ಮಕ್ಕಳು ಏನೇ ಮಾಡಿದರೂ ಚೆಂದ ಮಕ್ಕಳ ಆಟ ಪಾಠ ಆಡುವುದ ನ್ನು ನೋಡಿ ಪೋಷಕರು ತುಂಬಾ ಖುಷಿ ಪಡುತ್ತಾರೆ ಮಕ್ಕಳ ಮನಸ್ಸು ಎಷ್ಟು ಮುಗ್ಧ ಎಂದರೆ ಯಾವುದೇ ಕಲ್ಮಶಗಳು ಇರುವುದಿಲ್ಲ. ಮಕ್ಕಳ ತೊದಲು ನುಡಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಅದರಲ್ಲಿ ಯೂ ಚಿಕ್ಕ ಮಕ್ಕಳಲ್ಲಿ ಗ್ರಹಿಕಾ ಶಕ್ತಿ ಹೆಚ್ಚಾಗಿರುತ್ತದೆ ಅವರು ಏನನ್ನಾ ದರೂ ಹೊಸದಾಗಿ ನೋಡಿದರೆ ಅದನ್ನು ತಿಳಿಯಬೇಕು ಕಲಿತುಕೊಳ್ಳ ಬೇಕು ಎನ್ನುವ ಹಂಬಲವನ್ನು ಹೊಂದಿರುತ್ತಾರೆ. ಮಕ್ಕಳಿಗೆ ಮಕ್ಕಳನ್ನು ಕಂಡರೆ ಹೆಚ್ಚಿನ ಪ್ರೀತಿ ಅದರಲ್ಲಿಯೂ ಸಹ ಅಣ್ಣ-ತಂಗಿ, ಅಕ್ಕ-ತಮ್ಮ ಅಣ್ಣ-ತಮ್ಮ, ಅಕ್ಕ-ತಂಗಿ ಈ ರೀತಿಯ ಬಂಧಗಳು ಮನೆಯಲ್ಲಿ ಇದ್ದರೆ ಅವರಲ್ಲಿ ಕಲಿಕಾ ಶಕ್ತಿ ಹಾಗೂ ಅದನ್ನು ವ್ಯಕ್ತಪಡಿಸುವ ರೀತಿ ವಿಭಿನ್ನ ವಾಗಿರುತ್ತದೆ.
ಅಕ್ಕನನ್ನು ಎರಡನೇ ತಾಯಿ ಎನ್ನುವ ರೀತಿಯಲ್ಲಿ ನಾವು ಕಾಣುತ್ತೇವೆ ಅದೇ ರೀತಿಯಾಗಿ ಇಲ್ಲೊಂದು ವಿಡಿಯೋ ವೈರಲ್ ಆಗಿದೆ ಅಕ್ಕ ತನ್ನ ತಂಗಿಯನ್ನು ಲಾಲಿ ಹಾಡು ಹೇಳಿ ಮಲಗಿಸುತ್ತಿರುವ ವಿಡಿಯೋ. ಹೌ ದು ಇಲ್ಲೊಂದು ಪುಟ್ಟ ಮೂರು ವರ್ಷದ ಬಾಲೆ ತನ್ನ ತಂಗಿಯನ್ನು ಜೋಗುಳದ ಹಾಡನ್ನು ಹೇಳಿ ಮಲಗಿಸುತ್ತಿದೆ ಎಷ್ಟು ಮುದ್ದಾಗಿ ಜೋ ಗುಳ ಪದವನ್ನು ಕಲಿತಿದೆ ಎಂದರೆ ಅದರಲ್ಲಿ ಗ್ರಹಿಕಾ ಶಕ್ತಿ ಎಷ್ಟಿರಬ ಹುದು ಎಂದು ನಾವು ಊಹೆ ಸಹ ಮಾಡಿಕೊಳ್ಳಲು ಸಾಧ್ಯವಾಗುವು ದಿಲ್ಲ. ಮನೆಯಲ್ಲಿ ಹಿರಿಯರು ಹೇಳುತ್ತಿದ್ದಂತಹ ಹಾಡನ್ನು ಈ ಹುಡುಗಿ ಕೇಳಿಸಿಕೊಂಡೆ ಕಲಿತುಕೊಂಡಿದ್ದೆ ಈ ಹಾಡನ್ನು ಹೇಳುವ ಮೂಲಕ ತನ್ನ ಪುಟ್ಟ ತಂಗಿಯನ್ನು ಎಷ್ಟು ಮುದ್ದಾಗಿ ಮಲಗಿಸಿದೆ ಎಂದರೆ ನೋಡಿದರೆ ದೃಷ್ಟಿ ಆಗುವಂತಿದೆ ಈ ಮುದ್ದಾದ ಅಕ್ಕ-ತಂಗಿಯ ವಿಡಿಯೋವನ್ನು ನೋಡಲು ಈ ಮೇಲಿನ ವಿಡಿಯೋವನ್ನು ಕ್ಲಿಕ್ ಮಾಡಿ.