ಸಾಮಾನ್ಯವಾಗಿ ಮನೆಯಲ್ಲಿ ಒಂದು ಇಲಿ ಸೇರಿಕೊಂಡರೆ ಸಾಕು ಅದರ ಸಂತತಿಯೇ ಮನೆಯಲ್ಲಿ ಇದ್ದಂತೆ. ಅಷ್ಟೇ ಅಲ್ಲದೆ ಮನೆಯಲ್ಲಿ ಇರುವಂತಹ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ದುಬಾರಿ ಬೆಲೆಯ ಬಟ್ಟೆ ಮತ್ತು ಇನ್ನಿತರ ವಸ್ತುಗಳನ್ನು ಇದು ಕ್ಷಣ ಮಾತ್ರದಲ್ಲಿ ಹಾಳು ಮಾಡುತ್ತದೆ. ಹಾಗಾಗಿ ಇಲಿಗಳನ್ನು ಸುಮ್ಮನೆ ಬಿಡುವುದು ಒಳ್ಳೆಯದಲ್ಲ ಇಲಿಗಳು ಸುಮಾರು 20 ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಒಂದು ಪುಟ್ಟ ಇಲಿ ಸಹ ದೊಡ್ಡ ಕೆಟ್ಟ ಪರಿಣಾಮವನ್ನು ಮನುಷ್ಯನ ಮೇಲೆ ಬೀರುತ್ತದೆ. ಈ ದಿನಗಳಲ್ಲಿ ನಾವು ಇಲಿಗಳ ಕಾಟದಿಂದ ತುಂಬ ಸಂಕಷ್ಟಗಳನ್ನು ಮತ್ತು ಹಾನಿಗಳನ್ನು ಎದುರಿಸುತ್ತ ಬಂದಿದ್ದೇವೆ. ಹಾಗಾಗಿ ಇಲಿಗಳನ್ನು ಸುಮ್ಮನೆ ಬಿಡುವ ಬದಲು ಸಾಯುವುದೇ ಮೇಲು ಅಂತ ಎಲ್ಲರ ಅಭಿಪ್ರಾಯ. ಏಕೆಂದರೆ ಅವುಗಳನ್ನು ಹಾಗೇ ಬಿಟ್ಟರೆ ಪುನಃ ಬರುತ್ತದೆ ಅವುಗಳ ಸಂಖ್ಯೆ ಹೆಚ್ಚಾಗುತ್ತದೆ. ಮನುಷ್ಯನಿಗೆ ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚಾಗುತ್ತದೆ ಹಾಗಾಗೀ ನೈಸರ್ಗಿಕ ವಿಧಾನದಿಂದ ಇಲಿಗಳನ್ನು ಹೇಗೆ ತೊಲಗಿಸುವ ವಿಧಾನ ಹೇಗೆಂದು ತಿಳಿಸುತ್ತೇನೆ..

ಮೊದಲನೇದಾಗಿ ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ, ಒಂದು ಟೇಬಲ್ ಸ್ಪೂನ್ ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟು, ಒಂದು ಟೇಬಲ್ ಸ್ಪೂನ್ ಸಕ್ಕರೆ ಈ ಮೂರನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಒಂದು ಮಿಶ್ರಣವನ್ನು ಇಲಿಗಳು ಬರುವಂತಹ ಜಾಗದಲ್ಲಿ ಇಡಬೇಕು ಈ ಪದಾರ್ಥಗಳನ್ನು ಇಲಿಗಳು ಸೇವಿಸಿದರೆ ಇಲಿಗಳ ದೇಹಕ್ಕೆ ವಿಷ ಹೋದಂತೆ ಆಗುತ್ತದೆ ಆಗ ಇಲಿಗಳು ಸಾವನ್ನಪ್ಪುತ್ತದೆ. ಅಷ್ಟೇ ಅಲ್ಲದೆ ಒಂದು ಬಾರಿ ಇಲಿಗಳು ಈ ಮಿಶ್ರಣವನ್ನು ಸೇವಿಸಿ ಇದರ ರುಚಿಯನ್ನು ಕಂಡು ಕೊಂಡರೆ ಇನ್ನೆಂದು ಕೂಡ ನಿಮ್ಮ ಮನೆಯ ಬಳಿ ಇಲಿಗಳು ಸುಳಿಯುವುದಿಲ್ಲ. ಹಾಗಾಗಿ ಇದೊಂದು ನೈಸರ್ಗಿಕ ವಿಧಾನ ಅಂತಾನೆ ಹೇಳಬಹುದು ಇದರಿಂದ ಮನೆಯಲ್ಲಿ ಇರುವಂತಹ ಸದಸ್ಯರಿಗೆ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.

By admin

Leave a Reply

Your email address will not be published. Required fields are marked *