿದ್ದಾರೆ. ಮನೆಯ ಒಳಗೆ ಪ್ರತಿ ಗೋಡೆಯಲ್ಲಿ ಕೂಡ ಚಿರಂಜೀವಿ ಸರ್ಜಾ ಅವರ ಫೋಟೋವನ್ನು ಹಾ ಕಿಕೊಂಡಿದ್ದಾರೆ ಚಿರಂಜೀವಿ ಅವರನ್ನು ಬಹಳ ಇಷ್ಟಪಡುವಂತಹ ಮೇಘನಾ ಅವರು ಎಲ್ಲಿ ನೋಡಿದರೂ ಕೂಡ ಅವರ ಫೋಟೋ ಇರಬೇಕು ಎಂಬ ಉದ್ದೇಶಕ್ಕಾಗಿ ಈ ರೀತಿ ಮಾಡಿದ್ದಾರೆ.

WhatsApp Group Join Now
Telegram Group Join Now
See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ
[irp]


crossorigin="anonymous">