5 ನಿಮಿಷದಲ್ಲಿ ಕೆಜಿ ಗಟ್ಟಲೆ ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ಸೀಕ್ರೆಟ್ ಟಿಪ್ಸ್ ...ನಿಮಗಾಗಿ » Karnataka's Best News Portal

5 ನಿಮಿಷದಲ್ಲಿ ಕೆಜಿ ಗಟ್ಟಲೆ ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ಸೀಕ್ರೆಟ್ ಟಿಪ್ಸ್ …ನಿಮಗಾಗಿ

ಸಾಮಾನ್ಯವಾಗಿ ನಾವು ಅಡುಗೆ ಮಾಡುವಾಗ ಬೆಳ್ಳುಳ್ಳಿಯನ್ನು ಹೇರಳವಾಗಿ ಬಳಸುತ್ತೇವೆ ಯಾವುದೇ ಆಹಾರ ಪದಾರ್ಥ ತಯಾರಿ ಮಾಡಬೇಕು ಅಂದರೂ ಕೂಡ ನಮಗೆ ಬೆಳ್ಳುಳ್ಳಿಯ ಅವಶ್ಯಕತೆ ಇರುತ್ತದೆ. ಆದರೆ ಈ ಬೆಳ್ಳುಳ್ಳಿಯ ಸಿಪ್ಪೆ ತೆಗೆಯುವುದು ಅಷ್ಟು ಸುಲಭದ ಕೆಲಸವಲ್ಲ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಕೆಲವು ಬಾರಿ ಕಡಿಮೆ ಅಡುಗೆ ಮಾಡಬೇಕಾದರೆ ನಮಗೆ ಈ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಆದರೆ ಹೆಚ್ಚು ಅಡುಗೆಯನ್ನು ತಯಾರಿಸಬೇಕೆಂದು ಬೆಳ್ಳುಳ್ಳಿಯು ಹೆಚ್ಚಾಗಿ ಅಗತ್ಯವಾಗಿರುತ್ತದೆ. ಈ ಸಮಯದಲ್ಲಿ ಅದರ ಸಿಪ್ಪೆಯನ್ನು ಬಿಡಿಸುವುದಕ್ಕೆ ತುಂಬಾನೇ ಕಷ್ಟಕರವಾಗುತ್ತದೆ ಇಂತಹ ಸನ್ನಿವೇಶದಲ್ಲಿ ನಾವು ತಿಳಿಸುವ ಸೀಕ್ರೆಟ್ ಟಿಪ್ಸ್ ಗಳನ್ನು ಬಳಸಿಕೊಂಡು ನೀವು ಎಷ್ಟು ಬೇಕಾದರೂ ಬೆಳ್ಳುಳ್ಳಿ ಸಿಪ್ಪೆ ತೆಗೆಯಬಹುದು. ಮೊದಲನೇದಾಗಿ ನೀವು ಅಂಗಡಿಯಿಂದ ಬೆಳ್ಳುಳ್ಳಿ ತರುವಾಗ ದಪ್ಪವಾಗಿ ಇರುವಂತಹ ಬೆಳ್ಳುಳ್ಳಿಯನ್ನು ಆರಿಸಿಕೊಂಡು ತರಬೇಕು.

ಮೊದಲಿಗೆ ಬೆಳ್ಳುಳ್ಳಿ ಗೆಡ್ಡೆಯನ್ನು ತೆಗೆದುಕೊಂಡು ಅದರ ತುದಿಯಲ್ಲಿ ಇರುವಂತಹ ಬಾಲವನ್ನು ಕತ್ತರಿಸಿ ನಂತರ ಕೈನಿಂದ ಬೆಳ್ಳುಳ್ಳಿಯನ್ನು ಜಜ್ಜಿದರೆ ಬೆಳ್ಳುಳ್ಳಿ ಎಸಳುಗಳು ಬಿಡುತ್ತದೆ. ನಂತರ ಅದರ ಮೇಲೆ ಇರುವಂತಹ ತೆಳುವಾದ ಸಿಪ್ಪೆಯನ್ನು ಮೊದಲು ತೆಗೆಯಬೇಕು. ನಂತರ ಒಂದು ಬಟ್ಟಲಿಗೆ ಬಿಸಿ ನೀರನ್ನು ಹಾಕಿ ಅದರೊಳಗೆ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಎರಡರಿಂದ ಮೂರು ನಿಮಿಷಗಳ ಕಾಲ ನೀರಿನಲ್ಲಿ ನೆನೆಯಲು ಬಿಡಬೇಕು. ತದನಂತರ ಕೈನಿಂದ ಹಿಸುಕಿದರೆ ಅದರ ಮೇಲೆ ಇರುವಂತಹ ಸಿಪ್ಪೆಗಳು ಆಚೆ ಬರುತ್ತದೆ. ಎರಡನೇ ವಿಧಾನ ಒಂದು ಪ್ಯಾನ್ ಗೆ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ 2 ನಿಮಿಷ ಫ್ರೈ ಮಾಡಿ ತದನಂತರ ತಣ್ಣಗಾದ ಮೇಲೆ ಅದರ ಮೇಲಿರುವ ಸಿಪ್ಪೆಗಳು ಆಚೆ ಬರುತ್ತದೆ ಅದನ್ನು ತೆಗೆಯಬಹುದು.

WhatsApp Group Join Now
Telegram Group Join Now
See also  2-3 ಮದುವೆಯಾದ ನಟರು 40,50 ನೇ ವರ್ಷದಲ್ಲೂ ಮತ್ತೆ ಮದುವೆ..ಹೆಂಡತಿ ಬದುಕಿದ್ದಾಗಲೇ 2 ನೆ ಮದುವೆಯಾದ ನಟರು ಯಾರು ನೋಡಿ..
[irp]


crossorigin="anonymous">