ರಾಧ ಕಲ್ಯಾಣ ಸೀರಿಯಲ್ ನ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದ ಚೈತ್ರ ರೈ ಧಾರಾವಾಹಿ ಯಲ್ಲಿ ವಿಶಾಖ ಎಂದೇ ಖ್ಯಾತಿಯನ್ನು ಪಡೆದಿದ್ದ ರು. ಕನ್ನಡ ಹಾಗೂ ತೆಲುಗು ಕಿರುತೆರೆಯ ಬೇಡಿಕೆಯ ನಟಿ ಚೈತ್ರಾ ರೈ ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿದ್ದಾರೆ ರಾಧಾ ಕಲ್ಯಾಣ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ಚೈತ್ರಾ ರೈ ಕುಸುಮಾಂಜಲಿ, ಬೊಂಬೆಯಾಟವಯ್ಯ, ಬಣ್ಣದ ಬುಗುರಿ, ಪೌರ್ಣಮಿ, ನಾಗಮಣಿ ಹಾಗೂ ಯುಗಾದಿ ಧಾರಾವಾ ಹಿಯಲ್ಲಿ ಅಭಿನಯಿಸಿದ್ದಾರೆ ಕನ್ನಡಕ್ಕಿಂತಲು ತೆಲುಗಿನಲ್ಲಿ ಇವರಿಗೆ ಬೇಡಿಕೆ ಹೆಚ್ಚಾಗಿದೆ. ಚೈತ್ರಾ ಹಾಗೂ ಪ್ರಸನ್ನ ಶೆಟ್ಟಿ ಕುಟುಂಬಕ್ಕೆ ಹೊಸ ಅತಿಥಿ ಆಗಮನಕ್ಕೆ ಕಾಯುತ್ತಿದ್ದಾರೆ.

ನಾನು ಹೊಸ ಅತಿಥಿ ಬರ ಮಾಡಿಕೊಳ್ಳಲು ರೆಡಿ ಎಂದು ಹೇಳುವ ಮೂಲಕ ಚೈತ್ರಾ ಪ್ರೆಗ್ನೆನ್ಸಿ ವಿಚಾರ ರಿವೀಲ್ ಮಾಡಿದ್ದರು. ನಮ್ಮ ಸಂಪ್ರದಾಯದ ಪ್ರಕಾರ ನಡೆದ ಸೀಮಂತ ಕಾರ್ಯಕ್ರಮ ನೆರವೇರಿಸಿ ಕೊಂಡಿದ್ದು ಕಡಿಮೆ ಜನ ಇದ್ದರೂ ನನ್ನ ಜೀವನದ ಮುಖ್ಯ ಸಂದರ್ಭ ದಲ್ಲಿ ಬೇಕಾದವರು ಇದ್ದರು ಎಂದು ಹೇಳಿಕೊಂಡಿದ್ದಾರೆ. ಚೈತ್ರ ರೈ ರವರು ತಮ್ಮ ಪ್ರೆಗ್ನೆನ್ಸಿಯ ಸವಿ ನೆನಪಿಗಾಗಿ ಫೋಟೋಶೂಟ್ ಮಾಡಿ ಸಿಕೊಂಡಿದ್ದು ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಂಪು ಬಣ್ಣದ ಗೌನ್ ತೊಟ್ಟು ಎಂದು ಫೋಟೋವನ್ನು ಹಂಚಿಕೊಂ ಡಿದ್ದಾರೆ ಹಾಗೆ ಇವರ ಸೀಮಂತ ಕಾರ್ಯಕ್ರಮದಲ್ಲಿ ಹಳದಿ ಬಣ್ಣದ ಸೀರೆಯುಟ್ಟು ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಡೌಟ್‌ನಲ್ಲಿ ಇದ್ದಾಗ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಿ, ವೃತ್ತಿ ಬದುಕಿನ ಬಗ್ಗೆ ಚಿಂತಿಸುವುದಕ್ಕೆ ಬಹಳ ಸಮಯ ಇರುತ್ತದೆ ಫ್ಯಾಮಿಲಿ ಮೊದಲು ಎಂದು ಹೇಳಿದ್ದಾರೆ.

By admin

Leave a Reply

Your email address will not be published. Required fields are marked *