ಸಿದು ಹೋದಂತಹ ಪಾತ್ರೆ ಮತ್ತು ತಟ್ಟೆಯನ್ನು ಹೇಗೆ ಕ್ಲೀನ್ ಮಾಡಬೇಕು ಗೊತ್ತಾ...ಸೂಪರ್ ಮಾಹಿತಿ.. » Karnataka's Best News Portal

ಸಿದು ಹೋದಂತಹ ಪಾತ್ರೆ ಮತ್ತು ತಟ್ಟೆಯನ್ನು ಹೇಗೆ ಕ್ಲೀನ್ ಮಾಡಬೇಕು ಗೊತ್ತಾ…ಸೂಪರ್ ಮಾಹಿತಿ..

ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಹಾಲು ಕಾಯಿಸುವಾಗ ಅಥವಾ ಸಾಂಬಾರ್ ಇನ್ನಿತರ ಪದಾರ್ಥಗಳನ್ನು ಬಿಸಿ ಮಾಡುವಾಗ ನಾವು ಮರೆತು ಅದನ್ನು ಹಾಗೆ ಬಿಟ್ಟು ಬಿಡುತ್ತೇವೆ. ಒಂದು ನಿಗದಿತ ಅವಧಿ ವರೆಗೆ ಮಾತ್ರ ಇದು ಚೆನ್ನಾಗಿ ಇರುತ್ತದೆ ತದನಂತರ ಒಳಗೆ ಇರುವಂತಹ ಮಿಶ್ರಣ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಇದರ ಜೊತೆಗೆ ಪಾತ್ರೆಯ ಮೇಲೂ ಕೂಡ ಕಪ್ಪು ಕಲೆಗಳು ಉಂಟಾಗುತ್ತದೆ. ಈ ರೀತಿ ಆದಂತಹ ಕಲೆಗಳನ್ನು ತೊಲಗಿಸುವುದು ತುಂಬಾನೇ ಕಷ್ಟಕರ ವಿಚಾರ. ಹಾಗಾಗಿ ಸುಲಭವಾದ ವಿಧಾನದಲ್ಲಿ ಯಾವ ರೀತಿ ಕಲೆಗಳನ್ನು ತೆಗೆದು ಹಾಕಬಹುದು ಎಂಬುದನ್ನು ತಿಳಿಸುತ್ತೇವೆ. ಅದಕ್ಕೆ ಬೇಕಾಗಿರುವ ಪದಾರ್ಥ ಬೇಕಿಂಗ್ ಸೋಡಾ ಮತ್ತು ನಿಂಬೆಹಣ್ಣು ಮತ್ತು ವಿನೆಗರ್ ಈ ಮೂರು ಪದಾರ್ಥಗಳನ್ನು ಬಳಸಿಕೊಂಡು ಯಾವ ರೀತಿ ಪಾತ್ರೆಯನ್ನು ಮೊದಲಿನಂತೆ ಹೊಸದರಂತೆ ಮಾಡಬಹುದು ಎಂಬುದನ್ನು ತಿಳಿಸುತ್ತೇವೆ.

ಹಾಲಿನ ಪಾತ್ರೆ ಅಥವಾ ಸಿದೂ ಹೋದಂತಹ ಯಾವುದಾದರೂ ಪಾತ್ರೆ ಆದರೂ ಪರವಾಗಿಲ್ಲ ಮೊದಲು ಅದಕ್ಕೆ ಮುಕ್ಕಾಲು ಭಾಗದಷ್ಟು ನೀರನ್ನು ಹಾಕಬೇಕು. ನಂತರ ಆ ನೀರಿಗೆ ಒಂದು ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ ಹಾಗೂ ಒಂದು ನಿಂಬೆಹಣ್ಣು ಮತ್ತು ವಿನೆಗರ್ ಹಾಕಿ ಎಲ್ಲವನ್ನು ಕೂಡ ಒಂದು ಬಾರಿ ಮಿಕ್ಸ್ ಮಾಡಿಕೊಂಡು ಗ್ಯಾಸ್ ಮೇಲೆ ಇಟ್ಟು ಚೆನ್ನಾಗಿ ನೀರನ್ನು ಕುದಿಸಿಕೊಳ್ಳಬೇಕು. ನೀರು ಮರಳುವಂತಹ ವೇಳೆಯಲ್ಲಿ ಪಾತ್ರೆಯ ಒಳಗೆ ಇರುವಂತಹ ಪದಾರ್ಥಗಳು ಮೇಲೆ ಬರುತ್ತದೆ. ಹತ್ತು ನಿಮಿಷ ಹೀಗೆ ಕೂದಿಸಿಕೊಂಡರೆ ಪಾತ್ರೆಯ ಸುತ್ತಲೂ ಇರುವಂತಹ ಕಲೆಗಳು ಕಡಿಮೆಯಾಗುತ್ತದೆ. ತದನಂತರ ಈ ನೀರನ್ನು ಒಂದು ಬಟ್ಟಲಿಗೆ ಶೋಧಿಸಿಕೊಂಡು ಪಾತ್ರೆ ತೊಳೆಯುವ ಸೋಪು ಹಾಕಿ ಬ್ರಶ್ ಸಹಾಯದಿಂದ ತೊಳೆಯಿರಿ ಹೀಗೆ ಮಾಡಿದರೆ ಎಷ್ಟೇ ಕಠಿಣವಾದ ಅಂತಹ ಕಲೆಗಳು ಇದ್ದರೂ ಕೂಡ ಅದು ನಿವಾರಣೆಯಾಗುತ್ತದೆ.

WhatsApp Group Join Now
Telegram Group Join Now
See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ
[irp]


crossorigin="anonymous">