ಈ ಯೋಜನೆಯಡಿ ಪರಿಶಿಷ್ಟ ಪಂಗಡ ಭೂರಹಿತ ಕೃಷಿ ಕಾರ್ಮಿಕರು ಮಹಿಳೆಯರನ್ನು ಭೂ ಒಡೆಯರನ್ನಾಗಿ ಮಾಡುವ ಉದ್ದೇಶದಿಂದ ಸದರಿ ಯೋಜನೆಯಡಿ ನಿಗದಿಪಡಿಸಿದ ಘಟಕದಲ್ಲಿ ಎಷ್ಟು ವಿಸ್ತೀರ್ಣದ ಜಮೀ ನನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿರದ ಭೂ ಮಾಲೀಕರಿಂದ ಕರಿದಿಸಿ ನೇರವಾಗಿ ಫಲಾನುಭವಿಗಳಿಗೆ ನೊಂದಾವಣಿ ಮಾಡಿಕೊಡಲಾಗುವುದು. ಬೆಂಗಳೂರು ನಗರ ಗ್ರಾಮಾಂತರ, ರಾಮ ನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸೀಮಿತಗೊಂಡಂತೆ ಯೋಜ ನೆಯಡಿ ಘಟಕ ವೆಚ್ಚವನ್ನು ರೂ 15 ಲಕ್ಷದಿಂದ 20 ಲಕ್ಷಗಳಿಗೆ ಹೆಚ್ಚಿಸಲಾಗಿದೆ ಉಳಿದ ಜಿಲ್ಲೆಗಳಿಗೆ ಘಟಕ ವೆಚ್ಚವನ್ನು ರೂ 15 ಲಕ್ಷ ಗಳಿದ್ದು ಇದರಲ್ಲಿ ಸಹಾಯಧನ ಮತ್ತು ಅವಧಿ ಸಾಲ 50 ಪರ್ಸೆಂಟ್ ಅವಧಿ ಅನುಪಾತದಲ್ಲಿರುತ್ತದೆ.
ಅವಧಿ ಸಾಲಕ್ಕೆ ವಾರ್ಷಿಕ ಶೇ 6 ದರದಲ್ಲಿ ಬಡ್ಡಿ ವಿಧಿಸಲಾಗುವುದು. ಸಾಲ ಮತ್ತು ಬಡ್ಡಿಯನ್ನು 10 ವರ್ಷಗಳ ಅವಧಿಯಲ್ಲಿ ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ. ಇದು ಬಹಳ ಉತ್ತಮವಾದ ಸ್ಕೀಮ್ ನಿಮಗೆ 15ರಿಂದ 20 ಲಕ್ಷದವರೆಗೆ ಜಮೀನು ಖರೀದಿ ಮಾಡಲು ಸಾಲ ನೀಡಲಾಗುವುದು ಅದರಲ್ಲಿದೆ 50% ಸಬ್ಸಿಡಿ ಇದೆ ನೀವು 15 ಲಕ್ಷಕ್ಕೆ ಜಮೀನು ಖರೀದಿ ಮಾಡಿದರೆ ನಿಮಗೆ 7,50000 ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ ಹಾಗು ಉಳಿದ 750000 ರೂಪಾಯಿಗಳಿಗೆ ನೀವು 10 ವರ್ಷದವರೆಗೆ ಈ 750000 ರೂಪಾಯಿಯನ್ನು ರೆಪೇಮೆಂಟ್ ಮಾಡಬಹುದಾಗಿದೆ. ಇದಕ್ಕೆ ಕೇವಲ 6 ಪರ್ಸೆಂಟ್ ಬಡ್ಡಿ ಮಾತ್ರ ಇರುತ್ತದೆ ಇದರ ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋವನ್ನು ನೋಡಿ