ರಾತ್ರಿಯ ಕೊನೆಯ ಪ್ರಹರದ ನಂತರದ ಸಮಯವನ್ನು ಬ್ರಹ್ಮ ಮ ಹೂರ್ತದ ಎಂದು ಕರೆಯುತ್ತಾರೆ ಅಂದರೆ ಅಂದರೆ ಸೂರ್ಯೋದಯದ ಮೊದಲು ಬೆಳಗ್ಗೆ 4 ರಿಂದ 5;30 ಒಳಗೆ ಇರುವ ಸಮಯವನ್ನು ಬ್ರ ಹ್ಮ ಮುಹೂರ್ತ ಎಂದು ಕರೆಯುತ್ತಾರೆ. ಈ ಮುಹೂರ್ತವನ್ನು ಋಷಿ ಮುನಿಗಳು ವಿಶೇಷ ಮಹತ್ವ ನೀಡಿದ್ದಾರೆ ಅವರ ಪ್ರಕಾರ ಈ ಸಮಯ ನಿದ್ರೆಯ ತ್ಯಾಗಕ್ಕೆ ಉತ್ತಮಯ ವಾಗಿದೆ. ಈ ಸಮಯದಲ್ಲಿ ಎಚ್ಚರ ಗೊಳ್ಳಬೇಕು ಈ ಸಮಯದಲ್ಲಿ ಮಲಗಬಾರದು ಈ ಸಮಯದಲ್ಲಿ ಶುದ್ಧವಾದ ಗಾಳಿ ಆರೋಗ್ಯಕ್ಕೆ ಕಾರಣವಾಗುತ್ತದೆ ಮತ್ತು ಬ್ರಹ್ಮ ಮು ಹೂರ್ತದಲ್ಲಿ ಯಾರು ಮಲಗುತ್ತಾರೆ ಅವರು ತಮ್ಮ ಸದ್ಗುಣವನ್ನು ನಾಶ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಈ ಸಮಯ ದೇವರ ಭಕ್ತಿ ಉತ್ತಮವಾದ ಸಮಯ,

ಮನುಷ್ಯನು ಈ ಸಮಯದಲ್ಲಿ ಎಚ್ಚರ ಇರುವುದರಿಂದ ಆಂತರಿಕವಾಗಿ ಸೌಂದರ್ಯವನ್ನು ಮತ್ತು ಬುದ್ಧಿವಂತಿಕೆ, ಆರೋಗ್ಯ ಮತ್ತು ಅವನ ಮನಸ್ಸಿನಲ್ಲಿ ಎಲ್ಲವೂ ಶಾಂತವಾಗಿರುತ್ತದೆ ಹಾಗೂ ಮನುಷ್ಯನ ಮನಸ್ಸು ಶುದ್ಧವಾಗಿರುತ್ತದೆ ದಿನವಿಡಿ ಸ್ಪೂರ್ತಿ ದಾಯಕವಾಗಿರುತ್ತಾನೆ. ವಾಲ್ಮೀಕಿ ರಾಮಾಯಣದ ಪ್ರಕಾರ ಹನುಮ ದೇವರು ಅಶೋಕ ವಾಟಿವವನ್ನು ತಲುಪಿದರು ಅಲ್ಲಿ ಅವರ ಮಾತೆ ಸೀತಾದೇವಿಗೆ ವೇದ ಮಹತ್ವಗಳನ್ನು ಕೇಳಿದರು. ಈ ಸಮಯದಲ್ಲಿ ಪ್ರಾಣಿ ಪಕ್ಷಿಗಳು ಎಚ್ಚರಗೊಳ್ಳುತ್ತವೆ ಅದೇ ಸಮಯದಲ್ಲಿ ಕಮಲದ ಹೂವು ಹರಳುತ್ತದೆ, ಕೋಳಿಗಳು ಕೂಗುತ್ತವೆ ಹಾಗೆ ಪ್ರಕೃತಿಯು ಚೈತನ್ಯವನ್ನು ತುಂಬಿಕೊಂಡಿರುತ್ತದೆ ಈ ಸಮಯದಲ್ಲಿ ಓಡಾಡುವುದರಿಂದ ಯೋಗ, ಧ್ಯಾನ ಮಾಡುವ ವ್ಯಕ್ತಿ ತನ್ನ ದೇಹದಲ್ಲಿ ಜೀವ ಉಳಿಸುವ ಸಂಜೀವಿನಿ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬಹುದು. ಈ ಸಮಯದಲ್ಲಿ ಹರಿಯುವ ಗಾಳಿಯನ್ನು ಅಮೃತ ಎಂದೇ ಕರೆಯ ಬಹುದು.

By admin

Leave a Reply

Your email address will not be published. Required fields are marked *