ಪ್ರತಿನಿತ್ಯ ಎರಡು ಟೇಬಲ್ ಸ್ಪೂನ್ ಈ ಒಂದು ಮಿಶ್ರಣವನ್ನು ಸೇವಿಸಿ ಸರ್ವ ಕಾಯಿಲೆಗಳಿಂದಲೂ ಕೂಡ ಮುಕ್ತಿಯನ್ನು ಪಡೆಯರಿ. ಸಾಮಾನ್ಯವಾಗಿ ನಮ್ಮ ಪ್ರಕೃತಿಯಲ್ಲಿ ದೊರೆಯುವಂತಹ ಆಹಾರ ಪದಾರ್ಥಗಳಿಂದ ನಮಗೆ ಹಲವಾರು ರೀತಿಯಾದಂತಹ ಆರೋಗ್ಯ ಪ್ರಯೋಜನಗಳು ಇದೆ. ಅದರಲ್ಲಿ ಬೂದಗುಂಬಳಕಾಯಿ ಕೂಡ ಒಂದು ಇದರಲ್ಲಿ ಹೇರಳವಾಗಿ ಔಷಧಿಯ ಗುಣ ಲಕ್ಷಣಗಳು ಇದೆ. ಈ ಒಂದು ಪದಾರ್ಥದಿಂದ ತಯಾರಿಸಿದ ಮಿಶ್ರಣವನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವಂತಹ ಎಲ್ಲಾ ರೀತಿಯಾದಂತಹ ಪೋಷಕಾಂಶಗಳು ದೊರೆಯುತ್ತದೆ. ಅಷ್ಟೇ ಅಲ್ಲದೆ ಸಕಲ ನೋವುಗಳಿಗೂ ಕೂಡ ಇದು ರಾಮಬಾಣ ಅಂತನೇ ಹೇಳಬಹುದು. ಮೊದಲಿಗೆ ಒಂದು ಬೂದು ಗುಂಬಳಕಾಯಿಯನ್ನು ತೆಗೆದುಕೊಂಡು ಅದರ ಮೇಲಿರುವ ಸಿಪ್ಪೆಯನ್ನು ತೆಗೆದು ಒಳಗೆ ಇರುವಂತಹ ಬೀಜವನ್ನು ಕೂಡ ತೆಗೆದುಕೊಳ್ಳಬೇಕು. ನಂತರ ಇದನ್ನು ಸಣ್ಣದಾಗಿ ತುರಿದುಕೊಳ್ಳಿ ಅಥವಾ ಮಿಕ್ಸಿಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.

ಈಗ ಒಂದು ಕಾಟನ್ ಬಟ್ಟೆಯ ಸಹಾಯದಿಂದ ಇದರ ರಸವನ್ನು ಶೋಧಿಸಿಕೊಳ್ಳಬೇಕು. ನಂತರ ಇದರ ಸಿಪ್ಪೆಯನ್ನು ಹಾಗೆಯೇ ಇಡಬೇಕು ಈಗ ಒಂದು ಪ್ಯಾನ್ ಗೆ 7 ರಿಂದ 8 ಟೇಬಲ್ ಸ್ಪೂನ್ ತುಪ್ಪವನ್ನು ಹಾಕಿ ನಂತರ ತುರಿದುಕೊಂಡ ಕುಂಬಳಕಾಯಿಯನ್ನು ಇದರಲ್ಲಿ ಹಾಕಿ ಹತ್ತು ನಿಮಿಷಗಳ ಕಾಲ ಇದನ್ನು ಫ್ರೈ ಮಾಡಿಕೊಳ್ಳಬೇಕು. ಈಗ ಬೂದಗುಂಬಳಕಾಯಿ ರಸಕ್ಕೆ ಏಳರಿಂದ ಎಂಟು ಟೇಬಲ್ ಸ್ಪೂನ್ ಕಲ್ಲು ಸಕ್ಕರೆಯನ್ನು ಹಾಕಿ ಇದನ್ನು ನೀರಿನಲ್ಲಿ ನೆನೆಯಲು ಬಿಡಬೇಕು. ಬೂದಗುಂಬಳಕಾಯಿ ಸಿಪ್ಪೆ ಚೆನ್ನಾಗಿ ಫ್ರೈಯಾಗಿ ಬಣ್ಣ ಬದಲಾದ ನಂತರ ಕಲ್ಲು ಸಕ್ಕರೆ ನೀರನ್ನು ಇದಕ್ಕೆ ಹಾಕಿ ಚೆನ್ನಾಗಿ ಇದನ್ನು ಐದು ನಿಮಿಷಗಳ ಕಾಲ ಕುದಿಸಿ ಕೊಳ್ಳಬೇಕು. ಇದು ಗಟ್ಟಿ ಮಿಶ್ರಣಕ್ಕೆ ಬಂದ ನಂತರ ಇದಕ್ಕೆ ದಾಲ್ಚಿನ್ನಿ ಪುಡಿ, ಹಿಪ್ಪಳಿ ಪುಡಿ, ಜಾಯಿಕಾಯಿ ಪುಡಿ, ಕರಿಮೆಣಸು, ಒಣ ಶುಂಠಿ, ಏಲಕ್ಕಿ ಪುಡಿ ಇವೆಲ್ಲವನ್ನು ಕೂಡ ಕಾಲು, ಕಾಲು ಟೇಬಲ್ ಸ್ಪೂನ್ ಹಾಕಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಬೇಕು. ತದನಂತರ ಇದಕ್ಕೆ ನಾಲ್ಕರಿಂದ ಐದು ಟೇಬಲ್ಸ್ಪೂನ್ ಜೇನುತುಪ್ಪವನ್ನು ಹಾಕಿ ಮಿಕ್ಸ್ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿ ಇದನ್ನು ಶೇಖರಣೆ ಮಾಡಿಟ್ಟುಕೊಳ್ಳಬೇಕು. ಪ್ರತಿನಿತ್ಯ ಬೆಳಗ್ಗೆ ಹಾಗೂ ರಾತ್ರಿ ಒಂದು ಟೇಬಲ್ ಸ್ಪೂನ್ ಈ ಮಿಶ್ರಣವನ್ನು ಸೇವಿಸಬೇಕು.

By admin

Leave a Reply

Your email address will not be published. Required fields are marked *