“ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ”. ಮೂರು ದಳಗಳಿಂದ ಕೂಡಿದ ಮೂರು ಗುಣಗಳಿಂದ ಕೂಡಿದ ಅಂದರೆ ಸತ್ವ, ರಜ, ತಾ ಮಸ ಗುಣಗಳಿಂದ ಕೂಡಿದ ಮತ್ತು ಶಿವನ ಮೂರು ಕಣ್ಣುಗಳಿಗೆ ಮೂರು ದಳಗಳನ್ನು ಶಿವನ ತ್ರಿಶೂಲಕ್ಕೆ ಹೋಲಿಸುತ್ತಾರೆ. ಇದರಲ್ಲಿ ತುಂಬಾ ಔಷಧೀಯ ಗುಣಗಳು ಹೊಂದಿದೆ ಇದರಲ್ಲಿ ಮುಳ್ಳು ಇರುವ ಮತ್ತು ಮುಳ್ಳು ಇರದ ಬಿಲ್ವ ಪತ್ರೆ ಇರುತ್ತದೆ. ಇದು ಬ್ಯಾಕ್ಟೀರಿಯಾ ನಾಶ ಮಾಡುವ ಗುಣ ಹೊಂದಿದೆ. ಹಲವಾರು ರೀತಿಯ ಚರ್ಮ ರೋಗಗಳಿಗೆ ರಾಮಬಾಣ ಬಾಯಲ್ಲಿ ಆಗುವ ಅಲ್ಸರ್ ಗೆ ಇದು ತುಂಬಾ ಉಪಯೋಗಕಾರಿ ಇತ್ತೀಚಿಗೆ ನಮ್ಮ ಆಹಾರಕ್ರಮ ಸರಿಯಿಲ್ಲದ ಕಾರಣ ಆಸಿಡಿಟಿ, ಗ್ಯಾಸ್, ಇನ್ ಡೈಜೇಷನ್ ಆಗಿ ಹಸಿವು ಇರುವುದಿಲ್ಲ.

ಇಂಥವರು ದಿನಕ್ಕೆರಡು ಎರಡು ಬಿಲ್ವಪತ್ರೆ ಸೇವಿಸುತ್ತ ಬಂದರೆ ನಮ್ಮ ಜೀರ್ಣಾಂಗ ವ್ಯವಸ್ಥೆ ಸರಿಹೋಗುತ್ತದೆ. ಬಿಲ್ವಪತ್ರೆ ನುಣ್ಣಗೆ ಅರೆದು ಕಣ್ಣಿನ ಮೇಲೆ ಒಂದು ತೆಳುವಾದ ಬಟ್ಟೆ ಹಾಕಿ ಅದರ ಮೇಲೆ ಪೇಸ್ಟ್ ಹಾಕಿದರೆ ಕಣ್ಣು ತಂಪಾಗುತ್ತದೆ ಕಣ್ಣು ಹುರಿ ಕಣ್ಣಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ದೂರವಾಗುತ್ತದೆ. ಎದೆಯಲ್ಲಿ ಕಫ ಕಟ್ಟಿದ್ದರೆ ಬಿಲ್ವ ಪತ್ರೆ ಪೇಸ್ಟ್ ಎದೆಯ ಮೇಲೆ ಹಚ್ಚುವುದರಿಂದ ಕಫ ಕರಗುತ್ತದೆ ಕೆಮ್ಮು ಕಡಿಮೆಯಾಗುತ್ತದೆ. ಯಾರಿಗೆ ಮಂಡಿ ನೋವಿನ ಸಮಸ್ಯೆ ಇದೆಯೋ ಅವರು ಬಿಲ್ವಪತ್ರೆ ಕಾಯಿಯನ್ನು ಸುಟ್ಟು ಅದರ ಒಳಗೆ ಇರುವಂತಹ ತಿರುಳನ್ನು ಮಂಡಿಗೆ ಹಚ್ಚುವುದರಿಂದ ಮಂಡಿ ನೋವು ಕಡಿಮೆಯಾ ಗುತ್ತದೆ. ಬಿಪಿ ಮತ್ತು ಶುಗರ್ ಜಾಸ್ತಿ ಇರುವಂತಹವರು ಬಿಲ್ವಪತ್ರೆ ಯನ್ನು ಸೇವಿಸುತ್ತ ಬಂದರೆ ಬಿಪಿ ಮತ್ತು ಶುಗರ್ ಕಂಟ್ರೋಲ್ ಗೆ ಬರುತ್ತದೆ.

By admin

Leave a Reply

Your email address will not be published. Required fields are marked *