ಆಷಾಡ ಮಾಸದಲ್ಲಿ ಪ್ರತಿ ಶುಕ್ರವಾರ ಸಾಯಂಕಾಲ ಲಕ್ಷ್ಮಿ ಅಷ್ಟೋತ್ರ ಮಾಡುವುದರಿಂದ ಒಳ್ಳೆಯದಾಗುತ್ತದೆ. 108 ಹಸಿರು ಬಳೆಗಳು, 108 ಹಳದಿ ಬಳೆಗಳು, 108 ಕೆಂಪು ಬಳೆಗಳು ಗೌರಿ ಬಳೆಗಳು ಎಂದು ಕರೆಯುವ ಪುಟ್ಟದಾದಂತಹ ಬಳೆಗಳಿಂದ ಅಷ್ಟೋತ್ರ ಮಾಡಬೇಕು ಅಷ್ಟೋತ್ತರ ಹೇಳುತ್ತಾ ಒಂದೊಂದು ಬೆಳೆಗಳನ್ನು ಲಕ್ಷ್ಮಿಯ ಪಾದಕ್ಕೆ ಹಾಕುವುದು ನೀವು ಈ ಮೂರು ಬಣ್ಣದಲ್ಲಿ ಒಂದು ಬಣ್ಣದ ಬಳೆ ತೆಗೆದುಕೊಂಡರು ಸಾಕಾಗುತ್ತದೆ. ನಂತರ ಲಕ್ಷ್ಮಿ ಕವಡೆಗಳನ್ನು 9 ಬಳಸಬೇಕು, ಗೋಮತಿ ಚಕ್ರ 5 ಇರಬೇಕು, ಕಮಲದ ಬೀಜ 9 ಇರಬೇಕು ಲಕ್ಷ್ಮಿಗೆ ಇದು ತುಂಬಾ ಪ್ರಿಯವಾದದ್ದು. ಏಲಕ್ಕಿ 27 ತೆಗೆದುಕೊಂಡು ಅಷ್ಟೋತ್ತರ ಮಾಡಿದರೆ ತುಂಬಾನೆ ಒಳ್ಳೆಯದು ಇದರ ಸುಹಾಸನೆ ಲಕ್ಷ್ಮಿಗೆ ತುಂಬಾನೇ ಪ್ರಿಯವಾದದ್ದು ಲಕ್ಷ್ಮಿಗೆ ಬೆಲ್ಲ ಹಾಗೂಏಲಕ್ಕಿ ತುಂಬಾ ಪ್ರಿಯವಾದದ್ದು.

ಆದುದರಿಂದ ನೀವು ನೈವೇದ್ಯಕ್ಕೆ ಇದನ್ನು ಬಳಸಿ ಸಿಹಿ ತಿಂಡಿಗಳನ್ನು ಮಾಡಬೇಕು. 9 ಬೆಳ್ಳಿಯ ನಾಣ್ಯಗಳು ಹಾಗೂ 108 ಬೆಳ್ಳಿಯ ಹೂವುಗಳನ್ನು ತೆಗೆದುಕೊಂಡು ಅಷ್ಟೋತ್ರ ಮಾಡಬಹುದು. ಈ ಮೇಲೆ ತಿಳಿಸಿದಂತಹ ಯಾವುದಾದರೊಂದನ್ನು ನೀವು ತೆಗೆದುಕೊಂಡು ಅಷ್ಟೋತ್ತರ ಮಾಡಬಹುದು ಇಲ್ಲದಿದ್ದರೆ ಕುಂಕುಮವನ್ನು ಲಕ್ಷ್ಮಿ ಪಾದಕ್ಕೆ ಅರ್ಪಿಸುತ್ತ ಅಷ್ಟೋತ್ತರ ಮಾಡಿದರೆ ಅದರ ಕೂಡ ಫಲ ಲಭಿಸುತ್ತದೆ. ಇದನ್ನು ಶ್ರಾವಣ ಮಾಸದಲ್ಲಿ 4 ಶುಕ್ರವಾರಗಳು ಅಷ್ಟೋತ್ರ ಮಾಡು ವುದರಿಂದ ತುಂಬಾ ಒಳ್ಳೆಯದಾಗುತ್ತದೆ. ಇದನ್ನು ನೀವು ಆಷಾಡ ಶುಕ್ರವಾರ ದಲ್ಲಿಯೂ ಸಹ ಮಾಡಬಹುದು ಇದರಿಂದ ಲಕ್ಷ್ಮಿ ಸಂತೃಪ್ತ ರಾಗುತ್ತಾಳೆ ನಿಮ್ಮ ಮನೆಗೆ ಒಳ್ಳೆಯ ಫಲಗಳು ಲಭಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ನೋಡಿ.

.

By admin

Leave a Reply

Your email address will not be published. Required fields are marked *