ಬಹಳ ಮುಖ್ಯವಾಗಿ 9ನೇ ಮನೆಯಲ್ಲಿ ಭಾಗ್ಯಸ್ಥಾನದಲ್ಲಿ ಕುಜ, ಸೂ ರ್ಯ, ಬುಧ ಈ ಮೂರು ನಿಮಗೆ ಅದ್ಭುತವಾದಂತಹ ಸುಯೋಗ ಕೊಡುತ್ತದೆ. 9ನೇ ಮನೆಯನ್ನು ಭಾಗ್ಯ ಸ್ಥಾನವೆಂದು ಕರೆಯುತ್ತಾರೆ ವಿದ್ಯಾ ಭಾಗ್ಯ, ವಿವಾಹ ಭಾಗ್ಯ, ವಾಹನ ಭಾಗ್ಯ, ಆರೋಗ್ಯ ಭಾಗ್ಯ, ಗೃಹ ಭಾಗ್ಯ ಈ ರೀತಿಯ ಯಾವುದೇ ಸುಖ ಭೋಗ ಭಾಗ್ಯಗಳ ಐಶ್ವರ್ಯಗಳು ಬೇಕು ಎಂದರೆ ಒಂಬತ್ತನೆ ಚೆನ್ನಾಗಿರಬೇಕು ನಿಮ್ಮ ತಂದೆಯ ಆಶೀರ್ವಾದ ಚೆನ್ನಾಗಿರುತ್ತದೆ ಆದರೆ ರಾಹು, ಕೇತು, ಶನಿ ಈ ತರಹದ ಗ್ರಹಗಳು ಅಲ್ಲಿ ಇರಬಾರದು. ಹಾಗೆ ಈ ತಿಂಗಳಲ್ಲಿ ಧನಸ್ಸು ರಾಶಿಯವರಿಗೆ ರಾಹು, ಕೇತು ಯಾವುದು ಕೂಡ 9ನೇ ಮನೆಯಲ್ಲಿ ಇಲ್ಲ ಬುಧ 9ನೇ ಮನೆಯಲ್ಲಿ ಇದ್ದಾನೆ ಅಂದರೆ ವ್ಯಾಪಾರ ಅಭಿವೃದ್ಧಿ ಕೊಡುತ್ತಾನೆ ಪಾರ್ಟ್ನರ್ಶಿಪ್ ಬಿಸಿನೆಸ್ ಇರಬಹುದು ಸೋಲ ಬಿಸಿನೆಸ್ ಇರಬಹುದು ವಿದೇಶದಲ್ಲಿ ವಿದ್ಯಾಭ್ಯಾಸ, ವಿದೇಶದಲ್ಲಿ ಉದ್ಯೋಗ, ವ್ಯಾಪಾರ, ವ್ಯವಹಾರ ಇದೆಲ್ಲವೂ ಸಕ್ಸಸ್ ಮಾಡುತ್ತದೆ.
ಯಾವುದೇ ರೀತಿಯ ಅಡೆತಡೆ ಕನ್ಫ್ಯೂಷನ್ ಇರುವುದಿಲ್ಲ. ಭಾಗ್ಯದಲ್ಲಿ ಕುಜ ಇದ್ದರೆ ಸೈಟ್ ತೆಗೆದುಕೊಳ್ಳುವ ಯೋಗ ಮನೆ ತೆಗೆದುಕೊಳ್ಳುವ ಯೋಗ ಈ ತಿಂಗಳಲ್ಲಿ ನಡೆಯುತ್ತದೆ. ಆದರೆ ಶುಕ್ರ ಮಾತ್ರ ನೀಚ ಸ್ಥಾನದಲ್ಲಿದ್ದ ಇದಾನೆ ಇದೊಂದು ನೆಗೇಟಿವ್ ಫಲ ಎಂದು ಹೇಳ ಬಹುದು. ಎಲ್ಲ ಮಾಡುತ್ತೀರಾ ಆದರೆ ದುಡ್ಡು ಉಳಿಸಲು ಲಾಭಗ ಳಿಸಲು ಸ್ವಲ್ಪ ಕಷ್ಟ ಆಗುತ್ತದೆ. ಕೈಯಲ್ಲಿ ದುಡ್ಡು ಇಟ್ಟುಕೊಳ್ಳಬೇಡಿ ಯಾವುದಾದರೂ ವ್ಯಾಪಾರ, ವ್ಯವಹಾರ ಭೂಮಿಗೆ ಹಾಕಿ ಅಥವಾ ಬಂಗಾರ ತೆಗೆದುಕೊಳ್ಳಿ ಕೈಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಆಗಸ್ಟ್ ತಿಂಗಳಲ್ಲಿ ವಿನಾಕಾರಣ ಖರ್ಚಾಗುತ್ತದೆ ಅನಾವಶ್ಯಕ ಖರ್ಚು ಮಾಡ ಬೇಡಿ ಕೈಯಲ್ಲಿ ದುಡ್ಡನ್ನು ಇಟ್ಟುಕೊಳ್ಳಬೇಡಿ ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ವಿಡಿಯೋವನ್ನು ನೋಡಿ.