ಇವರ ಹೆಸರು ಬೀನಾ ದೇವಿ ಬಿಹಾರ್ ರಾಜ್ಯದ ಇವರು ಎಲ್ಲರಂತೆ ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟರು ವ್ಯವಸಾಯ ಮಾಡಿ ಬದುಕುತ್ತಿದ್ದು ಗಂಡನ ಕುಟುಂಬ ದುಡಿದು ತಿನ್ನುವುದಕ್ಕೆ ಸಾಕಾಗುತ್ತಿತ್ತು. ಬೀನಾ ದೇವಿ ಅವರಿಗೆ ಮಕ್ಕಳಾದ ಮೇಲೆ ಅವರ ಜೀವನ ಕೂಡ ನನ್ನಂತೆ ಆಗಬಾರದು ಅವರಿಗೆ ಉತ್ತಮ ಜೀವನ ರೂಪಿಸಬೇಕು ಅನ್ನೋ ಆಲೋಚನೆ ಬೀನಾ ದೇವಿ ಅವರ ಮನಸ್ಸಿನಲ್ಲಿ ಮೂಡಿತು ಅದೇ ಸಮಯಕ್ಕೆ ವ್ಯವಸ್ಥಿತ ವ್ಯವಸಾಯ ಪದ್ಧತಿ ಮಾಡುವ ದಿಸೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ ಕೊಡಲಾಗುತ್ತಿತ್ತು ಟ್ರೈನಿಂಗ್ ಅಟೆಂ ಡ್ ಮಾಡಿದ ಬೀನಾ ದೇವಿ ಅವರಿಗೆ ಹಣಬೆ ಸಹಜ ಬೆಳೆಯುವುದು ಹೇಗೆ ಎಂದು ಹೇಳಿಕೊಟ್ಟರು.
ಕೊನೆಗೆ ಕುಟುಂಬ ಪದ್ಧತಿಗಳನ್ನು ದಾಟಿ ಇವರು ಅಣಬೆ ಬೆಳೆಯಲು ಮುಂದಾದರು ಮನೆಯ ಪಕ್ಕದಲ್ಲಿದ್ದ ಗುಡಿಸಿಲಿನಲ್ಲಿ ಆರಂಭಿಸಿ ಮೊದ ಲು 1 ಕೆಜಿ ಅಣಬೆ ಬೆಳೆದರು ನಂತರ ಬೀನಾ ದೇವಿಅವರಿಗೆ ಧೈರ್ಯ ಬಂತು ನಂತರ ನೂರಾರು ಕೆಜಿ ಅಣಬೆ ಬೆಳೆಯಲು ಆರಂಭಿಸಿದ ಇವರು ಅಂಗಡಿ ಹಾಗೂ ಮನೆಯ ಮುಂದೆಯೇ ಮಾರಾಟ ಮಾಡಲು ಮುಂದಾದರು. ಜೊತೆಗೆ ಇವರ ಬಳಿ ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಸಹಜ ಪದ್ಧತಿಯಲ್ಲಿ ವ್ಯವಸಾಯ ಆರಂಭಿಸಿದರು ಕೊನೆಗೆ ಬೀನಾ ದೇವಿ ಇದರಲ್ಲಿ ಯಶಸ್ವಿ ಆದರು ಈಗ ಅಣಬೆ ಮತ್ತು ಕೃಷಿ ಇಂದ ತಿಂಗಳಿಗೆ ಒಂದು ಲಕ್ಷ ಲಾಭ ಗಳಿಸುತ್ತಿದ್ದಾರೆ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿರುವ ಇವರು ಈಗ ಸುತ್ತಮುತ್ತಲಿನ ಹಳ್ಳಿಯ ಮಹಿಳೆಯರಿಗೂ ಸಹ ಅಣಬೆಯ ಸಹಜ ಪದ್ಧತಿಯನ್ನು ಹೇಳಿಕೊಡುತ್ತಿ ದ್ದಾರೆ.