ಈಗ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲೂ ಸಹ ನಟ ದರ್ಶನ್ ರವರ ಕಾಂಟ್ರೋವರ್ಸಿಗಳು ಸದ್ದು ಮಾಡುತ್ತಿದೆ. ಇಂದ್ರಜಿತ್ ಲಂಕೇಶ್ ಮತ್ತು ದರ್ಶನ್ ಅವರ ವಾದ ವಿವಾದ ಮುಂದುವರೆದಿದ್ದು ಇದರೊಂ ದಿಗೆ ಪ್ರೇಮ್ ಅವರ ಹೆಸರು ಸಹ ಕೇಳಿಬರ್ತಿದೆ ಇದರಲ್ಲಿ ಯಾರದು ತಪ್ಪು ಯಾರದು ಸರಿ ಎಂಬ ವಿಚಾರಣೆಗಳು ನಡೆಯುತ್ತಿದೆ. ಈ ಮಧ್ಯೆ ನಟ ದರ್ಶನ್ ರವರ ಜೀವನದಲ್ಲಿ ನಡೆದಂತಹ ದರ್ಶನ್ ಮತ್ತು ನಿಖಿ ತಾ ತುಕ್ರಾಲ್ ಕಾಂಟ್ರವರ್ಸಿ ಸಹ ಕೇಳಿಬರುತ್ತಿದೆ ಇಬ್ಬರು ಯೋಧ ಮತ್ತು ಪ್ರಿನ್ಸ್ ಎಂಬ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು ಅಭಿಮಾ ನಿಗಳು ಇವರ ನಟನೆಯನ್ನು ನೋಡಿ ಇವರ ಜೋಡಿಯನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಇಂತಹ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಏನೋ ಇದೆ ಎಂಬ ಮಾತುಗಳು ಕೇಳಿ ಬರುತ್ತದೆ.

ಅಂತಹ ಸಂದರ್ಭದಲ್ಲಿ ದರ್ಶನ್ ರವರ ಪತ್ನಿ ವಿಜಯಲಕ್ಷ್ಮಿ ಕೂಡ ಇದರ ವಿರುದ್ಧ ತಿರುಗಿಬಿದ್ದು ಆಕ್ರೋಶ ವ್ಯಕ್ತಪಡಿಸಿ ನಿಖಿತ ತಮ್ಮ ಜೀವನದಲ್ಲಿ ಹುಳಿ ಹಾಕುತ್ತಿದ್ದಾರೆ ಎಂದು ಹೇಳಿದಾಗ ವಿಜಯಲಕ್ಷ್ಮಿ ರವರ ಮೇಲೆ ದರ್ಶನ್ ರವರು ಕೈ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದು ದರ್ಶನ್ ರವರು ಒಂದು ತಿಂಗಳುಗಳ ಕಾಲ ಜೈಲಿನಲ್ಲಿ ಸಹ ಇರುತ್ತಾರೆ. ಇಂತಹ ಸಂದರ್ಭದಲ್ಲಿ ನಿಖಿತಾ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಮೂರು ವರ್ಷಗಳ ಕಾಲ ಬ್ಯಾನ್ ಮಾಡುವುದಾಗಿ ತಿಳಿಸುತ್ತಾರೆ ಆಗ ಪಾರ್ವತಮ್ಮ ರಾಜಕುಮಾರ್ ಒಂದು ಹೆಣ್ಣು ಮಗು ವಿನ ವಿರೋಧವಾಗಿ ನಿಂತು ಹೀಗೆ ಮಾಡುವುದು ಬೇಡ ಬ್ಯಾನ್ ತೆಗೆಯುವುದಾಗಿ ಹೇಳುತ್ತಾರೆ ನಿರ್ದೇಶಕರು ಎಲ್ಲರೂ ಸೇರಿ ಅವನನ್ನು ತೆರವುಗೊಳಿಸುತ್ತಾರೆ. ನಂತರ ದರ್ಶನ್ ಮತ್ತು ನಿಖಿತಾ ರವರು ಸಂಗೊಳ್ಳಿರಾಯಣ್ಣ ಎಂಬ ಸಿನಿಮಾದಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ.


.

By admin

Leave a Reply

Your email address will not be published. Required fields are marked *