ನಿಂಬೆಹಣ್ಣಿನ ಹಣ್ಣು ದುರ್ಗದೇವಿಗೆ ಬಹಳ ಪ್ರಿಯವಾದದ್ದು ಎಂದು ಹೇಳಲಾಗುತ್ತದೆ ಸಂಸಾರದಲ್ಲಿ ಯಾವಾಗಲೂ ಜಗಳ ಹಣಕಾಸಿನ ತೊಂ ದರೆ ಆರೋಗ್ಯ ಸಮಸ್ಯೆ, ಮನೆಯಲ್ಲಿ ವಾಸ್ತು ದೋಷ, ಕಾಳಸರ್ಪ ದೋಷ, ವ್ಯವಹಾರದಲ್ಲಿ ತೊಂದರೆ ಶತ್ರುಗಳ ಕಾಟ ಹೆಚ್ಚಾಗಿದ್ದರೆ ಮ ದುವೆಯಾಗದಿದ್ದರೆk ನಿಂಬೆಹಣ್ಣಿನ ದೀಪವನ್ನು ಹಚ್ಚುವುದರಿಂದ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಅನ್ನೋದು ಭಕ್ತರ ನಂಬಿಕೆ. ನಿಂಬೆಹಣ್ಣಿನ ದೀಪವನ್ನು ಪಾರ್ವತಿ ಸ್ವರೂಪರಾದ ಅಂಬಭವಾನಿ, ಕಾ ಳಿಕಾದೇವಿ, ಚೌಡೇಶ್ವರಿ, ಮಾರಿ ಯಮ್ಮ, ದುರ್ಗಾದೇವಿ ಹಾಗೂ ಶಕ್ತಿ ದೇವಸ್ಥಾನಗಳಲ್ಲಿ ಹಚ್ಚಬೇಕು ನಿಂಬೆಹಣ್ಣಿನ ದೀಪವನ್ನು ಶುಕ್ರವಾರ 10.30 ಯಿಂದ 12ರ ಒಳಗೆ ಹಚ್ಚಬಹುದು ಶುಕ್ರವಾರ ದೀಪವನ್ನು ಹಚ್ಚುವುದು ಬಹಳ ಶ್ರೇಷ್ಠ ಇದು ಸತ್ವ ಗುಣಗಳಿಂದ ಕೂಡಿರುತ್ತದೆ. ಮತ್ತು ಹೆಚ್ಚಿನ ಫಲಗಳನ್ನು ಉಂಟುಮಾಡುತ್ತದೆ.

ನಿಂಬೆಹಣ್ಣಿನ ದೀಪ ಹಚ್ಚಲು ಮನೆಯಲ್ಲಿ ತಯಾರಿ ಮಾಡಿಕೊಂಡು ಹೋಗಬಾರದು ನಿಂಬೆ ಹಣ್ಣನ್ನು ತೆಗೆದುಕೊಂಡು ಹೋಗಿ ದೇವಿಯ ಪಾದದ ಕೆಳಗೆ ಇಟ್ಟು ಪೂಜಿಸಿ ನಂತರ ಎರಡು ಹೋಳಾಗಿ ಮಾಡಿ ಅದರಿಂದ ಬರುವಂತಹ ರಸವನ್ನು ಎಲ್ಲಿಯೂ ಬಿಸಾಡದೆ ಯಾವುದಾದ ರೂ ಹಸಿರು ಗಿಡದ ಬುಡಕ್ಕೆ ಹಾಕಿ ನಂತರ ನಂತರ ಸಿಪ್ಪೆ ತೆಗೆದು ಕೊಂಡು ಇದಕ್ಕೆ ಶ್ರೀಗಂಧ ಅರಿಶಿನ ಕುಂಕುಮ ಇಟ್ಟು ದೀಪವನ್ನು ತಯಾರಿಸಿಕೊಳ್ಳಬೇಕು ಈ ದೀಪ ಹಚ್ಚುವಾಗ ಬತ್ತಿಯನ್ನು ತುಪ್ಪದಲ್ಲಿ ನೆನೆಸಿ ನಂತರ ದೀಪವನ್ನು ಹಚ್ಚಬೇಕು. ದೀಪವನ್ನು ಹಾಗೆ ಇಡಲೇ ಬಾರದು ಒಂದು ತಟ್ಟೆಯಲ್ಲಿ ಕೆಂಪು ನೀರು ಮಾಡಿಕೊಂಡು ನಂತರ ದೀಪವನ್ನು ಅದರ ಮೇಲೆ ಇಟ್ಟು ದೀಪ ಬೆಳಗಿ ನಂತರ ದೇವಾಲಯದ ಮುಂದೆ ಇಟ್ಟು ಸಂಕಲ್ಪ ಮಾಡಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *