ಸುಮಿತ್ರ ಒಂದು ಕಾಲದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ 1973 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ ನರ್ತನಾಶಾಲ ಎಂಬ ಚಿತ್ರದ ಮೂ ಲಕ ಚಿತ್ರರಂಗ ಪ್ರವೇಶ ಮಾಡಿದರು. ನಂತರ ಹಲವಾರು ತೆಲುಗು ತಮಿಳು ಕನ್ನಡ ಎಲ್ಲಾ ಭಾಷೆಯ ಚಿತ್ರಗಳಲ್ಲಿ ಸುಮಿತ್ರ ನಟಿಸಿದರು ಇನ್ನು ಸುಮಿತ್ರಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ ಅವರು ಕೂಡ ಕನ್ನಡ ಚಿತ್ರರಂಗದ ಟಾಪ್ ಹೀರೋಯಿನ್ ಆಗಿದ್ದಾರೆ. ಸುಮಿ ತ್ರಾ ರವರು ಕನ್ನಡ ಮಾತ್ರವಲ್ಲದೆ ತಮಿಳಿನಲ್ಲಿ ಶಿವಾಜಿ ಗಣೇಶನ್, ರಜನೀಕಾಂತ್, ಕಮಲಹಾಸನ್ ಇನ್ನು ಮುಂತಾದ ನಾಯಕ ನಟರ ಜೊತೆ ನಟಿಸಿ ದಕ್ಷಿಣ ಭಾರತದ ಖ್ಯಾತ ನಟಿಯಾದರು. ಕಾಲಾಂ ತರ ದಲ್ಲಿ ಸುಮಿತ್ರಾ ಅವರು ಪೋಷಕ ನಟಿಯಾಗಿ ಗುರುತಿಸಿಕೊಂಡರು ಕನ್ನಡ ತಮಿಳು, ತೆಲುಗು, ಮಲಯಾಳಂ ಎಲ್ಲಾ ಭಾಷೆಗಳಲ್ಲಿ ಪೋ ಷಕ ನಟಿಯಾಗಿ ನಟಿಸಿದರು.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರಾಮಾಚಾರಿ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ತಾಯಿಯಾಗಿ ಅಮೋಘ ಅಭಿನಯ ನೀಡಿದರು. ಅವರು ಕನ್ನಡದ ಖ್ಯಾತ ನಿರ್ದೇಶಕ ಡಿ ರಾಜೇಂದ್ರ ರವರ ಪತ್ನಿ ಡಿ ರಾಜೇಂದ್ರ ಬಾಬು ರವರು 2013ರಲ್ಲಿ ನಿಧನ ಹೊಂದಿದರು. ಸುಮಿತ್ರಾ ಮತ್ತು ಡಿ ರಾಜೇಂದ್ರ ಬಾಬು ರವರಿಗೆ ಉಮಾಶಂಕರಿ, ನಕ್ಷತ್ರ ಎಂಬ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ ಇವರಿಬ್ಬರು ಮಕ್ಕಳು ಸಹ ಕನ್ನಡ ತಮಿಳು ತೆಲುಗು ಮಲಯಾಳಂ ಚಿತ್ರಗಳಲ್ಲಿ ನಟಿಯಾಗಿ ಹಾಗು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಉಮಾಶಂಕರಿ ಕನ್ನಡದಲ್ಲಿ ಉಪ್ಪಿದಾದ ಎಂಬಿಬಿಎಸ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಮುಖ್ಯ ಚಿತ್ರವಾ ಗಿದೆ. ನಕ್ಷತ್ರದವರು ಗೋಕುಲ, ಹರೆ ರಾಮ ಹರೆ ಕೃಷ್ಣ, ಫೇರ್ ಅಂಡ್ ಲವ್ಲಿ ಚಿತ್ರ ಹಾಗೂ ಅನೇಕ ನಾಟಕಗಳಲ್ಲಿಯೂ ಸಹ ಇವರು ನಟನೆಯನ್ನು ಮಾಡಿದ್ದಾರೆ.

By admin

Leave a Reply

Your email address will not be published. Required fields are marked *