ಈ ದುರ್ಘಟನೆ ನಡೆದಿರುವುದು ಬೆಂಗಳೂರು ಗ್ರಾಮಾಂತರದ ನೆಲಮಂ ಗಲದ ಬಿನ್ನಮಂಗಲ ದಲ್ಲಿ ಘಟನೆ ನಡೆದಿದೆ. ಅಣ್ಣನ ಹೆಸರು ವೇಣು ಗೋಪಾಲ್ ಈತನಿಗೆ 22 ವರ್ಷ ಕಾವ್ಯ ಎಂಬ ತಂಗಿಗೆ 20ವರ್ಷ ಇ ವರು ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ ಎಸ್ ಪುರದವರು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಓದಿಗೋಸ್ಕರ ಹುಟ್ಟೂ ರನ್ನು ಬಿಟ್ಟು ಬೆಂಗಳೂರಿಗೆ ಬರುತ್ತಾರೆ. ಹನುಮಂತರಾಯಪ್ಪ ಎಂಬ ಹೆಸರಿಗೆ ಸೇರಿದವರ ಮನೆಯಲ್ಲಿ ವಾಸವಿರುತ್ತಾರೆ ಆ ದಿನ ಸೋಮ ವಾರ ರಾತ್ರಿ ಊಟ ಮುಗಿಸಿಕೊಂಡು ತಮ್ಮ ಸ್ನೇಹಿತ ಸಂಪ್ರತ್ ಎಂ ಬುವ ಹುಡುಗನ ಮನೆಯಲ್ಲಿ ಮಲಗಿರುತ್ತಾರೆ ವಿಧಿ ಹೇಗೆ ಆಟವಾ ಡುತ್ತದೆ ಎಂದರೆ ಯಾವಾಗ ಎಲ್ಲಿ ಬೇಕಾದರೂ ನಮ್ಮ ಪ್ರಾಣ ಹೋಗ ಬಹುದು.
ಇವರು ಮಲಗಿದ್ದಂತಹ ಮನೆಯ ಮೇಲ್ಚಾವಣಿ ಶೀಟಿನದಾಗಿರುತ್ತದೆ ಅ ದರ ಪಕ್ಕದ ನಿವೇಶನದ ಕಾಂಪೌಂಡ್ ಗೋಡೆ ಬಿರುಕು ಬಿಟ್ಟಿರುತ್ತದೆ ಇತ್ತೀಚಿಗೆ ಭಾರಿ ಧಾರಾಕಾರ ಮಳೆಯಿಂದ ಅನೇಕ ಅನಾಹುತಗಳು ಸಂ ಭ ವಿಸಿತ್ತಿದೆ ಅದೇ ರೀತಿ ಅತೀವ ಮಳೆಯಿಂದ ಕಾಂಪೌಂಡ್ ಗೋಡೆ ಕೂಡ ಇವರು ಮಲಗಿದ್ದ ಮನೆಯ ಮೇಲೆ ಬಿದ್ದು ಪೂರ್ತಿ ನೆಲಸಮ ವಾಗುತ್ತದೆ ಇವರ ಶವವನ್ನು ಎತ್ತಲು ಸಹ ತುಂಬಾ ಕಷ್ಟಪಡು ತ್ತಾರೆ ಅಷ್ಟರಮಟ್ಟಿಗೆ ಮನೆಯು ಚೂರುಚೂರಾಗಿದೆ ಇಬ್ಬರು ಸ್ಥಳದಲ್ಲೇ ಸಾವ ನ್ನಪ್ಪಿದ್ದಾರೆ ಅವರ ಸ್ನೇಹಿತನಿಗೆ ತುಂಬಾ ಗಾಯವಾಗಿದೆ. ತಮ್ಮ ಕುಟುಂ ಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಉತ್ತಮ ಭವಿಷ್ಯ ಕಟ್ಟಿಕೊ ಳ್ಳ ಬೇಕು ಎಂದು ಅದೆಷ್ಟೋ ಕನಸುಗಳನ್ನು ಹೊತ್ತುಕೊಂಡು ಬಂದಂ ತಹ ಈ ಅಣ್ಣ ತಂಗಿಯ ಬಾಳಲ್ಲಿ ವಿಧಿಯು ತನ್ನ ಆಟವನ್ನು ಜಯಿಸಿ ಬಿಟ್ಟಿದೆ ಪ್ರಕೃತಿಯ ವಿಕೋಪದ ಮುಂದೆ ಯಾರೂ ಸಹ ನಿಲ್ಲಲು ಸಾಧ್ಯ ವಿಲ್ಲ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.