ಚಂದನ್ ಮತ್ತು ಕವಿತಾ ರವರು ಲಕ್ಷೀ ಬಾರಮ್ಮ ಸೀರಿಯಲ್ ನ ಮೂಲಕ ಭೇಟಿಯಾಗಿ ನಂತರ ಸ್ನೇಹವಾಗಿ ನಂತರ ಎಷ್ಟೋ ಕಾಲಗಳ ಸ್ನೇಹ ನಂತರದ ಪ್ರೀತಿಗೆ ತಿರುಗಿ ಈಗ ಮದುವೆಯ ಹಂತಕ್ಕೆ ಬಂದು ಮದುವೆಯನ್ನು ಮಾಡಿಕೊಂಡಿದ್ದಾರೆ. ಲಾಕ್ ಡೌನ್ ಸಮಯವಾದ್ದರಿಂ ದ ಈ ಜೋಡಿ ಅತಿ ಸರಳವಾಗಿ ಕೇವಲ 40 ಜನಗಳು ಇರುವಹಾಗೆ ಕೇವಲ ಆಪ್ತರನ್ನು ಆಹ್ವಾನಿಸಿ ಮದುವೆಯನ್ನು ಮಾಡಿಕೊಂಡರು. ಕಿರು ತೆರೆಯ ಸಖತ್ ಕ್ಯೂಟ್‌ ಜೋಡಿ ಕವಿತಾ ಮತ್ತು ಚಂದನ್‌ ಮದ್ವೆ ಯಾಗಿ ಕೆಲವು ದಿನಗಳಾದವು. ಈಗಲೂ ಕವಿತಾ ತಮ್ಮ ಮದುವೆಯ ಕಲರ್‌ಫುಲ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋ ಸ್ಟ್ ಮಾಡುತ್ತಲೇ ಇದ್ದಾರೆ. ಮದುವೆಯ ಸಿಹಿ ಮೆಮೊರಿಯನ್ನು ಮತ್ತೆ ಮತ್ತೆ ಮೆಲುಕು ಹಾಕೋ ಖುಷಿ ಕವಿತಾ ಅವರದ್ದು.

ಇಷ್ಟೆಲ್ಲ ಆದ್ಮೇಲೆ ತಮ್ ಹನಿಮೂನ್ ವಿಚಾರ ಹೇಳದೇ ಇರ್ತಾರಾ. ಯಾವ ಕಡೆ ಹನಿಮೂನ್‌ಗೆ ಹೋಗಬಹುದು ಈ ಬ್ಯೂಟಿಫುಲ್‌ ಜೋ ಡಿ. ಆಪ್ತವಲಯದಲ್ಲಿ ಕೇಳಿಬಂದಿರುವ ಮಾತಿನ ಪ್ರಕಾರ ಈ ಜೋಡಿ ಲಾಕ್‌ಡೌನ್‌ ತೆರೆದು ಪರಿಸ್ಥಿತಿ ಸುಧಾರಿಸಿದ ಮೇಲೆ ಹನಿಮೂನ್‌ ಪ್ಲಾನ್‌ ಮಾಡಿಕೊಂಡಿದ್ದಾರೆ. ವಿದೇಶಕ್ಕೆ ಹನಿಮೂನ್‌ಗೆ ಹೋಗೋದು ಬಹು ತೇಕ ಖಚಿತ. ಇವರಿಬ್ಬರೂ ಹಸಿರನ್ನು, ಬೆಟ್ಟ ಗುಡ್ಡಗಳನ್ನು ಬಹಳ ಇಷ್ಟ ಪಡುವ ಕಾರಣ ಸ್ವಿಜರ್‌ಲ್ಯಾಂಡ್‌ಗೆ ಹನಿಮೂನ್‌ ಟ್ರಿಪ್ ಹೋ ಗುವ ಸಾಧ್ಯತೆ ಇದೆ. ಅದು ಬಿಟ್ಟರೆ ಪೆರುವಿನಂಥಾ ಸುಂದರ ದೇಶಕ್ಕೆ ವಿಸಿಟ್‌ ಮಾಡಬಹುದು. ಅಷ್ಟರಲ್ಲಿ ಮಾಲ್ಡೀವ್ ಪ್ರವಾಸಿಗರಿಗೆ ಮುಕ್ತ ವಾಗಿದ್ದರೆ ಆ ಆಯ್ಕೆಯೂ ಇವರಿಗಿರುತ್ತೆ. ಹೀಗೆ ಸೋಶಿಯಲ್ ಮೀ ಡಿಯಾ ಗಳಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡು ಈ ಜೋಡಿ ಮಿಂಚುತ್ತಿದೆ.

By admin

Leave a Reply

Your email address will not be published. Required fields are marked *