ವಿವಾಹ ವಾರ್ಷಿಕೋತ್ಸವದಂದು ವಿಡಿಯೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ.... » Karnataka's Best News Portal

ವಿವಾಹ ವಾರ್ಷಿಕೋತ್ಸವದಂದು ವಿಡಿಯೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ….

ಕಳೆದ ವರ್ಷವಷ್ಟೇ ಹೆಚ್ ಡಿ ಕುಮಾರಸ್ವಾಮಿ ಅವರ ಏಕೈಕ ಜೇಷ್ಠ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿಯ ನಡುವೆ ವಿವಾಹವಾಗಿದೆ. ಆ ಸಮಯದಲ್ಲಿ ಕೋರೋನಾ ಸೊಂಕು ಎಲ್ಲೆಡೆ ಇದ್ದರೂ ಕೂಡ ಅವರ ಕುಟುಂಬಸ್ಥರು ಹಾಗೂ ಬಹಳ ಆತ್ಮೀಯ ವ್ಯಕ್ತಿಗಳ ನಡುವೆ ತುಂಬಾ ಸರಳವಾಗಿ ನಿಖಿಲ್ ಕುಮಾರಸ್ವಾಮಿ ಅವರು ರೇವತಿ ಅವರನ್ನು ಮದುವೆ ಮಾಡಿಕೊಂಡರು. ಇದೀಗ ಈ ಮದುವೆಗೆ ಒಂದು ವರ್ಷಗಳ ಕಾಲ ನಡೆದಿದೆ ಈ ಒಂದು ವರ್ಷ ಸಂಪೂರ್ಣವಾಗಿ ಪೂರೈಸಿದ ಖುಷಿಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಮಡದಿ ರೇವತಿ ಅವರೊಂದಿಗೆ ಇರುವಂತಹ ಕೆಲವೊಂದು ಫೋಟೋಗಳನ್ನು ಹಂಚಿ ಕೊಂಡಿದ್ದಾರೆ. ಆದರೆ ಈ ಬಾರಿ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಏಕೆಂದರೆ ನಿಖಿಲ್ ಕುಮಾರಸ್ವಾಮಿ ಅವರಿಗೂ ಕೂಡ ಕೋರೋನಾ ಸೊಂಕು ಪಾಸಿಟಿವ್ ಕಂಡು ಬಂದಿದೆ. ಅಷ್ಟೇ ಅಲ್ಲದೆ ಅವರ ತಂದೆ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಈ ಸೊಂಕು.

ಕಂಡು ಬಂದಿರುವ ಕಾರಣ ಎಲ್ಲರೂ ಕೂಡ ಮನೆಯಲ್ಲಿಯೇ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಕೂಡ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಮಡದಿಯೊಂದಿಗೆ ಕಳೆದಂತಹ ಕೆಲವೊಂದು ಸಂತೋಷಕರವಾದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರ ಮೂಲಕ ತಮ್ಮ ಮಡದಿಗೆ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಸಲ್ಲಿಸಿದ್ದಾರೆ. ಈ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ನೋಡಿದಂತಹ ಅಭಿಮಾನಿಗಳು ತುಂಬಾನೇ ಖುಷಿ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಈ ಜೋಡಿ ಸದಾ ಕಾಲ ಹೀಗೆ ಇರಬೇಕು ಎಂದು ಶುಭವನ್ನು ಕೂಡ ಹಾರೈಸಿದ್ದಾರೆ. ಆ ಫೋಟೋಗಳನ್ನು ನೋಡಲು ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
[irp]


crossorigin="anonymous">