ಶ್ರೀ ವರಮಹಾಲಕ್ಷ್ಮಿ ಹಬ್ಬದ ಬಗ್ಗೆ, ಪೂಜಾ ವಿಧಿ ವಿಧಾನಗಳ ಬಗ್ಗೆ ಅನುಷ್ಠಾನದ ಬಗ್ಗೆ ಈಗಲೇ ತಿಳಿದುಕೊಳ್ಳಿ..ಜಗನ್ಮಾತೆ ಮಹಾಲಕ್ಷ್ಮಿ ದೇವಿ ಅಲಂಕಾರ ಹೇಗೆ ಮಾಡುವುದು..? ತಪ್ಪದೇ ಈ ವಿಡಿಯೋ ನೋಡಿ » Karnataka's Best News Portal

ಶ್ರೀ ವರಮಹಾಲಕ್ಷ್ಮಿ ಹಬ್ಬದ ಬಗ್ಗೆ, ಪೂಜಾ ವಿಧಿ ವಿಧಾನಗಳ ಬಗ್ಗೆ ಅನುಷ್ಠಾನದ ಬಗ್ಗೆ ಈಗಲೇ ತಿಳಿದುಕೊಳ್ಳಿ..ಜಗನ್ಮಾತೆ ಮಹಾಲಕ್ಷ್ಮಿ ದೇವಿ ಅಲಂಕಾರ ಹೇಗೆ ಮಾಡುವುದು..? ತಪ್ಪದೇ ಈ ವಿಡಿಯೋ ನೋಡಿ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಎಲ್ಲಾ ಹಬ್ಬಗಳು ಸಹ ತನ್ನದೇ ಆದ ಮಹತ್ವವನ್ನು ಹೊಂದಿದೆ ಅದರಲ್ಲಿ ವರಮಹಾಲಕ್ಷ್ಮಿ ಹಬ್ಬ ವಿಶೇಷವಾದ ದ್ದು ದೇವಿಯ ಕಳಶ ಮತ್ತು ವಿಗ್ರಹಗಳಲ್ಲಿ ಆವಾಹನೆ ಮಾಡಿ ಪೂಜಿ ಸುವವರು ಕಳಸದಲ್ಲಿ ಅಕ್ಕಿ ತುಂಬಿಸಿ ಕರ್ಜೂರ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ ಮತ್ತು ಕೆಲವು ಹಣ್ಣುಗಳನ್ನು ಇರಿಸುವರು ಈ ಕಳಸಕ್ಕೆ ಲಕ್ಷ್ಮೀ ಕಳಸ ಎನ್ನುತ್ತಾರೆ. ಅದರ ಮೇಲೆ ಚಿನ್ನ ಅಥವಾ ಬೆಳ್ಳಿಯ ತಯಾರಿಸಿದ ಮುಖವಾಡವನ್ನಿಟ್ಟು ಅಥವಾ ತೆಂಗಿನಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು, ಕಣ್ಣು, ಕಿವಿ ಮಾಡಿ ಒಡವೆಗಳನ್ನು ಏರಿಸಿ ಸೀರೆ ಉಡಿಸಿ ಅಲಂಕಾರ ಮಾಡಲಾಗುತ್ತದೆ. ಈ ಪೂಜೆಯಲ್ಲಿ ವಿಶೇಷವಾದ ದಾರಗಳಿಗೆ ಪೂಜೆಯನ್ನು ಸಲ್ಲಿಸುವರು ಹೊಸದಾದ 12 ದಾರಗಳಿಗೆ 12 ಗಂಟುಗಳನ್ನು ಹಾಕಿ ಅದನ್ನು ಸ್ವಲ್ಪ ನೀರಿನಲ್ಲಿ ಸೇರಿಸಿ ಅರಿಸಿಣ ಹಚ್ಚಿ ದೇವಿಯ ಪಕ್ಕದಲ್ಲಿರಿಸಿ ಆರಾಧಿಸಿ ಪೂಜಿಸುವರು.

WhatsApp Group Join Now
Telegram Group Join Now

ಈ ದಾರಗಳಿಗೆ ಅರಿಶಿನ, ಕುಂಕುಮ, ಹೂವು, ಪತ್ರೆಗಳಿಂದ ಪೂಜಿ ಸಿ, ನೈವೇದ್ಯ ಮಾಡುವರು. ಹನ್ನೆರಡು ಹೆಸರುಗಳನ್ನು ಉಚ್ಚರಿಸಿ ದ್ವಾದಶ ನಾಮಾವಳಿಯೆಂದು ಪೂಜಿಸುವರು. ಆ ನಾಮಾವಳಿಗಳು ಹೀಗಿವೆ ರಮೆ, ಸರ್ವಮಂಗಳೆ, ಕಮಲವಾಸಿನೆ, ಮನ್ಮಥಜನನಿ, ವಿಷ್ಣುವಲ್ಲಭೆ, ಕ್ಷೀರಾಬ್ಧಿಕನ್ಯಕೆ, ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ, ತುಷ್ಟೆ ಮತ್ತು ವರಲಕ್ಷ್ಮಿ. ನಂತರ ಲಕ್ಷ್ಮಿ 12 ಹೆಸರು ಗಳನ್ನು ಪಠಿಸಿದ ನಂತರ ಲಕ್ಷ್ಮಿಗೆ ನೈವೇದ್ಯ ಸಮರ್ಪಿಸಿ ಆ ದಾರವನ್ನು ನಿಮ್ಮ ಕೈಗಳಿಗೆ ಕಟ್ಟಿಸಿ ಕೊಳ್ಳಬೇಕು. ಈ ರೀತಿಯಾಗಿ ಲಕ್ಷ್ಮಿಯ ಪೂಜೆ ಮಾಡಬೇಕು ಲಕ್ಷ್ಮಿ ಅಲಂಕಾರ ಹೇಗೆ ಮಾಡುವುದು ಎಂಬುದನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

[irp]


crossorigin="anonymous">