ಸುದ್ದಿಗೋಷ್ಟಿ ನಡೆಸಿದ ದರ್ಶನ್, ನಿರ್ಮಾಪಕ ಉಮಾಪತಿ ಪರಿಚಯ ಆಗಿದ್ದು ನಿರ್ದೇಶಕ ಪ್ರೇಮ್ ಮೂಲಕ ಎಂದು ಹೇಳುತ್ತಾರೆ. ಅಲ್ಲದೆ ಪ್ರೇಮ್‌ ಬಗ್ಗೆ ಟೀಕೆ ಮಾಡಿ ಹೇಳಿಕೆ ನೀಡಿದ್ದಾರೆ. ಇದರಿಂದ ಬೇಸರ ಗೊಂಡ ಪ್ರೇಮ್ ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿ ಬೇಸರ ವ್ಯಕ್ತ ಪಡಿಸಿದ್ದಾರೆ ಅದಾದ ನಂತರ ಪ್ರೇಮ್ ಪತ್ನಿ ರಕ್ಷಿತಾ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ರಕ್ಷಿತಾ ಅವರು ಚಿತ್ರರಂಗದಲ್ಲಿ ಅವರವರ ಕೆಲಸವೇ ಅವರು ಎಂಬುದನ್ನು ಗುರುತಿಸುತ್ತದೆ ಇಲ್ಲಿ ಎಲ್ಲರನ್ನೂ ಪ್ರೀತಿಸುತ್ತೇವೆ ಹಾಗೆಯೇ ಎಲ್ಲರಿಗು ಗೌರವ ಕೊಡುತ್ತೇವೆ ಅಂತ ಹೇಳಿದ್ದಾರೆ. ಕನ್ನಡ ಚಿತ್ರರಂಗ ನಮ್ಮ ಮನೆ ಇದ್ದಂತೆ ಇಲ್ಲಿ ಯಾರು ದೊಡ್ಡವರಲ್ಲ ಯಾರು ಚಿಕ್ಕವರೆಲ್ಲ. ಇಲ್ಲಿ ಎಲ್ಲರೂ ಸಮಾನರು ಆದರೆ ಅವರವರ ಕೆಲಸವೇ ಅವರು ಏನೆಂಬುದನ್ನು ಗುರುತಿಸುತ್ತದೆ.

ಇಲ್ಲಿ ನಾವು ಎಲ್ಲರನ್ನೂ ಪ್ರೀತಿಸುತ್ತೇನೆ ಎಲ್ಲರಿಗೂ ಗೌರವ ಕೊಡುತ್ತೇವೆ ಆದರೆ ಇಂತಹ ಘಟನೆಗಳು ನಡೆದಾಗ ಬೇಸರವಾಗುತ್ತದೆ ಇಲ್ಲಿ ದುರ ದೃಷ್ಟಕರ ಕೆಲವೊಂದು ವಿಚಾರಗಳು ತೆರೆದುಕೊಳ್ಳುತ್ತಿರುವುದು ಮನಸ್ಸಿಗೆ ತುಂಬಾ ಬೇಸರವನ್ನು ಉಂಟು ಮಾಡುತ್ತಿದೆ ಎಂದು ಬರೆದುಕೊಂಡಿದ್ದಾ ರೆ. ಈ ಕುರಿತು ಪೋಸ್ಟ್ ಹಾಕಿರುವ ರಕ್ಷಿತಾ ಯಾರಾದರೂ ಒಬ್ಬರು ಇನ್ನೊಬ್ಬರ ನಡೆಯ ಬಗ್ಗೆ ಮಾತನಾಡುವಾಗ ತಾವು ತಮ್ಮ ಸ್ವಂತ ಬದುಕಿನಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಿಕೊಳ್ಳಬೇಕು ಜನರ ಎದುರಿಗೆ ಏನು ಮಾತನಾಡುತ್ತೇವೆ ಯಾವಾಗ ಮಾತನಾಡು ತ್ತಿದ್ದೇವೆ ಎಂಬುದು ಗೊತ್ತಿರುವುದು ಮುಖ್ಯವಾಗಿರುತ್ತದೆ ಎಂದು ರಕ್ಷಿತಾ ಪ್ರೇಮ್ ಅಸಮಾಧಾನ ವ್ಯಕ್ತಪಡಿಸಿ ಕೊಂಡಿದ್ದಾರೆ. ಕನ್ನಡ ಚಿತ್ರರಂಗ ದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಪ್ರೇಕ್ಷಕರಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿವೆ.

By admin

Leave a Reply

Your email address will not be published. Required fields are marked *