ಈಗ ಎಲ್ಲೆಡೆ ಕೂಡ ಕೋರೋನಾದ ಹಾವಳಿ ಹೆಚ್ಚಾಗಿದೆ ನಮ್ಮ ಭಾರತ ದೇಶಕ್ಕೆ ಅಲ್ಲದೆ ಇಡೀ ವಿಶ್ವಕ್ಕೆ ಕೋರೋನಾ ಎಂಬ ಮಹಾಮಾರಿ ರೋಗ ಬಂದು ವರ್ಷಗಳು ಕಳೆದಿದ್ದರೂ ಕೂಡ ಇನ್ನೂ ಅದರ ಪ್ರಭಾವ ಕಡಿಮೆಯಾಗಿಲ್ಲ. ಈ ಮಧ್ಯದಲ್ಲಿ ಸ್ವಲ್ಪ ಕಡಿಮೆಯಾದಂತೆ ಕಂಡು ಬಂದರೂ ಕೂಡ ಈಗ ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಕಂಡು ಬರುತ್ತದೆ. ಈ ರೀತಿ ಸೋಂಕು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ನ್ಯೂಸ್ ಚಾನಲ್ ಗಳು ನಿರಂತರವಾಗಿ 24 ಗಂಟೆಯೂ ಕೂಡ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಬದಲು ಜನರಿಗೆ ಎಚ್ಚರಿಕೆ ಗಂಟೆಯ ಜೊತೆಗೆ ತಮ್ಮ ಪ್ರಾಣವು ಸಂಕಷ್ಟದಲ್ಲಿ ಇದೆ ಎಂಬುದನ್ನು ತಿಳಿಸುತ್ತಿದ್ದಾರೆ. ಸಾಮಾನ್ಯವಾಗಿ ನಾವು ಕೊರೊನಾದಿಂದ ಜಾಗೃತಿಯನ್ನು ಪಡೆದುಕೊಳ್ಳಬೇಕು ಎಂಬ ಮನೋಭಾವನೆ ಜನರಲ್ಲಿ ಮೂಡುತ್ತಿಲ್ಲ. ಬದಲಿಗೆ ನಾವು ಆಚೆ ಹೋದರೆ ಸಾಕು ನಮ್ಮ ಪ್ರಾಣವೇ ಹೋಗುತ್ತದೆ ಎಂಬಂತೆ ನ್ಯೂಸ್ ಚಾನೆಲ್‌ಗಳು ವರದಿ ಮಾಡಿಬಿಟ್ಟಿದೆ.

ಜನರಿಗೆ ಬೇಕಾಗಿರುವುದು ಜಾಗೃತಿ ಹಾಗೂ ಕೋರೋನಾದ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳು ಮತ್ತು ನಿಯಮಗಳ ಬಗ್ಗೆ ಅರಿವು. ಆದರೆ ಯಾವುದೇ ಮೀಡಿಯಾ ಚಾನಲ್ ಗಳು ಈ ಕೆಲಸವನ್ನು ಮಾಡುತ್ತಿಲ್ಲ ಬದಲಿಗೆ ಜನರನ್ನು ಟಾರ್ಗೆಟ್ ಮಾಡುತ್ತಾ ಅವರಲ್ಲಿ ಇಲ್ಲ ಸಲ್ಲದ ಭಯವನ್ನು ಹುಟ್ಟಿಸುತ್ತಿದ್ದಾರೆ. ಇಂತಹ ವೇಳೆಯಲ್ಲಿ ಜನರು ನ್ಯೂಸ್ ಗಳನ್ನು ನೋಡುವುದೇ ಬೇಡ ಎಂಬಂತೆ ಅವರ ಮನಸ್ಸಿನಲ್ಲಿ ಮನೋಭಾವನೆ ಮೂಡಿ ಬಂದಿದೆ. ಈ ಒಂದು ವೇಳೆಯಲ್ಲಿ ಎಲ್ಲಾ ನ್ಯೂಸ್ ಚಾನೆಲ್ ಗಳನ್ನು ಮೀರಿಸುವಂತಹ ಒಂದು ನಿದರ್ಶನ ಇಲ್ಲಿ ನಡೆದಿದೆ. ಡಿಡಿ ಚಂದನದಲ್ಲಿ ವಾರ್ತೆ ಹೇಳುವ ಮಹಿಳೆಯೊಬ್ಬಳು ಕೋರೋನಾದ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಹೇಳಿದ ನಾಲ್ಕು ಮಾತು ಇದೀಗ ಇಡೀ ದೇಶದಲ್ಲಿ ವೈರಲ್ ಆಗುತ್ತಿದೆ. ಆ ಮಾತು ಯಾವುದು ಎಂಬುದನ್ನು ತಿಳಿಯಲು ಕೆಳಗಿನ ವಿಡಿಯೋ ಸಂಪೂರ್ಣವಾಗಿ ನೋಡಿ.

By admin

Leave a Reply

Your email address will not be published. Required fields are marked *