ಹಾಯ್ ಗೆಳೆಯರೇ ಇಂದು ಕಣ್ಣೀರಿನ ಮನ ಮಿಡಿಯುವ ವಿಚಾರ ಈ ಕಳೆದ ವರುಷದಿಂದ ಭಾರತೀಯ ಚಿತ್ರರಂಗದ ಸಮಯವೇ ಸರಿಯಿಲ್ಲ ಎಂದಿನಿಸುತ್ತಿದೆ. ಯಾಕೆ ಅಂದ್ರೆ ಒಂದೆಡೆ ಕೊ*ರೋ*ನಾ ಆರ್ಭಟವೂ ದಿನದಿಂದ ದಿನಕ್ಕೆ ತನ್ನ ರೌದ್ರ ರೂಪ ಭೀಕರ ತೋರುತ್ತಿದ್ದರೆ. ಇತ್ತ ಚಿತ್ರರಂಗದಲ್ಲಿ ಕಿರಿಯ ಕಲಾವುದರುಗಳಿಂದ ಹಿಡಿದು ಹಿರಿಯ ಕಲಾವಿದರುಗಳವರೆಗೂ ಸಾಲು ಸಾಲು ಮಂದಿ ಭೂಮಿಯ ಮೇಲೆ ತಮ್ಮ ಆಟವನ್ನು ಮುಗಿಸಿ, ಕಾಣದ ಲೋಕಕ್ಕೆ ತೆರಳುತ್ತಿದ್ದಾರೆ.ಇದೀಗ ಮತ್ತೊರ್ವ ಖ್ಯಾತ ಕಲಾವಿದರು ಇಹ ಲೋಕ ತ್ಯಜಿಸಿದ್ದು, ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ ಅವರು ತೀವ್ರ ಹೃದಯಾಘಾತದಿಂದ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದು ಇದೀಗ ಮುಂಜಾನೆ ಕೊನೆಯು ಸಿರೆಳೆದಿದ್ದಾರೆ. ಹೌದು 59 ವರ್ಷದ ಖ್ಯಾತ ಹಾಸ್ಯ ನಟ ವಿವೇಕ್​ ಅವರಿಗೆ ಇದ್ದಕಿದ್ದ ಹಾಗೆ ಹೃದಯ ನಾಳದಲ್ಲಿ ತೊಂದರೆ ಉಂಟಾಗಿದ್ದು, ಅವರನ್ನು ಐಸಿಯುೂ ನಲ್ಲಿ ಇರಿಸಲಾಗಿತ್ತು.ಆದರೆ

ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 4.45ಕ್ಕೆ ವಿವೇಕ್ ಬಾರದ ಲೋಕದತ್ತ ಪ್ರಯಾಣ ನಡೆಸಿದ್ದಾರೆ. ಮಗನ ಸಾವಿನ ದುರಂತದಿಂದ ಚೇತರಿಸಿಕೊಳ್ಳುವುದರೊಳಗೆ ವಿಧಿಯು ಈ ಹಾಸ್ಯ ನಟನನ್ನ ಮಗನ ಬಳಿ ಸೇರಿಸಿತು ನೋಡಿ.. ತಮಿಳಿನಲ್ಲಿ ಬರೋಬ್ಬರಿ 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು, ತಮ್ಮ ಅತ್ಯದ್ಭುತ ಅಭಿನಯದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದರು. ನಟ ವಿವೇಕ್ ಅವರ ಹೃದಯನಾಳದಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಚೆನ್ನೈನ ಆಸ್ಪತ್ರೆಗೆ ನಿನ್ನೆಯಷ್ಟೆ(ಶುಕ್ರವಾರ) ದಾಖಲಾಗಿದ್ದರು.ಇತ್ತೀಚೆಗಷ್ಟೇ ಕೊ*ರೋ*ನಾ ಲಸಿಕೆ ತೆಗೆದುಕೊಂಡಿದ್ದ ಅವರು ಇದರ ಅಡ್ಡ ಪರಿಣಾಮದಿಂದ ಹೃದಯಾಘಾತ ಉಂಟಾಗಿರಬಹುದು ಎಂದು ಹೇಳಲಾಗುತದತಿದೆ. ಆದರೆ ವೈದ್ಯರು ಮಾತ್ರ ಈ ವಿಚಾರವನ್ನು ತಳ್ಳಿ ಹಾಕಿದ್ದು, ವೆಂಟ್ರಿಕ್ಯುಲರ್ ಫೈಬ್ರಿಲೇಷನ್ ಎಂಬ ಹೃದಯ ಸಂಬಂಧಿ ತೊಂದರೆ ಇದ್ದ ವಿವೇಕ್ ಅವರಿಗೆ ಮೆದುಳಿಗೆ ರಕ್ತ ಪೂರೈಕೆ ಕಡಿಮೆಯಾಗಿತ್ತು ಆದುದರಿಂದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಕಾಗಿತ್ತು ಎಂದು ತಿಳಿಸಿದ್ದಾರೆ.

ಕಾಲಿವುಡ್ ನಲ್ಲಿ ಚಿನ್ನ ಕಲೈವಾನರ್ ಎಂದೇ ಜನಪ್ರಿಯಗೊಂಡಿದ್ದ ಹಾಸ್ಯ ನಟ ವಿವೇಕ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಅಜಿತ್ , ವಿಕ್ರಮ್ ಹೀಗೆ ಎಲ್ಲಾ ಖ್ಯಾತ ನಟರ ಜೊತೆ ಅಭಿನಯಿಸಿ ತನ್ನದೇ ಆದ ಛಾಪು ಮೂಡಿಸಿದ್ದರು. ತಮ್ಮ ನೇರ ನುಡಿಯಿಂದ ಪ್ರಸಿದ್ಧರಾಗಿದ್ದ ಅವರು ಪರಿಸರ ಸಂರಕ್ಷಣೆಯಲ್ಲಿ ಹೆಚ್ಚು ಆಸಕ್ತಿ ತೋರುತಿದ್ದರು.ಅಲ್ಲದೇ ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಅವರ ಚಿಂತನೆಗಳು ಮತ್ತು ಜೀವನಶೈಲಿಯಿಂದ ನಟ ವಿವೇಕ್ ಬಹಳ ಪ್ರಭಾವಿತರಾಗಿದ್ದರು. ಇದೀಗ ಇವರ ಅಕಾಲಿಕ ಮರಣ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದ್ದು ಪ್ರತಿಯೊಬ್ಬರು ಕೂಡ ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ.ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ನೀಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *